ಬೆಡ್ ರೂಮಿನಲ್ಲಿರುವ ಹಾಟ್ ಫೋಟೋ ಹಂಚಿಕೊಂಡ ಹಾರ್ದಿಕ್‌ ಪಾಂಡ್ಯ ದಂಪತಿ, ಫೋಟೋ ನೋಡಿ ನೆಟ್ಟಿಗರು ಶಾಕ್

ಕ್ರಿಕೆಟಿಗರಾದ ಹಾರ್ದಿಕ್ ಪಾಂಡ್ಯ (Hardik Pandya) ಮತ್ತು ನತಾಶಾ ಸ್ಟಾಂಕೋವಿಕ್ (Natasa Stankovic) ಹಾಟ್ ಫೋಟೋಗಳನ್ನು ಶೇರ್ ಮಾಡಿಕೊಳ್ಳುವ ಮೂಲಕ ಮತ್ತೆ ಸುದ್ದಿಯಲ್ಲಿದ್ದಾರೆ. ಕಳೆದ ಫೆಬ್ರವರಿಯಲ್ಲಿ ಮರುವಿವಾಹದ ಮೂಲಕ ಸುದ್ದಿಯಾಗಿದ್ದರು. ಈ ಜೋಡಿಯೂ ಕ್ರೈಸ್ತ ಧರ್ಮದಂತೆ ಫೆಬ್ರವರಿ 14ರಂದು ವಿವಾಹವಾಗಿತ್ತು. ಅದಲ್ಲದೇ, ಫೆಬ್ರವರಿ 15ರಂದು ಇಬ್ಬರೂ ಹಿಂದೂ ಸಂಪ್ರದಾಯದ ಪ್ರಕಾರ ಮತ್ತೆ ವಿವಾಹ ಮಾಡಿಕೊಂಡಿದ್ದರು.

ಈ ಜೋಡಿಯ ಮರುವಿವಾಹಕ್ಕೆ ಮೂರು ವರ್ಷದ ಅಗಸ್ತ್ಯ (Agastya) ಸಾಕ್ಷಿಯಾಗಿದ್ದದ್ದು ವಿಶೇಷವಾಗಿತ್ತು. ಹಾರ್ದಿಕ್ ಪಾಂಡ್ಯ (Hardik Pandya) ಮತ್ತು ನತಾಶಾ ತಮ್ಮ ಮಗನೊಂದಿಗೆ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದರು. ಹಾರ್ದಿಕ್ ಪಾಂಡ್ಯ (Hardik Pandya) ಮತ್ತು ನತಾಶಾ ಜೋಡಿಯೂ ಕಳೆದ ಮೂರು ವರ್ಷಗಳ ಹಿಂದೆ ಇಬ್ಬರೂ ವಿವಾಹವಾಗಿದ್ದರು. ಆದರೆ ಕೊರೋನಾವಿದ್ದ ಕಾರಣದಿಂದಾಗಿ ಅದ್ಧೂರಿಯಾಗಿ ಮದುವೆಯಾಗಲು ಆಗಿರಲಿಲ್ಲ.

ಮೂರು ವರ್ಷಗಳ ಹಿಂದಿನ ಈ ವಿವಾಹದಲ್ಲಿ ಹಾರ್ದಿಕ್ ಮತ್ತು ನತಾಶಾ ಮದುವೆಯಲ್ಲಿ ತೀರಾ ಆಪ್ತರಷ್ಟೇ ಭಾಗಿಯಾಗಿ ಈ ಜೋಡಿಗೆ ಶುಭಾಶಯಗಳನ್ನು ತಿಳಿಸಿದ್ದರು. ಇದೀಗ ಈ ಜೋಡಿಯೂ ಸುದ್ದಿಯಾಗಿರುವುದು ಹಾಟ್ ಫೋಟೋದ ಮೂಲಕ. ಮರುವಿವಾಹದ ಕೆಲವೇ ತಿಂಗಳಲ್ಲಿ ಹಾರ್ದಿಕ್ ಪಾಂಡ್ಯ ದಂಪತಿಗಳು ಫೋಟೋ ಶೂಟ್ ಮಾಡಿಸಿಕೊಂಡಿದ್ದಾರೆ. ಈ ಫೋಟೋದಲ್ಲಿ ದಂಪತಿ ಮಂಚದ ಮೇಲೆ ಪೋಸ್ ನೀಡಿದ್ದಾರೆ.

ಚುಂಬಿಸುವ ಫೋಟೋ ಇದಾಗಿದ್ದು ಈ ಫೋಟೋದಲ್ಲಿ ಹಾರ್ದಿಕ್ ಕಪ್ಪು ಶರ್ಟ್ ಧರಿಸಿದರೆ, ನತಾಶಾ ಪಟ್ಟೆಯುಳ್ಳ ಕಪ್ಪು ಮತ್ತು ಬಿಳಿ ಉಡುಪಿನಲ್ಲಿ ಕಾಣಿಸಿಕೊಂಡಿದ್ದಾರೆ. ನತಾಶಾರವರೇ ಈ ಫೋಟೋ ಶೂಟ್ ಅನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡು, ಫ್ರೆಂಚ್‌ನಲ್ಲಿ ‘Je t’aime’ ಎಂದು ಬರೆದುಕೊಂಡಿದ್ದಾರೆ. ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿವೆ. ನತಾಶಾ ಸೋಶಿಯಲ್ ಮೀಡಿಯಾದಲ್ಲಿ ಹಾಟ್ ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದಂತೆ ನೆಟ್ಟಿಗರು ಶಾಕ್ ಆಗಿದ್ದು ಮಾತ್ರವಲ್ಲದೇ ಈ ಜೋಡಿಯ ವಿರುದ್ಧ ಗರಂ ಕೂಡ ಆಗಿದ್ದಾರೆ.

ಫೋಟೋ ನೋಡಿ ನೆಟ್ಟಿಗರು ಟ್ರೋಲ್ ಕೂಡ ಮಾಡಿದ್ದು, ನಾನಾ ರೀತಿಯ ಕಾಮೆಂಟ್ ಗಳು ಈ ಫೋಟೋಗೆ ವ್ಯಕ್ತವಾಗಿವೆ. ಕೆಲವರು ಈ ಫೋಟೋಗೆ ಹೃದಯದ ಎಮೋಜಿ (Emoji) ಹಾಕಿದ್ದಾರೆ. ಇನ್ನು ಕೆಲವರು ನಾಲ್ಕು ಗೋಡೆಗಳ ಮಧ್ಯೆ ನಡೆಯಬೇಕಿರುವ ಈ ಚುಂಬನದ ದೃಶ್ಯವನ್ನು ಸಾರ್ವಜನಿಕವಾಗಿ ತೋರಿಸಿರುವುದು ಸರಿಯಲ್ಲ ಎಂದಿದ್ದಾರೆ. ಇದೇನು ಮುಂದಿನ ಮಗುವಿನ ಯೋಜನೆಯಾ ಎಂದು ಹಲವರು ಪ್ರಶ್ನೆ ಕೂಡ ಮಾಡಿದ್ದಾರೆ. ನಾಲ್ಕು ಗೋಡೆಗಳ ನಡುವೆ ನಡೆಯಬೇಕಾದದ್ದು ಫೋಟೋ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡದ್ದು ನಿಜಕ್ಕೂ ವಿಪರ್ಯಾಸ ಎನ್ನಬಹುದು.

Leave a Reply

Your email address will not be published. Required fields are marked *