250 ಗ್ರಾಂ ಚಿನ್ನ 20 ಲಕ್ಷ ಖರ್ಚು ಮಾಡಿ ಮಗಳ ಮದುವೆ ಮಾಡಿಸಿದ ಒಂದೇ ಒಂದು ವರ್ಷಕ್ಕೆ ಗಂಡನ ಮನೆಯಲ್ಲಿ ಮಗಳ ಪರಿಸ್ಥಿತಿ ಏನಾಯ್ತು ನೋಡಿ.. ಪಾಪ ಅನಿಸುತ್ತೆ!!

ವೈವಾಹಿಕ ಜೀವನದಲ್ಲಿ ಮನಸ್ತಾಪ ಹಾಗೂ ಭಿನ್ನಾಭಿಪ್ರಾಯಗಳು ಮೂಡುವುದು ಸಹಜ. ಆದರೆ ಸತಿ ಪತಿಯರಿಬ್ಬರೂ ಕೂಡ ಈ ಮನಸ್ತಾಪವನ್ನು ಬಗೆಹರಿಸಿಕೊಂಡರೆ ಜೀವನ ಸುಖಕರವಾಗಿರುತ್ತದೆ. ಆದರೆ ಸತಿ ಪತಿಗಳು ತಮ್ಮ ಸುಂದರ ಬದುಕು ಕಟ್ಟಿಕೊಳ್ಳುವ ಸಮಯದಲ್ಲಿ ಬದುಕನ್ನು ಹಾಳು ಮಾಡಿಕೊಂಡು ಬಿಡುತ್ತಾರೆ.

ಹೆಣ್ಣು ಹೆತ್ತವರಿಗೆ ಈ ವ’ರದಕ್ಷಿಣೆ ಎನ್ನುವ ಶಾಪ ಹಿಂದಿನಿಂದಲೂ ಇದೆ. ಆದರೆ ಕೆಲವೊಮ್ಮೆ ಈ ವ’ರದಕ್ಷಿಣೆ ಎನ್ನುವ ಮಹಾಮಾರಿಗೆ ಹೆಣ್ಣು ಮಕ್ಕಳು ಜೀವ ಕಳೆದುಕೊಳ್ಳುತ್ತಾರೆ. ಇಂತಹದ್ದೇ ಘಟನೆಯೊಂದು ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಸಮುದ್ರವಳ್ಳಿಯ ಹತ್ತಿರದಲ್ಲಿ ನಡೆದಿದೆ. ಮೂರು ತಿಂಗಳ ತುಂಬು ಗರ್ಭಿಣಿಯೊಬ್ಬಳು ವರದಕ್ಷಿಣೆಯ ಕಿರುಕು-ಳದಿಂದ ಅಂತ್ಯ ಕಂಡಿದ್ದಾಳೆ.

ಮೃ-ತಪಟ್ಟಿರುವ ಮಹಿಳೆ, ರೋಹಿಣಿ (23) ಎಂದು ಗುರುತಿಸಲಾಗಿದ್ದು,ಮಗಳು ಬದುಕನ್ನು ಮುಗಿಸಲು ಆಕೆಯ ಪತಿ, ಸುಮಂತ್ ಅವರೇ ಕಾರಣ ಎಂದು ಪೋಷಕರು ದೂರು ನೀಡಿದ್ದು, ಚೆನ್ನರಾಯಪಟ್ಟಣದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ಮೈಸೂರಿನ ಕೆ ಆರ್ ನಗರದ ಪಶುಪತಿ ಗ್ರಾಮದ ಕುಮಾರ್ ಹಾಗೂ ಸುಧಾ ದಂಪತಿಗಳು ತಮ್ಮ ಮಗಳಾದ ರೋಹಿಣಿಯನ್ನು ಅರಕಲಗೂಡು ತಾಲೂಕಿನ ಕಲ್ಲಹಳ್ಳಿ ಗ್ರಾಮದ ಸುಮಂತ ಎಂಬ ಹುಡುಗನ ಜೊತೆಗೆ ಮದುವೆ ಮಾಡಿದ್ದರು.

ಮೇ 28ರಂದು, ಕಲ್ಯಾಣ ಮಂಟಪವೊಂದರಲ್ಲಿ ಅದ್ದೂರಿಯಾಗಿ ಮದುವೆ ನಡೆದಿತ್ತು. ಮದುವೆಯ ವೇಳೆಯಲ್ಲಿ ಮಗಳಗೆ 250 ಗ್ರಾಂ ಚಿನ್ನವನ್ನು ನೀಡಿದ್ದರಲ್ಲದೆ, 20 ಲಕ್ಷ ರೂಪಾಯಿಗಳನ್ನು ಖರ್ಚು ಮಾಡಿದ್ದರು. ಮೃತ ಗರ್ಭಿಣಿಯ ಯುವತಿಯ ಪತಿಯೂ ಸುಮಂತ್ ಅವರ ತಂದೆ ಮರಣ ಹೊಂದಿದ್ದರಿಂದ ತಾಯಿಯೊಂದಿಗೆ ವಾಸವಾಗಿದ್ದರು. ಈ ಜೋಡಿಯು ಮದುವೆಯಾಗಿ ಎರಡು ತಿಂಗಳ ಕಾಲ ಅನ್ಯೋನ್ಯವಾಗಿದ್ದರು.

ಆದರೆ ತಿಂಗಳುಗಳು ಕಳೆದಂತೆ ನವ ದಂಪತಿಗಳಲ್ಲಿ ವರದಕ್ಷಿಣೆಯ ವಿಚಾರವಾಗಿ ಮನಸ್ಥಾಪಗಳು ಪ್ರಾರಂಭವಾಯಿತು. ಸುಮಂತ್ ಅವರ ತಾಯಿ, ಮೀನಾಕ್ಷಿ ಸೊಸೆಯಲ್ಲಿ ಹಣ ಹಾಗೂ ಚಿನ್ನವನ್ನು ತರುವಂತೆ ಹೇಳುತ್ತಿದ್ದಂತೆ. ಇನ್ನೊಂದೆಡೆ ಸುಮಂತವರ ಅಕ್ಕ ಹಾಗೂ ಅವರ ಪತಿಯು ಕೂಡ ಮನೆಗೆ ಬಂದ ವೇಳೆಯಲ್ಲಿ ರೋಹಿಣಿಯವರಿಗೆ ಚುಚ್ಚಿ ಮಾತನಾಡುತ್ತಿದ್ದರು.

Hassan rohini marriage
Hassan rohini marriage

ಈ ಬಗ್ಗೆ ತಂಬಾ ಪೋಷಕರಿಗೆ ಕರೆ ಮಾಡಿ ಮಾತನಾಡಿದಾಗ ಪತಿ ಕೂಡ ಕಿರುಕು-ಳ ನೀಡುತ್ತಿದ್ದನು. ಇದರಿಂದ ನೋಂದ ರೋಹಿಣಿಯು ತನ್ನ ಸಹೋದರನಲ್ಲಿ ಕಷ್ಟವನ್ನು ಹೇಳಿಕೊಂಡು ಸಂದೇಶವನ್ನು ಕಳುಹಿಸಿದ್ದಳು.ಇನ್ನು, ಸುಮಂತ್ ಅವರ ಅಕ್ಕ ಸುಶ್ಮಿತಾಳ ಸೀಮಂತ ಕಾರ್ಯಕ್ರಮಕ್ಕೆ ತೆರಳಿ ಮರಳುವಾಗ ತಂದೆಯೊಂದಿಗೆ ಎರಡು ಬಾರಿ ಫೋನಿನಲ್ಲಿ ರೋಹಿಣಿಯು ಮಾತನಾಡಿದ್ದಳು. ಅಷ್ಟೇ ಅಲ್ಲದೆ…

ರೈಲಿನಲ್ಲಿ ಹೊರಟಿದ್ದ ಈ ಜೋಡಿಯು ಚನ್ನರಾಯಪಟ್ಟಣದ ಸಮುದ್ರವಳ್ಳಿಯ ಬಳಿ ಇಳಿದು ಕೆರೆಯ ಬಳಿ ನಡೆದು ಬಂದಿದ್ದನ್ನು ದಡೆಯಲ್ಲಿ ನಿಂತ ಹಲವಾರು ಮಂದಿ ನೋಡಿದ್ದರು.ತದನಂತರದಲ್ಲಿ ಪೋಷಕರು ರೋಹಿಣಿಯನ್ನು ಸಂಪರ್ಕಿಸಲು ಪ್ರಯತ್ನ ಪಟ್ಟಿದ್ದಾರೆ. ಆದರೆ ಕರೆಗಳು ತಲುಪಲಿಲ್ಲ.

ಇದರಿಂದ ಅನುಮಾನಗೊಂಡು ಕೆರೆಯ ಬಳಿ ಶೋಧ ಕಾರ್ಯ ನಡೆಸಿದಾಗ ರೋಹಿಣಿಯು ಮೃ-ತದೇಹವು ಪತ್ತೆಯಾಗಿದೆ. ಮಗಳ ಮೈ ಮೇಲಿನ ಗಾಯಗಳನ್ನು ಕಂಡ ಪೋಷಕರು, ರೋಹಿಣಿಯ ಪತಿಯಾದ ಸುಮಂತ್ ಅವರೇ ಜೀವ ತೆಗೆದು ಕೆರೆಗೆ ತಳ್ಳಿ ಹಾಕಿದ್ದಾರೆ ಎಂದು ದೂರನ್ನು ನೀಡಿದ್ದಾರೆ. ಈ ಕಾಲದಲ್ಲಿ ವರದಕ್ಷಿಣೆ ಕಾರಣಕ್ಕೆ ಜೀವ ಕಳೆದುಕೊಂಡದ್ದು ನಿಜಕ್ಕೂ ಬೇಸರದ ಸಂಗತಿ.

Leave a Reply

Your email address will not be published. Required fields are marked *