ಅ-ಪ್ರಾಪ್ತೆಯನ್ನು ಮದುವೆ ಮಾಡಿಕೊಂಡ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ, ಏಕಾಏಕಿ ತಿರುಗಿ ಬಿದ್ದ ಗ್ರಾಮಸ್ಥರು, ಇಲ್ಲಿದೆ ಅಸಲಿ ವಿಚಾರ

ಮದುವೆ (Marriage) ಎನ್ನುವುದು ಪ್ರತಿಯೊಬ್ಬರ ಜೀವನದ ಹೊಸ ಅಧ್ಯಾಯವಾಗಿದ್ದು, ಇಲ್ಲಿ ಹೊಂದಿಕೆ ಎನ್ನುವುದು ಬಹಳ ಮುಖ್ಯವಾಗಿದೆ. ಅದಲ್ಲದೇ ಒಂದು ಹೆಣ್ಣಿಗೆ ಒಂದು ಗಂಡು ಎಂದು ಮೊದಲೇ ನಿರ್ಧಾರವಾಗಿರುತ್ತದೆ. ಹೀಗಾಗಿ ಹಿರಿಯರು ಮದುವೆಗಳು ಸ್ವರ್ಗದಲ್ಲಿ ನಿಶ್ಚಯವಾಗಿರುತ್ತದೆ.

ಆದರೆ ಎಷ್ಟೋ ಮದುವೆಗಳು ಮದುವೆ ಮಂಟಪದಲ್ಲಿಯೇ ಮು-ರಿದು ಬೀಳುತ್ತದೆ.ಆದರೆ ಕೆಲವೊಮ್ಮೆ ಮದುವೆಯ ವೇಳೆಯಲ್ಲಿ ಬೇಡದ ಎ-ಡವಟ್ಟುಗಳನ್ನು ಮಾಡಿಬಿಡುತ್ತೇವೆ. ಕೆಲವೊಮ್ಮೆ ಮದುವೆಯಾಗಬೇಕೆಂದು ಹ-ಠಕ್ಕೆ ಬಿದ್ದು ಮಾಡುವ ಕೆಲಸಗಳು ಕು-ತ್ತಿಗೆಗೆ ಉರುಳಾಗಬಹುದು. ಇಂತಹದೊಂದು ಘಟನೆಯು ನಂಜನಗೂಡು (Nanjanagudu) ತಾಲೂಕಿನಲ್ಲಿ ನಡೆದಿದೆ.

ಆಧಾರ್​ (Aadhar)ತಿದ್ದುಪಡಿ ಮಾಡಿ ಅ-ಪ್ರಾಪ್ತೆಯನ್ನು ಅದ್ಧೂರಿಯಾಗಿ ಮದುವೆ ಮಾಡಿಕೊಂಡಿರುವ ಆ-ರೋಪಕ್ಕೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ (Gram Panchayat Vice President)ನು ಸಿಲುಕಿಕೊಂಡಿದ್ದಾರೆ. ಹಾಡ್ಯ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಹರೀಶ್ ಕುಮಾರ್ (Harish Kumar) ಎನ್ನುವಾತ ಅ-ಪ್ರಾಪ್ತೆಯನ್ನು ಮದುವೆಯಾದವನು.

ಈ ಹರೀಶ್ ಅರಿಯೂರು ಗ್ರಾಮ (Ariyur Gram) ದ ನಿವಾಸಿಯಾಗಿದ್ದು, ಇದೀಗ ಮದುವೆಯ ದಿನವೇ ಈ ರೀತಿಯ ಆ-ರೋಪವೊಂದು ಈತನ ಮೇಲೆ ಕೇಳಿ ಬಂದಿದೆ. ಹೌದು, ಈ ಹರೀಶ್ ಕುಮಾರ್ ಎನ್ನುವ ವ್ಯಕ್ತಿಯೂ ಆಧಾರ್ ಕಾರ್ಡ್​ನಲ್ಲಿನ ಹುಟ್ಟಿದ ದಿನಾಂಕವನ್ನು ತಿದ್ದುಪಡಿ ಮಾಡಿ ಅ-ಪ್ರಾಪ್ತೆಯನ್ನು ಮದುವೆ ಮಾಡಿಕೊಂಡಿದ್ದಾನೆ ಎಂದು ಆ ಗ್ರಾಮಸ್ಥರೇ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ದೂರು ನೀಡಿದ್ದಾರೆ.

ಈ ಹಿನ್ನಲೆಯಲ್ಲಿ ಹರೀಶ್​ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ. ಶಾಲಾ ದಾಖಾಲಾತಿಯನ್ನು ಸಾಕ್ಷಿಯಾಗಿನೀಡಿ, ಅದರ ಪ್ರಕಾರ ವಧುವಿಗೆ ಇನ್ನೂ 18 ವರ್ಷ ಕೂಡ ತುಂಬಿಲ್ಲ. ಆದರೆ, ಆಧಾರ್​ ಕಾರ್ಡ್​ ತಿದ್ದುಪಡಿ ಮೂಲಕ ವಯಸ್ಸನ್ನು ಬದಲಾಯಿಸಿಕೊಂಡು ಮದುವೆಯಾಗಿದ್ದಾರೆ ಎನ್ನುವುದು ದೂರಿನಲ್ಲಿ ಸ್ಪಷ್ಟವಾಗಿ ಉಲ್ಲೇಖ ಮಾಡಲಾಗಿದೆ.

ಇದೇ ವರ್ಷದ ಫೆ. 15ರಂದು ನಂಜನಗೂಡಿನಲ್ಲಿ ಅದ್ಧೂರಿಯಾಗಿ ಮದುವೆಯಾಗಿದ್ದರು ಈ ಹರೀಶ್ ಕುಮಾರ್. ಮದುವೆಯಾಗಿ 7 ತಿಂಗಳು ಕಳೆದ ಬಳಿಕ ಹರೀಶ್​ ವಿರುದ್ಧ ದಾಖಲೆ ಸಮೇತ ದೂರು ನೀಡಿದ್ದಾರೆ. ಇಷ್ಟು ತಿಂಗಳಿನಿಂದ ಸುಮ್ಮನಿದ್ದ ಈ ಗ್ರಾಮಸ್ಥರು ಇದೀಗ ಏಕಾಏಕಿ ಉಪಾಧ್ಯಕ್ಷ ಹರೀಶ್​ ಕುಮಾರ್​ ವಿರುದ್ಧ ದೂ-ರು ದಾಖಲು ಮಾಡಿದ್ದು ಯಾಕೆ ಎನ್ನುವ ಪ್ರಶ್ನೆಯೊಂದು ಹುಟ್ಟಿಕೊಂಡಿದೆ. ಈತನ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಆಗ್ರಹ ಪಡಿಸಿದ್ದು, ಈ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಅಸಲಿ ವಿಚಾರಗಳು ತನಿಖೆಯಿಂದಷ್ಟೇ ಬಯಲಿಗೆ ಬರಬೇಕಿದೆ.

Leave a Reply

Your email address will not be published. Required fields are marked *