ರಾಜಕೀಯರಂಗದಲ್ಲಿ ಹೆಚ್ ಡಿ ದೇವೇಗೌಡ ( HD Devegowda) ರ ಕುಟುಂಬದ ಎಲ್ಲರೂ ಸಕ್ರಿಯರಾಗಿದ್ದಾರೆ. ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ (HD Kumaraswami) ರಾಜಕೀಯ ರಂಗದಲ್ಲಿ ಸಕ್ರಿಯರಾಗಿದ್ದು ಆಗಾಗ ಹೇಳಿಕೆಯ ಮೂಲಕ ಸುದ್ದಿಯಲ್ಲಿರುವುದು ಮಾಮೂಲಿ. ಆದರೆ ಇದೀಗ ರಾಜಕೀಯ ಜಂಟಾಟವನ್ನು ಮರೆತು ವಿದೇಶಿ ಪ್ರವಾಸ ಎಂಜಾಯ್ ಮಾಡುತ್ತಿದ್ದಾರೆ.
ಕಳೆದ 10 ದಿನಗಳಿಂದ ಕುಮಾರಸ್ವಾಮಿ ಅವರು ಯುರೋಪ್ (Europe)ನಲ್ಲಿ ಪ್ರವಾಸ ಕೈಗೊಂಡಿದ್ದು, ಐಲ್ಯಾಂಡ್ (Island) ನಲ್ಲಿ ಕುಟುಂಬದೊಂದಿಗೆ ಎಂಜಾಯ್ ಮಾಡುತ್ತಿದ್ದು ರಿಲ್ಯಾಕ್ಸ್ ಮೂಡ್ ನಲ್ಲಿದ್ದಾರೆ. ಕಳೆದೊಂದು ವಾರದಿಂದ ಯುರೋಪ್ನ ಫಿನ್‌ಲ್ಯಾಂಡ್ (Pin Land) ಗೆ ಪ್ರವಾಸ ಕೈಗೊಂಡಿದ್ದು, ಕುಟುಂಬದ ಸಮೇತರಾಗಿ ಪ್ರವಾಸ ಮಜಾ ಸವಿದಿದ್ದಾರೆ. ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಯುರೋಪ್‌ನ ಫಿನ್‌ಲ್ಯಾಂಡ್‌ಗೆ ಪ್ರವಾಸದ ವೇಳೆಯಲ್ಲಿ ಕುಟುಂಬದ ಜೊತೆಗೆ ತೆಗೆದ ಫೋಟೋ ಹಂಚಿಕೊಂಡಿದ್ದಾರೆ.

ಇಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಅವರು ಪ್ರವಾಸದ ಅವಧಿಯಲ್ಲಿ ಪತ್ನಿ ಅನಿತಾ ಕುಮಾರಸ್ವಾಮಿ (Anitha Kumaraswami) ಅವರೊಂದಿಗೆ ಫಾಲ್ಸ್‌ಗೆ ಭೇಟಿ ನೀಡಿದ್ದಾರೆ. ಅದಲ್ಲದೇ, ಕುಟುಂಬ ಸದಸ್ಯರೊಂದಿಗೆ ಫಿನ್‌ಲ್ಯಾಂಡ್ ಪ್ರವಾಸದಲ್ಲಿರುವ ಕುಮಾರಸ್ವಾಮಿ ಅವರು ಪತ್ನಿ ಅನಿತಾ ಕುಮಾರಸ್ವಾಮಿ, ಪುತ್ರ ನಿಖಿಲ್ ಕುಮಾರಸ್ವಾಮಿ, ಸೊಸೆ, ಮೊಮ್ಮಗನ ಜೊತೆ ವಿದೇಶಿ ಪ್ರವಾಸಿ ತಾಣಗಳನ್ನು ಕಣ್ತುಂಬಿಸಿಕೊಂಡು ಖುಷಿ ಪಟ್ಟಿದ್ದಾರೆ. ಸದ್ಯಕ್ಕೆ ಹೆಚ್ ಡಿ ಕುಮಾರಸ್ವಾಮಿಯವರ ವಿದೇಶಿ ಪ್ರವಾಸದ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿವೆ.
ಅದಲ್ಲದೆ ಯುರೋಪ್‌ನಲ್ಲಿ ಹೊಸ ಹೊಸ ಜಾಗಗಳಿಗೆ ಭೇಟಿ ನೀಡುತ್ತಿದ್ದ ವೇಳೆಯಲ್ಲಿ ತೆಗೆಸಿದ್ದ ನಿಖಿಲ್ ಕುಮಾರಸ್ವಾಮಿ ದಂಪತಿಗಳ ವಿಡಿಯೋವೊಂದು ವೈರಲ್ ಆಗಿವೆ. ವಿದೇಶದ ರಸ್ತೆ ಮೇಲೆ ಹೆಂಡತಿ ಕೈ ಹಿಡಿದು ನಿಖಿಲ್ (Nikhil) ವಾಕಿಂಗ್ ಮಾಡುತ್ತಿರುವ ವಿಡಿಯೋವನ್ನು ನಿಖಿಲ್ ತನ್ನ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಅಭಿಮಾನಿಗಳು ಭಾರೀ ಮೆಚ್ಚುಗೆ ವ್ಯಕ್ತಪಡಿಸಿದ್ದು, ವೈರಲ್ ಆಗುತ್ತಿದೆ.

ವಿದೇಶಿ ಪ್ರವಾಸದಿಂದ ವಾಪಸ್ ಆದ ಬಳಿಕ ಮಾಜಿ ಸಿಎಂ ಎಚ್ಡಿಕೆ, ಪಕ್ಷ ಸಂಘಟನೆ ಮಾಡುವತ್ತ ಗಮನ ಹರಿಸಲಿದ್ದಾರೆ ಎನ್ನಲಾಗಿದೆ. ಇಂದು ವಿದೇಶದಿಂದ ಹೆಚ್ ಡಿಕೆ ಸೇರಿದಂತೆ ಕುಟುಂಬದ ಸದಸ್ಯರೆಲ್ಲರೂ ಮರಳಿದ್ದಾರೆ ಎನ್ನಲಾಗಿದೆ. ಹೀಗಾಗಿ ಹೆಚ್ ಡಿಕೆ ರಿಲ್ಯಾಕ್ಸ್ ಮೂಡ್ ನಿಂದ ಹೊರ ಬಂದು ರಾಜಕೀಯದ ಕಡೆಗೆ ಹೆಚ್ಚು ಗಮನ ಹರಿಸುವುದರಲ್ಲಿ ಯಾವುದೇ ಡೌಟ್ ಇಲ್ಲ.
