ಮುದ್ದಿನ ಮಗಳಿಗೆ ಗಂಡನ ಮನೆಯಲ್ಲಿ ಕಿರುಕುಳ ಕೊಡುತ್ತಿದ್ದಾರೆ ಎನ್ನುವ ವಿಚಾರ ಗೊತ್ತಾಗುತ್ತಿದ್ದಂತೆ ತಂದೆ ಏನು ಮಾಡಿದ್ರು ಗೊತ್ತಾ? ಅಪ್ಪ ನಿಜಕ್ಕೂ ಗ್ರೇಟ್ !!

ಮದುವೆ ಹೆಣ್ಣು ಹಾಗೂ ಗಂಡಿನ ಜೀವನದ ಪ್ರಮುಖ ಘಟ್ಟ. ಪತಿ ಹಾಗೂ ಪತಿಯ ಮನೆಯವರು ಒಳ್ಳೆಯವರಾಗಿದ್ದರೆ ಆ ಹೆಣ್ಣಿನ ಬದುಕು ಸ್ವರ್ಗವಾಗಿರುತ್ತದೆ. ಆದರೆ ಕೆಲವೊಮ್ಮೆ ಹೆಣ್ಣು ಹೆತ್ತವರು ಗಂಡನ ಮನೆಯಲ್ಲಿ ಎಷ್ಟೇ ಕಷ್ಟಯಿದ್ದರೂ ಕೂಡ ಹೊಂದಿಕೊಂಡು ಹೋಗಬೇಕು ಎನ್ನುವ ಮಾತನ್ನು ಹೇಳುವುದಿದೆ. ಈ ಮಾತಿಗಾಗಿ ಗಂಡನ ಮನೆಯಲ್ಲಿ ಎಷ್ಟೇ ಕಷ್ಟವಿದ್ದರೂ ಅದನ್ನು ಹೇಳಿಕೊಳ್ಳುವುದಿದೆ.

ಆದರೆ ಇಲ್ಲೊಂದು ಕಡೆಯಲ್ಲಿ ಗಂಡನ ಮನೆಯಲ್ಲಿ ತನ್ನ ಮಗಳಿಗೆ ಕಿ-ರುಕುಳ ಕೊಡುತ್ತಾರೆ ಎನ್ನುವ ಕಾರಣಕ್ಕೆ ಮಗಳನ್ನು ಅದ್ದೂರಿಯಾಗಿ ಮನೆಗೆ ಕರೆದುಕೊಂಡ ಬಂದ ಘಟನೆಯೂ ನಡೆದಿದೆ. ಹೌದು, ತಂದೆಯೊಬ್ಬರು ತನ್ನ ಮುದ್ದಿನ ಮಗಳಿಗೆ ಆಕೆಯ ಗಂಡನ ಮನೆಯಲ್ಲಿ ಕಿ-ರುಕುಳ ನೀಡುತ್ತಿದ್ದಾರೆ ಎಂದು ತಿಳಿಯುತ್ತಿದ್ದಂತೆ ಬ್ಯಾಂಡ್ ವಾಲಗದವರನ್ನು ಕರೆದುಕೊಂಡು ಹೋಗಿದ್ದು, ಮಗಳನ್ನು ಮೆರವಣಿಗೆ ಮೂಲಕ ತವರಿಗೆ ಕರೆತಂದಿದ್ದಾರೆ.

ಸದ್ಯಕ್ಕೆ ಈ ವೀಡಿಯೋವೊಂದು ಸಾಮಾಜಿಕ ಜಾಲತಾಣ (Social Media) ದಲ್ಲಿ ವೈರಲ್ ಆಗಿದೆ. ಈ ಘಟನೆಯೂ ನಡೆದಿರುವುದು ಜಾರ್ಖಂಡ್ (Jharkhand) ನಲ್ಲಿ. ಮಗಳನ್ನು ಕಳುಹಿಸಿಕೊಡುವಾಗ ಹೇಗೆ ಅದ್ದೂರಿಯಾಗಿ ಕಳುಹಿಸಿಕೊಡುತ್ತಾರೆಯೇ ಹಾಗೆಯೇ ಸಂಗೀತ ವಾದ್ಯ ಹಾಗೂ ಪಟಾಕಿಯನ್ನು ಸಿಡಿಸಿ ಅದ್ದೂರಿ ಮೆರವಣಿಗೆಯಲ್ಲಿ ಆಕೆಯನ್ನು ಕರೆದುಕೊಂಡು ಬಂದಿರುವುದು ಎಲ್ಲರಿಗೂ ಕೂಡ ಅಚ್ಚರಿಯನ್ನುಂಟು ಮಾಡಿದೆ.

ಪ್ರೇಮ್ ಗುಪ್ತಾ (Prem gupta) ಎನ್ನುವವರು ಈ ರೀತಿಯಾಗಿ ಮಗಳನ್ನು ಗಂಡನ ಮನೆಯಿಂದ ಕರೆತಂದವರು. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪ್ರೇಮ್ ಗುಪ್ತಾರವರು, ತನ್ನ ಮಗಳು ಸಾಕ್ಷಿ ಗುಪ್ತಾಗೆ ಅತ್ತೆ ಮನೆಯಲ್ಲಿ ಕಿ-ರುಕುಳ ನೀಡುತ್ತಿದ್ದರು. ಪೋಷಕರು ತಮ್ಮ ಹೆಣ್ಣು ಮಕ್ಕಳನ್ನು ಮದುವೆ ಮಾಡಿ ಕೊಡುವ ವೇಳೆ ಬಹಳ ಅದ್ದೂರಿ ಸಂಭ್ರಮಾಚರಣೆಯಿಂದ ಬಹಳ ಖರ್ಚುವೆಚ್ಚ ಮಾಡಿ ಮದುವೆ ಮಾಡಿಕೊಡುತ್ತಾರೆ.

ಆದರೆ ಅಲ್ಲಿ ಕಿ-ರುಕುಳ ನೀಡುತ್ತಾರೆ ಎಂದು ಗೊತ್ತಾದ ವೇಳೆ ಮದುವೆ ಮಾಡಿ ಕೊಟ್ಟಷ್ಟೇ ಗೌರವದಿಂದ ಆಕೆಯನ್ನು ನೀವು ವಾಪಸ್ ಮನೆಗೆ ಕರೆಸಿಕೊಳ್ಳಬೇಕು ಏಕೆಂದರೆ ಹೆಣ್ಣು ಮಕ್ಕಳು ತುಂಬಾ ಅಮೂಲ್ಯ ಎಂದಿದ್ದಾರೆ. ಒಟ್ಟಿನಲ್ಲಿ ತಂದೆಯು ಮಗಳನ್ನು ಈ ರೀತಿಯಾಗಿ ಕರೆತಂದಿರುವುದಕ್ಕೆ ಎಲ್ಲರಿಂದಲೂ ಮೆಚ್ಚುಗೆ ವ್ಯಕ್ತವಾಗಿವೆ.

Leave a Reply

Your email address will not be published. Required fields are marked *