ಇತ್ತೀಚಿಗೆ ಕನ್ನಡ ಚಿತ್ರರಂಗದ ಲವ್ ಬರ್ಡ್ಸ್ ಸಿಂಹ ಪ್ರಿಯ ಜೋಡಿ ಅಭಿಮಾನಿಗಳ ಫೇವರೆಟ್ ಜೋಡಿ ಎನಿಸಿಕೊಂಡಿದೆ. ಹರಿಪ್ರಿಯಾ ಹಾಗೂ ವಸಿಷ್ಠ ಸಿಂಹ ಸೋಶಿಯಲ್ ಮೀಡಿಯಾದಲ್ಲಿ ಆಗಾಗ ಒಟ್ಟಾಗಿ ಕಾಣಿಸಿಕೊಳ್ಳುತ್ತಿದ್ದರು. ಆದರೆ ಇವರು ಜೀವನದಲ್ಲಿಯೂ ಒಂದಾಗುತ್ತಾರೆ ಅಂತ ಬಹುಶ: ಯಾರು ಊಹಿಸಿರಲಿಕ್ಕಿಲ್ಲ. ನಟಿ ಹರಿಪ್ರಿಯ ಹಾಗೂ ವಸಿಷ್ಟ ಸಿಂಹ ಕಳೆದ ವರ್ಷದ ಅಂತ್ಯದಲ್ಲಿ ಅಭಿಮಾನಿಗಳಿಗೆ ಸರ್ಪ್ರೈಸ್ ನೀಡಿದರು.
ಜನವರಿ 26ಕ್ಕೆ ಹರಿಪ್ರಿಯಾ ಹಾಗೂ ವಸಿಷ್ಠ ಸಿಂಹ ಇಬ್ಬರು ಮದುವೆ ಆಗಿ ವೈವಾಹಿಕ ಜೀವನ ಆರಂಭಿಸಿದ್ದಾರೆ. ಇವರಿಬ್ಬರನ್ನು ಸ್ಯಾಂಡಲ್ ವುಡ್ ನ ಸ್ಪೆಷಲ್ ಜೋಡಿ ಎಂದು ಕರೆಯಲಾಗುತ್ತಿದೆ. ನಟಿ ಹರಿಪ್ರಿಯ ಹಾಗೂ ವಸಿಷ್ಠ ಸಿಂಹ ಇಬ್ಬರು ಸ್ಯಾಂಡಲ್ವುಡ್ ನ ಅತ್ಯುತ್ತಮ ಕಲಾವಿದರು. ಹರಿಪ್ರಿಯಾ ಈವರೆಗೆ ಸಾಕಷ್ಟು ಹಿಟ್ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಅದೇ ರೀತಿ ವಸಿಷ್ಟ ಸಿಂಹ ಕೂಡ ವಿಲನ್ ಆಗಿ ಕರಿಯರ್ ಆರಂಭಿಸಿ, ನಂತರ ಹೀರೋ ಆಗಿ ಕರಿಯರ್ ಮುಂದುವರಿಸಿದ್ದಾರೆ.
ಇನ್ನು ಇತ್ತೀಚೆಗೆ ಹರಿಪ್ರಿಯಾ ಗುಡ್ ನ್ಯೂಸ್ ಒಂದನ್ನು ಹಂಚಿಕೊಂಡಿದ್ದಾರೆ? ಅವರ ಈ ಹಿಂದಿನ instagram post ನೋಡಿ ಈಗಾಗಲೇ ಅವರ ಅಭಿಮಾನಿಗಳು ಸಾಕಷ್ಟು ಪ್ರಶ್ನೆಯನ್ನು ಕೇಳಿದ್ದರು. ಹೆಸರೇನು ಮೇಡಂ?, ಯಾವಾಗ ಅನೌನ್ಸ್ ಮಾಡುತ್ತೀರಾ?, ಕೇಳಿದ್ದು ನಿಜಾನಾ? ಗುಡ್ ನ್ಯೂಸ್ ? ಹೀಗೆ ಹಲವಾರು ಪ್ರಶ್ನೆಗಳನ್ನು ಅವರ ಅಭಿಮಾನಿಗಳು ಕೇಳಿದ್ದಾರೆ.
ಇ-ಮೇಲ್, ಟ್ವಿಟ್ಟರ್, instagram, ಇನ್ಸ್ಟಾಗ್ರಾಮ್ facebook ಎಲ್ಲದರಲ್ಲೂ ಹರಿಪ್ರಿಯಾ ಅವರನ್ನು ಪ್ರಶ್ನೆ ಮಾಡಿದ್ದು ತಮ್ಮ ಮೊಬೈಲ್ ನೋಟಿಫಿಕೇಷನ್ ಸ್ಕ್ರೀನ್ ಶಾಟ್ ಅನ್ನು ಹರಿಪ್ರಿಯಾ ಶೇರ್ ಮಾಡಿದ್ದಾರೆ. ಸುದ್ದಿ, ಏನು ಅಂತ ಹೇಳುವುದಕ್ಕೂ ಮೊದಲು ಏನಾದ್ರೂ ಗೆಸ್ ಮಾಡುತ್ತೀರಾ ಎಂದು ಮತ್ತೆ ಅಭಿಮಾನಿಗಳಿಗೆ ಪ್ರಶ್ನೆ ಕೇಳಿದ್ದಾರೆ.
ಇನ್ನು ಹರಿಪ್ರಿಯಾ ಅವರು ತಮ್ಮ instagram ಖಾತೆಯಲ್ಲಿ ಈ ಪೋಸ್ಟರ್ ಹಂಚಿಕೊಳ್ಳುತ್ತಿದ್ದಂತೆ ಸಾಕಷ್ಟು ಜನ ಅವರಿಗೆ ಕಮೆಂಟ್ ಮಾಡಿ ಗುಡ್ ನ್ಯೂಸ್ ಏನು ಎಂದು ಕೇಳಿದ್ದಾರೆ ಎಂದು ಹಲವರು ಪ್ರಶ್ನೆ ಮಾಡಿದರೆ ಇನ್ನೂ ಕೆಲವರು ಹೊಸ ಸಿನಿಮಾದ ನ್ಯೂಸ್ ಇರಬೇಕು ಎಂದು ಊಹಿಸಿದ್ದಾರೆ.
ಇತ್ತೀಚಿಗಷ್ಟೇ ಮದುವೆ, ಹನಿಮೂನ್ ಎಲ್ಲವನ್ನು ಮುಗಿಸಿಕೊಂಡು ಹಿಂತಿರುಗಿರುವ ನಟಿ ಹರಿಪ್ರಿಯ ಬಹುಶ: ಸಿನಿಮಾದಲ್ಲಿ ಬ್ಯುಸಿ ಆಗಿದ್ದಾರೆ ಇದನ್ನೇ ಅವರು ಅಭಿಮಾನಿಗಳ ಜೊತೆ ಹಂಚಿಕೊಳ್ಳಬೇಕು ಎಂದು ಇರುವ ಸುದ್ದಿ ಎಂದು ಊಹಿಸಲಾಗಿದೆ. ಅಸಲಿ ವಿಷಯ ಏನು ಅಂತ ತಿಳಿಯೋದಕ್ಕೆ ಹರಿಪ್ರಿಯಾ ಅವರ ನೆಕ್ಸ್ಟ್ ಪೋಸ್ಟ್ ವರೆಗೂ ಕಾಯಬೇಕು.