ಈಗಿನ ಕಾಲದ ಕಾಲೇಜ್ ವಿದ್ಯಾರ್ಥಿಗಳು ಪಾಠ ಪುಸ್ತಕದ ಮೇಲೆ ಗಮನ ಹರಿಸದೆ ಪ್ರೀತಿ ಪ್ರೇಮದ ಕಡೆಗೆ ಹೆಚ್ಚಾಗಿ ಗಮನ ಹರಿಸುತ್ತಾರೆ. ತಮ್ಮ ಜೀವನದ ಗುರಿಯ ಕಡೆ ಕೆಲಸ ಮಾಡದೆ ಪ್ರೀತಿ ಪ್ರೇಮ ಎಂದು ಜಪಿಸುತ್ತಾ ತಮ್ಮ ಸಮಯವನ್ನು ವ್ಯರ್ಥ ಮಾಡಿಕೊಳ್ಳುತ್ತಾರೆ. ಇಲ್ಲಿ ಕೆಲವರು ಪ್ರೀತಿ ಪ್ರೇಮದಲ್ಲಿ ಬಿದ್ದು ನಂತರ ಮೋಸ ಹೋಗಿ ತಮ್ಮ ಜೀವನವನ್ನು ಕೊನೆಗೊಳಿಸಿಕೊಂಡಿದ್ದಾರೆ. ಇತ್ತೀಚಿಗೆ ಹಾಸನದ ಬೇಲೂರು ತಾಲೂಕಿನಲ್ಲಿ ಇಂತಹದ್ದೇ ಒಂದು ಘಟನೆ ನಡೆದಿದೆ.
ಆಶಾ ಎಂಬ 20 ವರ್ಷದ ವಿದ್ಯಾರ್ಥಿನಿ ಬೇಲೂರಿನ ಸರ್ಕಾರಿ ವೈಡಿಡಿ ಪದವಿ ಕಾಲೇಜಿನಲ್ಲಿ 2ನೇ ವರ್ಷದ ಬಿಕಾಂ ಪದವಿ ಓದುತ್ತಿದ್ದಳು. ಪಿಯು ಕಾಲೇಜಿನಲ್ಲಿ ಕ್ಲಾಸ್ಮೇಟ್ ಆಗಿದ್ದ ಮಂಜುನಾಥ್ ಎಂಬ ಹುಡುಗನ ಜೊತೆ ಸುತ್ತಾಡುತ್ತಿದ್ದಳು. ಇಬ್ಬರು ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದರು ಹೊರಗಡೆ ಹೋಗಿ ಇಬ್ಬರು ಓಡಾಡುತ್ತಿದ್ದರು.
ಆದರೆ ಒಂದು ದಿನ ಮಂಜುನಾಥ್ ಬೇರೆ ಹುಡುಗಿಯ ಜೋತೆ ಓಡಾಡುವುದನ್ನು ಆಶಾ ನೋಡಿದಳು.. ತಕ್ಷಣ ಮಂಜುನಾಥ ಗೆ ಕರೆ ಮಾಡಿ ಬೇರೆ ಹುಡುಗಿಯ ಜೊತೆ ನೀನು ಪ್ರೀತಿಯಲ್ಲಿ ಇದ್ದೀಯ ಎಂದು ಪ್ರಶ್ನೆ ಮಾಡಿದಳು. ಆಗ ಮಂಜುನಾಥ್ ಕೊಟ್ಟ ಉತ್ತರ ನೋಡಿ ಬೆಚ್ಚಿ ಬೆರಗಾದಳು.. ಮಂಜುನಾಥ್ ಕೊಟ್ಟ ಉತ್ತರ ಹೀಗಿತ್ತು..
” ಹೌದು, ನಾನು ಬೇರೆ ಹುಡುಗಿಯ ಜೋತೆ ಸುತ್ತಾಡುತ್ತೇನೆ.. ಓಡಾಡುತ್ತೇನೆ.. ನೀನು ನನ್ನನ್ನು ಪ್ರಶ್ನೆ ಮಾಡಬಾರದು. ನನಗೆ ಸ್ವಾತಂತ್ರ ಕೂಡ ಬೇಕು.. ಇಲ್ಲ ಎಂದರೆ ನಿನ್ನನ್ನು ಕೊ-ಲೆ ಮಾಡುತ್ತೇನೆ.. ಅಷ್ಟೇ ಅಲ್ಲ ನಾನು ನೀನು ಒಟ್ಟಿಗೆ ಇರುವ ಫೋಟೋ ವಿಡಿಯೋ ಗಳನ್ನು ಎಲ್ಲ ಕಡೆ ಲೀಕ್ ಮಾಡುತ್ತೇನೆ ಸಾಮಾಜಿಕ ಜಾಲತಾಣದಲ್ಲಿ ಎಲ್ಲವನ್ನೂ upload ಮಾಡುತ್ತೇನೆ ” ಎಂದು ಹೇಳಿದ..
ಇದರಿಂದ ಮನ ನೊಂದ ಆಶಾ ಕಾಲೇಜಿನಲ್ಲಿಯೇ ವಿ-ಷ ಸೇವಿಸಿ ಆತ್ಮಹ-ತ್ಯೆ ಮಾಡಿಕೊಂಡಿದ್ದಾಳೆ. ಸ್ವತಃ ಮಂಜುನಾಥ್ ಆಶಾ ಳನ್ನು ಆಸ್ಪತ್ರೆ ಗೆ ಸೇರಿಸಿದ್ದ.. ಆಶಾಳನ್ನು ಬೇಲೂರು ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿದ್ದ . ಅವಳ ಪರಿಸ್ಥಿತಿ ಗಂಭೀರವಾಗಿದ್ದರಿಂದ ಹಾಸನ ಜಿಲ್ಲಾಸ್ಪತ್ರೆಗೆ ದಾಖಲು ಮಾಡಿ ಅಲ್ಲಿಂದ ಓಡಿ ಹೋಗಿದ್ದ . ಒಂದು ವಾರಕ್ಕೂ ಹೆಚ್ಚು ದಿನಗಳ ಸಮಯ ಕ ಸಾ-ವು ಬದುಕಿನ ನಡುವೆ ಹೋರಾಟ ನಡೆಸಿದ ಆಶಾ.. ಕೊನೆಗೂ ಕೊನೆ ಉಸಿರು ಬಿಟ್ಟಳು.
ತನ್ನ ಮಗಳ ಸಾ-ವಿಗೆ ಮಂಜುನಾಥ ನೇ ಕಾರಣ.. ಆತನೇ ಪ್ರಚೋದನೆ ನೀಡಿ ನನ್ನ ಮಗಳನ್ನು ಕೊಂ-ದು ಹಾಕಿದ್ದಾನೆ ಎಂದು ಆಶಾ ತಂದೆ ರಾಮಯ್ಯ ಬೇಲೂರು ಠಾಣೆಗೆ ದೂರು ನೀಡಿದ್ದಾರೆ. ಇಳಿ ವಯಸ್ಸಿನಲ್ಲಿ ಪ್ರೀತಿ ಪ್ರೇಮ ಅಂತ ಓಡಾಡಿ ಕೊಂಡು ಇದ್ದರೆ ಇದೆ ಕಥೆ ಆಗುತ್ತೆ.. ಅದಕ್ಕೆ ಹೇಳುವುದು ಅಪ್ಪ ಅಮ್ಮ ಹೇಳಿದ ಮಾತು ಕೇಳಬೇಕು ಅಂತ..