ಗ್ರಹಲಕ್ಷ್ಮಿ ಯೋಚನೆಯ ಮೊದಲನ ಕಂತಿನ ಹಣ ಬಿಡುಗಡೆಯಾಗಿದ್ದು ಹಲವು ಜನರು ಗೃಹಲಕ್ಷ್ಮಿ ಯೋಚನೆ ಉಪಯೋಗವನ್ನು ಪಡೆದುಕೊಂಡಿದ್ದಾರೆ. ಅರ್ಜಿ ಸಲ್ಲಿಸಿದವರಲ್ಲಿ ಸುಮಾರು 80 ಲಕ್ಷ ಜನರಿಗೆ ಮಾತ್ರ ಮೊದಲನೇ ಕಂತಿನ ಹಣವು ದೊರೆತಿದೆ. ಮೊದಲನೇ ಕಂತಿನ ಹಣವನ್ನು ಪಡೆದ ಮಹಿಳೆಯರು ಈಗ ಎರಡನೇ ಕಂತಿನ ಹಣಕ್ಕೆ ಕಾಯುತ್ತಿದ್ದಾರೆ. ಹಾಗಾದ್ರೆ ಯಾವಗ ಈ ಎರಡನೇ ಕಂತಿನ ಹಣ ಬಿಡುಗಡೆಯಾಗಲಿದೆ, ಮತ್ತು ಮೊದಲು ಯಾವ ಯಾವ ಜಿಲ್ಲೆಗಳಿಗೆ ವರ್ಗಾವಣೆ ಆಗಲಿದೆ ಎನ್ನುವ ಮಾಹಿತಿಯನ್ನು ಸಂಪೂರ್ಣವಾಗಿ ತಿಳಿದುಕೊಳ್ಳೋಣ.
ಇನ್ನು ಮೊದಲನೇ ಕಂತಿನ ಹಣ ಬರೆದೆ ಇದ್ದವರು ಪರಿತಪಿಸುತ್ತಿದ್ದಾರೆ ಸರಕಾರಕ್ಕೆ ಬಯ್ಯುತ್ತಿದ್ದಾರೆ. ಎಲ್ಲ ದಾಖಲಾತಿಗಳನ್ನು ಒದಗಿಸಿದರು ಕೂಡ ಹಣವು ಇವರಿಗೆ ಬಂದಿಲ್ಲ. ಗ್ರಹಲಕ್ಷ್ಮಿ ಯೋಜನೆಯ ಹಣವನ್ನು ಪಡೆದುಕೊಳ್ಳಲು ಬಹಳಷ್ಟು ದಾಖಲಾತಿಗಳನ್ನ ಒದಗಿಸಬೇಕಾಗಿದೆ ಮೊದಲನೆಯದಾಗಿ ರೇಷನ್ ಕಾರ್ಡ್ ಮಹಿಳೆಯರ ಹೆಸರಿನಲ್ಲೇ ಇರಬೇಕು ಅಂದರೆ ಯಾರು ಹಣವನ್ನು ಸ್ವೀಕರಿಸುತ್ತಾರೋ ಅವರ ಹೆಸರಿನಲ್ಲೇ ಆ ರೇಷನ್ ಕಾರ್ಡ್ ಇರಬೇಕಾಗುತ್ತದೆ.
ಇನ್ನು ಹಲವು ಮಹಿಳೆಯರಿಗೆ ಈ ಕೆ ವೈ ಸಿ ಪ್ರಕ್ರಿಯೆ ಆಗಿರದ ಕಾರಣ ಅವರಿಗೆ ಇನ್ನೂ ಹಣ ಬಂದು ತಲುಪಿಲ್ಲ. ಈಗಾಗಲೇ ಸರ್ಕಾರ ತಿಳಿಸಿರುವಂತೆ ಪ್ರತಿ ತಿಂಗಳು 26ನೇ ತಾರೀಕಿನ ಒಳಗಡೆ ಮಹಿಳೆಯರ ಖಾತೆಗೆ ಎರಡು ಸಾವಿರ ರೂಪಾಯಿ ಜಮಾ ಆಗುತ್ತದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಸ್ಪಷ್ಟನೆಯನ್ನು ನೀಡಿದ್ದರು. ಆದರೂ ಕೂಡ ಸೆಪ್ಟೆಂಬರ್ 30ರ ನಂತರವೂ ಕೂಡ ಎಷ್ಟು ಮಹಿಳೆಯರ ಖಾತೆಗೆ ಹಣವು ಇನ್ನೂ ಜಮಾಾವಣೆ ಆಗಿಲ್ಲ.
ಇನ್ನು ಎರಡನೇ ಕಂತಿನ ಹಣಕ್ಕೆ ಕಾದು ಕುಳಿತವರಿಗೂ ಕೂಡ ನಿರಾಸೆಯಾಗಿದೆ ಯಾಕೆಂದರೆ ಸೆಪ್ಟೆಂಬರ್ 30ರ ಒಳಗಡೆ ಎರಡನೇ ಕಂತಿನ ಹಣವು ಕೂಡ ವರ್ಗಾವಣೆ ಆಗಬೇಕಿತ್ತು ಮೊದಲನೇ ಕಂತಿನ ಹಣವು ಮಹಿಳೆಯರಿಗೆ ತಲುಪದ ಕಾರಣ ಎರಡನೇ ಕಂತಿನ ಹಣದ ವರ್ಗಾವಣೆ ತಡವಾಗುತ್ತಿದೆ. ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿರುವಂತೆ ಅಕ್ಟೋಬರ್ 15 ರ ಒಳಗಡೆ ಎರಡನೇ ಕಂತಿನ ಹಣವು ಕೂಡ ಎಲ್ಲರ ಖಾತೆಗೆ ಜಮಾವಣೆ ಆಗಲಿದೆ ಎಂದು ಹೇಳಿದ್ದಾರೆ
ಇನ್ನೂ ಮೊದಲನೇ ಕಂತಿನ ಹಣ ಬರದೇ ಇದ್ದವರು ಕೂಡ ತಮ್ಮ ಖಾತೆಯನ್ನು ಸರಿಪಡಿಸಿಕೊಂಡು ಮೊದಲನೇ ಹಾಗೂ ಎರಡನೇ ಕಂತಿನ ಒಟ್ಟು ಹಣವನ್ನು ಒಂದೇ ಬಾರಿ ಖಾತೆಗೆ ವರ್ಗಾಯಿಸಿಕೊಳ್ಳಬಹುದು ಅಂತ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಸ್ಪಷ್ಟನೆಯನ್ನು ನೀಡಿದ್ದಾರೆ. ಇನ್ನು ಕೊನೆಯದಾಗಿ ಒಂದು ಪ್ರಮುಖವಾದ ಅಂಶ ಏನೆಂದರೆ ತಮ್ಮ ಖಾತೆಯನ್ನು ಸರಿಪಡಿಸಲು ಸಾಧ್ಯವಾಗದೆ ಇದ್ದ ಮಹಿಳೆಯರು ನಿಮ್ಮ ಹತ್ತಿರದ ಅಂಗನವಾಡಿ ಕೇಂದ್ರವನ್ನ ಭೇಟಿ ಮಾಡಿ ಶಿಕ್ಷಕರ ಸಹಾಯವನ್ನು ತೆಗೆದುಕೊಂಡು ನೀವು ಎರಡು ಸಾವಿರ ರೂಪಾಯಿಯನ್ನ ನಿಮ್ಮ ಖಾತೆಗೆ ಪಡೆಯಬಹುದಾಗಿದೆ. ನಮ್ಮ ಮಾಹಿತಿ ಇಷ್ಟವಾದಲ್ಲಿ ಲೈಕ್ ಮಾಡಿ ಶೇರ್ ಮಾಡಿ.