ಚಂದನವನದಲ್ಲಿ ನಟ ನಟಿಯರು ಮದುವೆ ಸುದ್ದಿಯನ್ನು ನೀಡುತ್ತಿದ್ದಾರೆ. ಕಿರು ತೆರೆ ಹಾಗೂ ಬೆಳ್ಳಿ ತೆರೆಯ ನಟ ನಟಿಯರು ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ. ಈ ಹಿಂದೆಯಷ್ಟೇ ಅಭಿ-ಅವಿವಾ (Abhi- Avivaa), ವಸಿಷ್ಟ ಸಿಂಹ-ಹರಿಪ್ರಿಯಾ (Vasista Simha- Haripriya) ಮದುವೆ ಸಾಕಷ್ಟು ಸದ್ದು ಮಾಡಿತ್ತು. ಇದೀಗ ಹರ್ಷಿತಾ ಪೊಣಚ್ಚ ಹಾಗೂ ಭುವನ್ (Harshika Ponaccha And Bhuvan) ಅವರ ಮದುವೆ ಸುದ್ದಿಯೊಂದು ಜೋರಾ ಗಿಯೇ ಕೇಳಿ ಬರುತ್ತಿದೆ.
ನಟಿ ಹರ್ಷಿಕಾ ಪೂಣಚ್ಚ (Harshika Ponaccha) ಬಿಗ್ ಬಾಸ್ ಖ್ಯಾತಿಯ ಭುವನ್ (Bhuvan) ಜೊತೆ ಮದುವೆಯಾಗುತ್ತಿದ್ದಾರೆ. ಸದ್ಯದಲ್ಲೇ ದಾಂಪತ್ಯ ಜೀವನಕ್ಕೆ ಚಂದನವನದ ತಾರೆಯರಾದ ಭುವನ್ ಹಾಗೂ ಹರ್ಷಿಕಾ ಹೊಸ ಬದುಕಿಗೆ ಹೆಜ್ಜೆ ಇಡಲಿದ್ದು, ಮದುವೆ ತಯಾರಿ ಜೋರಾಗಿಯೇ ನಡೆಯುತ್ತಿದೆ. ಆಗಸ್ಟ್ 24ರಂದು ವಿರಾಜಪೇಟೆಯಲ್ಲಿ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ.
ಕೊಡವ ಶೈಲಿಯಲ್ಲಿ ಭುವನ್ ಹಾಗೂ ಹರ್ಷಿಕಾ ಮದುವೆ ಅದ್ಧೂರಿಯಾಗಿ ವಿರಾಜಪೇಟೆ (Viarajapete) ಯ “ಅಮ್ಮತಿ ಕೊಡವ ಸಮಾಜ” (Ammati Kodava Samaja) ದಲ್ಲಿ ಜರುಗಲಿದೆ. ಈಗಾಗಲೇ ಸಿನಿಮಾ ಹಾಗೂ ರಾಜಕೀಯ ಗಣ್ಯರಿಗೆ ಮದುವೆ ಆಮಂತ್ರಣ ನೀಡಿದ್ದಾರೆ. ಸಿಎಂ ಸಿದ್ದರಾಮಯ್ಯ , ಬಿ.ಎಸ್ ಯಡಿಯೂರಪ್ಪ ಹಾಗೂ ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಅವರಿಗೆ ಮದುವೆಗೆ ಮದುವೆಗೆ ಆಮಂತ್ರಿಸಿದ್ದಾರೆ.
ಅದಲ್ಲದೇ ಸಿನಿಮಾರಂಗದವರಾದ ಶಿವರಾಜ್ ಕುಮಾರ್ (Shivaraj Kumar), ರವಿಚಂದ್ರನ್ (Ravichandran), ಗಣೇಶ್ (Ganesh), ದೊಡ್ಡಣ್ಣ (Doddanna), ಶ್ರೀನಾಥ್ ಜಯಮಾಲ (Shreenath Jayamala), ಸುಧಾರಾಣಿ (Sudharani), ತಾರಾ (Taara), ಮಾಲಾಶ್ರೀ (Malashree), ಅನುಪ್ರಭಾಕರ್ (Anuprabhakar), ಅಮೂಲ್ಯ (Amulya) , ದಿಗಂತ್ (Diganth), ಅಶ್ವಿನಿ ಪುನೀತ್ ರಾಜ್ ಕುಮಾರ್ (Ashwini Puneeth Rajkumar), ರಾಘವೇಂದ್ರ ರಾಜ್ ಕುಮಾರ್ (Raghavendra Rajkumar), ಉಪೇಂದ್ರ ಹಾಗೂ ಪ್ರಿಯಾಂಕಾ ಉಪೇಂದ್ರ (Upendra And Priyanka Upendra) , ದುನಿಯಾ ವಿಜಯ್ (Duniya Vijay) ಸೇರಿದಂತೆ ಅನೇಕ ಗಣ್ಯರಿಗೆ ಆಮಂತ್ರಣ ಪತ್ರಿಕೆಯನ್ನುಯನ್ನು ಈ ಜೋಡಿಯೂ ನೀಡಿದೆ.
ಸ್ಯಾಂಡಲ್ ವುಡ್ ತಾರೆಯರನ್ನು ಮದುವೆಗೆ ಆಮಂತ್ರಿಸಿರುವ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಇತ್ತೀಚಿಗಷ್ಟೇ ಕೊಡಗಿನ ಇಗ್ಗುತ್ತಪ್ಪ ದೇವಾಲಯ (Igguttappa Temple) ದಲ್ಲಿ ಸರಳವಾಗಿ ಲಗ್ನಪತ್ರಿಕೆ ಕಾರ್ಯಕ್ರಮ ನಡೆದಿತ್ತು. ಎರಡು ಕುಟುಂಬದ ಸದಸ್ಯೆರು ಮತ್ತು ಆತ್ಮೀಯರು ಭಾಗಿಯಾಗಿದ್ದರು. ಅದಲ್ಲದೇ, ಹರ್ಷಿತಾ ಪೊಣಚ್ಚ ಹಾಗೂ ಭುವನ್ ತಮ್ಮ ಮದುವೆ ಲಗ್ನ ಪತ್ರಿಕೆಯನ್ನು ವಿಷೇಶವಾಗಿ ಹಂಚಿಕೊಂಡಿದ್ದಾರೆ. ಈ ಜೋಡಿಯ ಮದುವೆ ಲಗ್ನ ಪತ್ರಿಕೆಯೂ ಸ್ವಲ್ಪ ವಿಭಿನ್ನವಾಗಿಯೇ ಇದೆ.
ಈ ಲಗ್ನ ಪತ್ರಿಕೆಯಲ್ಲಿ ಅವರಿಬ್ಬರ ಬಾಲ್ಯದ ಫೋಟೋ ಹಾಕಲಾಗಿದೆ. ತಮ್ನ ತೋಟದಲ್ಲಿ ಬೆಳೆದ ಮೆಣಸು, ಕಾಫಿ ಪೌಡರ್ ಜೇನುತುಪ್ಪದ ಜೊತೆ ಲಗ್ನ ಪತ್ರಿಕೆಯನ್ನು ನೀಡಿ ಮದುವೆಗೆ ಆಹ್ವಾನ ನೀಡುತ್ತಿದ್ದಾರೆ. ಹೊಸ ಜೀವನಕ್ಕೆ ಕಾಲಿಡುತ್ತಿರುವ ಈ ಜೋಡಿಯ ಮದುವೆಯ ಲಗ್ನ ಪತ್ರಿಕೆಯನ್ನು ನೀಡುತ್ತಿರುವ ಬಾರೀ ವೈರಲ್ ಆಗಿದೆದೆ. ಸದ್ಯದಲ್ಲೇ ತಮ್ಮಿಬ್ಬರ ಪ್ರೀತಿಗೆ ಮದುವೆಯ ಮುದ್ರೆ ಒತ್ತಲಿದ್ದಾರೆ.