ಮಹಿಳೆಯರ ಖಾತೆಗೆ ಗೃಹಲಕ್ಷ್ಮಿ’ 2000 ರೂಪಾಯಿ ಇನ್ನೂ ಜಮಾ ಆಗಿಲ್ವ? ಇಲ್ಲಿದೆ ನೋಡಿ ಅಸಲಿ ಕಾರಣ

ರಾಜ್ಯದಲ್ಲಿನ ಕಾಂಗ್ರೆಸ್‌ ಸರಕಾರ (Karnataka Governament) ಚುನಾವಣಾ ಪೂರ್ವದಲ್ಲಿ ಕೊಟ್ಟ ಭರವಸೆಯನ್ನು ಈಡೇರಿಸುವಲ್ಲಿ ಯಶಸ್ವಿಯಾಗಿದೆ. ಈಗಾಗಲೇ ಕಾಂಗ್ರೆಸ್‌ ಸರಕಾರ ಐದು ಗ್ಯಾರಂಟಿ (Congress Guarantee) ಯೋಜನೆಗಳನ್ನು ಜಾರಿಗೆ ತಂದಿದೆ. ಇತ್ತೀಚೆಗಷ್ಟೇ ಗೃಹಲಕ್ಷ್ಮೀ ಯೋಜನೆಗೆ ಮೈಸೂರಿ (Mysore) ನಲ್ಲಿ ಚಾಲನೆ ನೀಡಲಾಗಿದೆ.

ಈ ವೇಳೆಯಲ್ಲಿ ಹಲವು ಗೃಹಿಣಿಯರ ಖಾತೆಗೆ 2000 ಸಾವಿರ ರೂಪಾಯಿ ಹಣವನ್ನು ವರ್ಗಾವಣೆ ಮಾಡಲಾಗಿದೆ. ಗೃಹಲಕ್ಷ್ಮೀ ಯೋಜನೆ (Gruhalakshmi Scheme) ಗೆ ಅರ್ಜಿ ಸಲ್ಲಿಸಿದ್ದರೂ ಕೂಡ ಬಹುತೇಕ ಮನೆಯ ಯಜಮಾನಿಯರಿಗೆ ಇನ್ನೂ ಗೃಹಲಕ್ಷ್ಮೀ ಯೋಜನೆಯ ಹಣ ಬ್ಯಾಂಕ್‌ ಖಾತೆಗೆ ಜಮಾ ಆಗಿಲ್ಲ. ಆದರೆ, ಮನೆಯೊಡತಿಗೆ ಪ್ರತಿ ತಿಂಗಳು ಕಳೆದೊಂದು ವಾರದಿಂದ ಹಣ ಅವರ ಬ್ಯಾಂಕ್ ಖಾತೆಗೆ ಡಿಬಿಟಿ (DBT) ಮಾಡಲಾಗುತ್ತಿದೆ.

ಕೆಲವರ ಅಕೌಂಟ್‌ಗೆ ಹಣ ಜಮಾ ಆಗದಿರಲು ಆಧಾರ್ ಸೀಡಿಂಗ್ (Adhar Seeding) ಕೂಡಾ ಒಂದು ಕಾರಣ ಆಗಿದೆ. ಹೀಗಾಗಿ ನಿಮ್ಮ ಬ್ಯಾಂಕ್‌ ಖಾತೆಗೆ ನಿಮ್ಮ ಆಧಾರ್ ಕಾರ್ಡ್‌ ಲಿಂಕ್ (Adhar Card Link) ಆಗಿದೆಯಾ ಅಥವಾ ಇಲ್ಲವೇ ಎಂಬುದನ್ನು ಪರೀಕ್ಷಿಸುವುದು ಒಳ್ಳೆಯದು.

ಇಲ್ಲದಿದ್ದರೆ ಸರ್ಕಾರದ ಈ 8147500500 ನಂಬರ್ ಗೆ ರೇಷನ್ ಕಾರ್ಡ್ ನಂಬರ್ (Ration Card Number) ಹಾಕಿ ಮೆಸೇಜ್ ಕಳುಹಿಸಬೇಕಾಗುತ್ತದೆ.ಈ ಮೆಸೇಜ್ ಹಾಕಿದ ತಕ್ಷಣವೇ ನಿಮ್ಮ ಅರ್ಜಿಯ ಸ್ಥಿತಿ ಏನಾಗಿದೆ, ಯಾವ ಹಂತದಲ್ಲಿದೆ ಯಾವ ಹಂತದಲ್ಲಿದೆ ಎನ್ನುವ ಸಂದೇಶ ಕೂಡ ನಿಮಗೆ ಬರುತ್ತದೆ.

ಒಂದು ವೇಳೆ ನಿಮ್ಮ ಖಾತೆಗೆ ಹಣ ಜಮಾ ಆಗುವುದು ವಿಳಂಬವಾಗಿದ್ದರೆ, ನಿಮ್ಮ ಅರ್ಜಿ ತಿರಸ್ಕಾರವಾಗಿದ್ದರೆ ಹಾಗೂ ನೀವು ನೀಡಿರುವ ಮಾಹಿತಿಯು ನಿಮ್ಮ ದಾಖಲೆಯೊಂದಿಗೆ ಹೋಲಿಕೆಯಾಗಲಿದ್ದರೆ ಈ ಎಲ್ಲಾ ಮಾಹಿತಿಯನ್ನು ನೀವಿಲ್ಲಿ ಪಡೆಯಬಹುದಾಗಿದೆ. ಇನ್ನು ಮುಖ್ಯ ವಿಚಾರವೇನೆಂದರೆ ಐದು ಕೆಜಿ ಅಕ್ಕಿಯ ಹಣ ಜಮಾ ಆಗುವ ಬ್ಯಾಂಕ್ ಖಾತೆಗೆ ಮಾತ್ರ ಗೃಹಲಕ್ಷ್ಮಿ ಹಣ ಜಮಾ ಆಗುತ್ತದೆ.

Leave a Reply

Your email address will not be published. Required fields are marked *