ಮೇಕಪ್ ನಿಂದ ಮುಖವೇ ವಿರೂಪ… ಅದ್ದೂರಿಯಾಗಿ ನಡೆಯಬೇಕಿದ್ದ ಮದುವೆಯುೂ ನಿಂತು ಹೋಯ್ತು… ಹುಡುಗಿಯರೇ, ಏನೇ ಬಳಸಿದರು ಎಚ್ಚರವಿರಲಿ!

Hasan durgati : ಮೇಕಪ್ ನಿಂದ ಮುಖವೇ ವಿರೂಪ… ಅದ್ದೂರಿಯಾಗಿ ನಡೆಯಬೇಕಿದ್ದ ಮದುವೆಯುೂ ನಿಂತು ಹೋಯ್ತು… ಹುಡುಗಿಯರೇ, ಏನೇ ಬಳಸಿದರು ಎಚ್ಚರವಿರಲಿಮದುವೆಯ ದಿನದಂದು ಸುಂದರವಾಗಿ ಕಾಣುವ ಹಂಬಲದಿಂದ ಮುಖವನ್ನು ಅಂದಗೊಳಿಸಿಕೊಳ್ಳಲು ಪಾರ್ಲರ್ ಗೆ ತೆರಳಿದ್ದ ಯುವತಿಯ ಮುಖವೇ ವಿರೂಪವಾಗಿದೆ.

ಮದುವೆ ಆಗಬೇಕಾಗಿದ್ದ ವಧು ದುರ್ಗತಿ ಎಂಬಾಕೆ ಮೇಕಪ್ ಮಾಡಿಸಿಕೊಳ್ಳಲು ಹೋಗಿ ಎಡವಟ್ಟು ಮಾಡಿಕೊಂಡಿದ್ದಾಳೆ. ಈ ಘಟನೆ ನಡೆದಿರುವುದು ಹಾಸನದ ಅರಸೀಕೆರೆಯಲ್ಲಿ.ಇತ್ತೀಚಿನ ಮದುವೆ ಕಾರ್ಯಕ್ರಮಗಳಲ್ಲಿ ಅಲಂಕಾರಕ್ಕೆ ಮತ್ತು ಹುಡುಗ ಹುಡುಗಿಯರ ಸೌಂದರ್ಯಕ್ಕೆ ಹೆಚ್ಚಿನ ಒತ್ತನ್ನು ನೀಡಲಾಗುತ್ತಿದೆ.

ಹುಡುಗಿಯರು ತಮ್ಮ ಮದುವೆಯ ಬಗ್ಗೆ ಕನಸು ಕಾಣಲು ಪ್ರಾರಂಭಿಸಿದಾಗಿನಿಂದಲೂ ಮದುವೆಯ ದಿನ ತಾವು ಸುಂದರವಾಗಿ, ತೆಳ್ಳಗಾಗಿ, ಬೆಳ್ಳಗಾಗಿ ಕಾಣಬೇಕೆಂದು ಹೊಸ ಹೊಸ ಪ್ರಯತ್ನಗಳನ್ನು ಮಾಡುತ್ತಿರುತ್ತಾರೆ. ಮದುವೆಯ ದಿನ ಹತ್ತಿರ ಬಂದಂತೆ ಡಯಟ್ ಗಳು ಹೆಚ್ಚಾಗುತ್ತವೆ; ವ್ಯಾಯಾಮ, ಯೋಗಗಳಲ್ಲಿಯೂ ಸಮಯ ಮೀಸಲಿಡುತ್ತಾರೆ.

ಅಷ್ಟೇ ಅಲ್ಲದೆ ಬೇಡದ ಕೂದಲುಗಳ ತೆಗೆಸಿಕೊಳ್ಳುವುದು, ಫೇಶಿಯಲ್ ಮಾಡಿಸಿಕೊಳ್ಳುವುದು, ಫೇಸ್ ಮಾಸ್ಕ್ ಬಳಸುವುದು, ಹೀಗೆ ಸೌಂದರ್ಯ ವರ್ಧಕಗಳ ಬಳಕೆಯು ಹೆಚ್ಚಾಗುತ್ತದೆ. ಯಾವುದೇ ಹೊಸ ವಸ್ತುಗಳನ್ನು ಅಥವಾ ಕಾಸ್ಮೆಟಿಕ್ ಗಳನ್ನು ಬಳಸುವಾಗ ಅದು ವ್ಯಕ್ತಿಯ ದೇಹಕ್ಕೆ ಸರಿ ಹೋಗುವುದೇ ಎಂಬುದರ ಕುರಿತಾಗಿಯೂ ಯೋಚಿಸಿಕೊಳ್ಳಬೇಕು. ಇಲ್ಲದಿದ್ದಲ್ಲಿ ಹಾನಿಯಾಗುವುದು ಖಂಡಿತ.

ಹಾಸನದ ಅರಸೀಕೆರೆಯಲ್ಲಿ ಮದುವೆಯಾಗಬೇಕಿದ್ದ ಮದುಮಗಳು ಬ್ಯೂಟಿ ಪಾರ್ಲರ್ಗೆ ತೆರಳಿ ಮುಖವನ್ನು ಹೆಚ್ಚು ಚಂದವಾಗಿಸಿಕೊಳ್ಳಲು ಹಂಬಲಿಸಿದ್ದಾಳೆ. ಮೇಕಪ್ ಮಾಡುವ ಮೊದಲು ಸ್ಟೀಮ್ ಅನ್ನು ತೆಗೆದುಕೊಳ್ಳಲು ಹೋಗಿ ಮುಖವೇ ಊದಿಕೊಂಡಿದೆ. ಅಷ್ಟೇ ಅಲ್ಲದೆ ಸುಟ್ಟಂತೆ ಕಪ್ಪಾಗಿ ಹೋಗಿದೆ. ವಿಷಯ ತಿಳಿದ ವರ ಹಾಗೂ ಆತನ ಕುಟುಂಬವು ಮದುವೆಯನ್ನೇ ನಿರಾಕರಿಸಿದಂತೆ. ಇದೀಗ ಮದುಮಗಳ ಮನೆಯವರು ಕೂಡ ಕಂಗಾಲಾಗಿದ್ದಾರೆ.

ತನ್ನ ಮುಖವನ್ನು ತಾನೇ ನೋಡಿಕೊಳ್ಳಲಾಗದೆ ಮದುಮಗಳು ಮನನೊಂದು ತನ್ನ ಕುಟುಂಬಸ್ಥರೊಂದಿಗೆ ಪೊಲೀಸ್ ಠಾಣೆಗೆ ತೆರಳಿ ಬ್ಯೂಟಿಷಿಯನ್ ವಿರುದ್ಧ ದೂರನ್ನು ದಾಖಲಿಸಿದ್ದಾಳೆ. ಬ್ಯೂಟಿ ಪಾರ್ಲರ್ ನ ಮಾಲೀಕರಾದ ಗಂಗಾ ವಿರುದ್ಧ ಅರಸಿಕೆರೆ ನಗರದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ವಿಷಯವನ್ನು ತಿಳಿದು ಕೂಡಲೇ ಪೊಲೀಸರು ತನಿಖೆಯನ್ನು ಆರಂಭಿಸಿದ್ದು ಸರಿಯಾದ ಕ್ರಮಗಳನ್ನು ಕೈಗೊಳ್ಳುತ್ತೇವೆ ಎಂದು ತಿಳಿಸಿದ್ದಾರಂತೆ.

Leave a Reply

Your email address will not be published. Required fields are marked *