ಕಾರಿನ ಹೊರಮೈ ಸುತ್ತ ಸಗಣಿಯನ್ನು ಬಳಿದುಕೊಂಡು ಓಡಾಡುತ್ತಿರುವ ಮಹಿಳೆ…ಇದರ ಹಿಂದಿನ ರಹಸ್ಯ ತಿಳಿದರೆ ನೀವು ಅಚ್ಚರಿಪಡ್ತೀರಾ..!

Gujarat woman cowdung car: ಈಗಿನ ಕಾಲದಲ್ಲಿ ಹೊಸ ಹೊಸ ಕಾರು ಬೈಕ್ ಗಳನ್ನು ತೆಗೆದುಕೊಂಡು ಅದಕ್ಕೆ ನವ ತಂತ್ರಜ್ಞಾನವ ಅಳವಡಿಸಿಕೊಂಡು ಓಡಾಡುವದೆಂದರೆ ಜನರಿಗೆ ಸಂಭ್ರಮ. ಇನ್ನೂ ಸಭೆ ಸಮಾರಂಭಗಳಿಗೆ, ಹಬ್ಬಗಳಿಗೆ, ಮದುವೆ ಮನೆಗಳಿಗೆ ತೆರಳುವಾಗ ತಮ್ಮ ಕಾರು ಬೈಕ್ ಗಳನ್ನು ಹೂವಿನಿಂದ ಅಥವಾ ಇನ್ನಾವುದಾದರೂ ಸುಂದರ ವಸ್ತುಗಳಿಂದ ಅಲಂಕರಿಸಿಕೊಂಡು ಹೋಗುವುದನ್ನು ಕಾಣುತ್ತೇವೆ..ಆದರೆ ಓರ್ವ ಮಹಿಳೆ ತನ್ನ costly ಕಾರಿನ ಸುತ್ತ ಸಗಣಿಯನ್ನು ಬಳಿದುಕೊಂಡು ಓಡಾಡುತ್ತಿದ್ದಾಳೆ.

ಸ್ನೇಹಿತರೆ, ಹೌದು ವಾಹನಗಳಿಂದಲೇ ತಮ್ಮ ಸ್ಟೇಟಸ್ ಅನ್ನು ಹೊರ ಪ್ರಪಂಚಕ್ಕೆ ತಿಳಿಯುವಂತೆ ತೋರಿಸಿಕೊಂಡು ಓಡಾಡುವವರ ಮಧ್ಯೆ, costly car ಆದರೂ ಯಾವುದೆಂದು ತಿಳಿಯದಂತೆ ಸಗಣಿಯಿಂದ ಲೇಪನಗೊಳಿಸಿ ಓಡಾಡುತ್ತಿದ್ದಾಳೆ ಎಂದರೆ ಎಂಥವರಿಗಾದರೂ ಅಚ್ಚರಿಯಾಗುತ್ತದೆ. ಹೀಗೆ ಮಾಡುವುದರಿಂದ ಏನಾದರೂ ಪ್ರಯೋಜನವಿದೆಯೇ??? ಎಂಬ ಪ್ರಶ್ನೆ ಎಲ್ಲರನ್ನು ಕಾಡುತ್ತದೆ.

Gujarat woman cowdung car
Gujarat woman cowdung car

ತಮ್ಮ ಕಾರುಗಳಿಗೆ ವಿಭಿನ್ನವಾದ stickersಗಳನ್ನು ಅಂಟಿಸಿಕೊಂಡು ಇತರರ ಗಮನ ಸೆಳೆಯುವವರ ಮಧ್ಯೆ ತನ್ನ ಕಾರಿಗೆ ಸಗಣಿಯನ್ನು ಕವಚದಂತೆ ಬಳಿದು ಅದರ ಮೇಲೆ ಅಂದದ ಚಿತ್ತಾರ ಬಿಡಿಸಿಕೊಂಡು ಓಡಾಡುತ್ತಿರುವ ಈ ಮಹಿಳೆ ಎಲ್ಲರ ಗಮನ ಸೆಳೆದಿದ್ದಾಳೆ. ಇವರ ಹೆಸರು ಶಾಜಿಲ್ ಶಾಹಿ. ಇವರು ಮೂಲತಃ ಅಹಮದಾಬಾದಿನವರು.

ಶಾಜಿಲ್ ಶಾಹಿ ಅವರನ್ನು, ‘ನೀವು ನಿಮ್ಮ ಕಾರನ್ನು ಸಗಣಿಯಿಂದ ಅಲಂಕೃತಗೊಳಿಸಿರುವುದರ ಹಿಂದಿನ ರಹಸ್ಯವೇನು?? ಎಂದು ಪ್ರಶ್ನಿಸಿದಾಗ ಅವರು, ‘ನಿಮಗೆಲ್ಲ ತಿಳಿದ ಹಾಗೆ ಅಹಮದಾಬಾದಿನಲ್ಲಿ ಬೇಸಿಗೆ ಕಾಲದಲ್ಲಿ ಅತಿ ಹೆಚ್ಚು ತಾಪಮಾನವಿರುತ್ತದೆ. ಪ್ರಯಾಣ ಮಾಡಬಯಸುವವರು ತಮ್ಮ ವಾಹನಗಳಲ್ಲಿ ಎಸಿ ಯನ್ನು ಹಾಕಿಸಿಕೊಂಡಿರುತ್ತಾರೆ. ಇನ್ನು ಪ್ರಯಾಣದ ಬಳಿಕ ವಾಹನವನ್ನು ತಂಪಾದ ಜಾಗವನ್ನೇ ಹುಡುಕಿ ನಿಲ್ಲಿಸುತ್ತಾರೆ.

ಇಂತಹ ಬಿಸಿಲಿನ ತಾಪದಿಂದ ಪಾರಾಗಲು ನಾನು ಸಗಣಿಯನ್ನು ನನ್ನ ಕಾರಿಗೆ ಸಂಪೂರ್ಣವಾಗಿ ಬಳಿದಿದ್ದೇನೆ. ಈ ರೀತಿಯಾಗಿ ಸಗಣಿ ಬಳಿಯುವುದರಿಂದ ಬಿಸಿಲಿನ ಬೇಗೆಯಿಂದ ಕಾರನ್ನು ರಕ್ಷಿಸಬಹುದು. ಅಷ್ಟೇ ಅಲ್ಲದೆ, ಬೇಸಿಗೆಯಲ್ಲಿ ಕಾರಿನ ತಾಪಮಾನವು ಏರದೆ ತಂಪಾಗಿದ್ದರೆ, ಚಳಿಗಾಲದಲ್ಲಿ ಕಾರಿನ ಹೊರ ಮೇಲ್ಮೈ ಸಗಣಿಯಿಂದ ಮುಚ್ಚಿರುವುದರಿಂದ ಬೆಚ್ಚಗಿರುತ್ತದೆ. ಇನ್ನು ಕಾರಿನ ನಿಜವಾದ ಬಣ್ಣವು ಎಂದಿಗೂ ಮಾಸುವುದಿಲ್ಲ. ಸಣ್ಣ ಪುಟ್ಟ ಘನ ವಸ್ತುಗಳಿಗೆ ಕಾರು ತಾಕಿದಾಗ ಯಾವುದೇ ಗೆರೆಗಳಾಗುವುದಿಲ್ಲ’ ಎಂದು ಶಾಜಿಲ್ ಶಾಹಿ ತಾವು ನಂಬಿರುವ ವಿಚಾರವಾಗಿ ಉತ್ತರಿಸಿದ್ದಾರೆ.

ಶಾಜಿಲ್ ಶಾಹಿಯವರು ಇನ್ನೊಂದು ಅಚ್ಚರಿಯ ಸಂಗತಿಯನ್ನು ಹಂಚಿಕೊಂಡಿದ್ದಾರೆ. ಅವರು ಕಾರನ್ನು ಖರೀದಿಸಿದ ಪ್ರಾರಂಭದಿಂದಲೂ AC ಯನ್ನು ಆನ್ ಮಾಡಲಿಲ್ಲವಂತೆ ಅಹಮದಾಬಾದ್ ನ ಬಿಸಿಲಿನ ಬಗ್ಗೆ ನಾವೆಲ್ಲರೂ ಕೇಳಿರುತ್ತೇವೆ.

ಗಂಡನನ್ನು ಕಳೆದುಕೊಂಡು 25 ವರ್ಷಗಳ ಕಾಲ ಒಂಟಿಯಾಗಿದ್ದ 52 ವರ್ಷದ ತಾಯಿಯನ್ನು ನೋಡಿ ಮಗಳು ತೆಗೆದುಕೊಂಡ ನಿರ್ಧಾರ ಏನು ನೋಡಿ! ನೀವೂ ಕೂಡ ಎಮೋಷನಲ್ ಆಗುತ್ತೀರಾ..

ಅಂತಹ ಉರಿ ಬಿಸಿಲಲ್ಲೂ ಆರೋಗ್ಯದ ಹಿತದೃಷ್ಟಿಯಿಂದ ಎಸಿಯನ್ನು ಆನ್ ಮಾಡದೆ ಸಗಣಿಯನ್ನು ಬಳಿದುಕೊಂಡು, ಅದರ ಮೇಲೆಯೇ ತಮಗೆ ಬೇಕಾದ ಚಿತ್ತಾರವನ್ನು ಮಾಡಿಕೊಂಡು ಓಡಾಡುವ ಉಪಾಯವನ್ನು ಶಾಜಿಲ್ ಶಾಹಿ ಕಂಡುಕೊಂಡಿರುವುದು ಗಮನಾರ್ಹ.

Leave a Reply

Your email address will not be published. Required fields are marked *