Gowri khan cheated customer : ಬಾಲಿವುಡ್ ನಟ ಶಾರುಖ್ ಖಾನ್ ಅವರ ಪತ್ನಿ ಗೌರಿ ಖಾನ್ ವಿರುದ್ಧ ಎಫ್ ಐಆರ್ ದಾಖಲು ಅಸಲಿ ವಿಚಾರವೇನು ಗೊತ್ತಾ? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.. ಸಿನಿಮಾ ಲೋಕ ಎಂದರೆ ಬಣ್ಣ ಬಣ್ಣಗಳಿಂದ ಕೂಡಿದ್ದು, ನೋಡಲು ಸುಂದರವಾಗಿ ಕಂಡರೂ ಈ ಲೋಕದಲ್ಲಿ ಒಳ್ಳೆಯದು ಕೆಟ್ಟದು ಎರಡು ಇದೆ. ಈ ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟು ಅದೃಷ್ಟ ಪರೀಕ್ಷೆಗೆ ಇಳಿದು ಸ್ಟಾರ್ ನಟರಾಗಿ ಬೆಳೆಯಬೇಕು ಎಂದು ಬಂದವರು ಎಲ್ಲರೂ ಕೂಡ ಯಶಸ್ಸು ಕಾಣುವುದಿಲ್ಲ.
ಒಮ್ಮೆ ಸೆಲೆಬ್ರಿಟಿಯಾದ ಮೇಲೆ ಗಾಸಿಫ್ ಗಳ ಬಾಯಿಗೂ ತುತ್ತಾಗುವುದು ಸಹಜ. ವಿವಾದಗಳಿಗೂ ಕೂಡ ಹೆಚ್ಚಿನ ನಟ ನಟಿಯರು ಗುರಿಯಾಗುವುದಿದೆ. ಶಾರುಖ್ ಖಾನ್ ಅವರಿಗೆ ಬಹುವರ್ಷಗಳ ಬಳಿಕ ‘ಪಠಾಣ್’ ಸಿನಿಮಾದಲ್ಲಿ ಯಶಸ್ಸು ಕಂಡಿದ್ದಾರೆ. ಈ ಸಿನಿಮಾದ ಗೆಲುವನ್ನು ಶಾರುಖ್ ಕುಟುಂಬದವರು ಎಂಜಾಯ್ ಮಾಡುತ್ತಿದ್ದಾರೆ. ಈ ನಡುವೆ ಶಾರುಖ್ ಖಾನ್ ಅವರ ಕುಟುಂಬಸ್ಥರಿಗೆ ತಲೆ ನೋವೊಂದು ಎದುರಾಗಿದೆ.
ಹೌದು, ಬಾಲಿವುಡ್ ನಟ ಶಾರುಖ್ ಖಾನ್ ಅವರ ಪತ್ನಿ ಗೌರಿ ಖಾನ್ ವಿರುದ್ಧ ಇಲ್ಲಿನ ಪೊಲೀಸರು ವಂ-ಚನೆ ಪ್ರಕರಣ ದಾಖಲಿಸಿಕೊಂಡಿದ್ದು, ಸದ್ಯಕ್ಕೆ ಈ ವಿಚಾರವು ಸುದ್ದಿಯಲ್ಲಿದೆ. ಹೌದು, ಗೌರಿ ಖಾನ್ ರಾಯಭಾರತ್ವ ವಹಿಸಿದ್ದ ತುಳಸಿಯಾನಿ ಕಂಪನಿಯು ವ್ಯಕ್ತಿಯೊಬ್ಬರಿಗೆ ನಿಗದಿತ ಸಮಯದಲ್ಲಿ ಫ್ಲ್ಯಾಟ್ ನೀಡದ ಹಿನ್ನೆಲೆಯಲ್ಲಿ ಗ್ರಾಹಕರೊಬ್ಬರು ಗೌರಿ ಮತ್ತು ಕಂಪನಿಯ ನಿರ್ದೇಶಕರ ವಿರುದ್ಧ ದೂ-ರು ನೀಡಿದ್ದಾರೆ ಎನ್ನಲಾಗಿದೆ.
ಅಂದಹಾಗೆ, ಮುಂಬೈನ ಅಂಧೇರಿ ಪೂರ್ವ ಪ್ರದೇಶದ ನಿವಾಸಿ ಕಿರಿತ್ ಜಸ್ವಂತ್ ಸಾಹ್ ಎಂಬುವವರು ತುಳಸಿಯಾನಿ ಕಂಪನಿಯ ನಿರ್ಮಾಣದ ಬಹುಮಹಡಿ ಕಟ್ಟಡದಲ್ಲಿ ಫ್ಲ್ಯಾಟ್ ಖರೀದಿ ಮಾಡಿದ್ದರು. ಈ ಫ್ಲ್ಯಾಟ್ ಗಾಗಿ ಅವರು 86 ಲಕ್ಷ ರೂಪಾಯಿಗೆ ಒಪ್ಪಂದ ಮಾಡಿಕೊಂಡಿದ್ದರು. ಕಂಪನಿ ನಿರ್ಮಿಸುತ್ತಿರುವ ಟೌನ್ಶಿಪ್ಗೆ ಶಾರೂಖ್ ಖಾನ್ ಅವರ ಪತ್ನಿ ಗೌರಿ ಖಾನ್ ರಾಯಭಾರಿಗಳಾಗಿದ್ದರು.
ಗ್ರಾಹಕ ಕಿರಿತ್ ಜಸ್ವಂತ್ ಸಾಹ್ ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಹೇಳುವಂತೆ , 2015 ರಲ್ಲಿ ಗೌರಿ ಖಾನ್ ಅವರು ಲಖನೌದ ತುಳಸಿಯಾನಿ ಕಂಪನಿಯ ಪ್ರಚಾರ ಮಾಡುವುದನ್ನು ನೋಡಿದ್ದೆ. ಅದರಲ್ಲಿ ತುಳಸಿಯಾನಿ ಕಂಪನಿಯು ಸುಶಾಲ್ ಗಾಲ್ಫ್ ಸಿಟಿ ಪ್ರದೇಶದಲ್ಲಿ ಗಾಲ್ಫ್ ವ್ಯೂ ಎಂಬ ಹೆಸರಿನಲ್ಲಿ ಟೌನ್ಶಿಪ್ ನಿರ್ಮಾಣ ಮಾಡುತ್ತಿದೆ ಎಂದು ಪ್ರಚಾರ ಮಾಡಲಾಗಿತ್ತು. ಈ ಜಾಹೀರಾತಿನ ಬಳಿಕ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಅನಿಲ್ ಕುಮಾರ್ ತುಳಸಿಯಾನಿ ಮತ್ತು ನಿರ್ದೇಶಕ ಮಹೇಶ್ ತುಳಸಿಯಾನಿ ಅವರನ್ನು ಸಂಪರ್ಕಿಸಿ ಒಂದು ಫ್ಲ್ಯಾಟ್ ಖರೀದಿಗೆ ಮಾತುಕತೆ ನಡೆಸಿದ್ದೆ.
ಹೀಗಿರುವಾಗ 86 ಲಕ್ಷಕ್ಕೆ ಒಪ್ಪಂದ ಮಾಡಿಕೊಂಡಿದ್ದು, 2015ರ ಆಗಸ್ಟ್‌ನಲ್ಲಿ ಫ್ಲಾಟ್‌ಗಾಗಿ ಬ್ಯಾಂಕ್‌ನಿಂದ ಸಾಲ ಪಡೆದು 85.46 ಲಕ್ಷ ರೂಪಾಯಿ ಪಾವತಿ ಮಾಡಿದೆ. ತುಳಸಿಯಾನಿ ಕಂಪನಿಯು 2016ರ ಅಕ್ಟೋಬರ್‌ನಲ್ಲಿ ಫ್ಲಾಟ್ ಹಸ್ತಾಂತರಿಸುವುದಾಗಿ ಹೇಳಿತ್ತು.ಆದರೆ ಕಂಪನಿಯು ನಿಗದಿತ ಸಮಯದೊಳಗೆ ನೀಡದ ಕಾರಣ 22.70 ಲಕ್ಷ ರೂ.ಗಳನ್ನು ಪರಿಹಾರ ನೀಡಿತ್ತು. ಈ ವೇಳೆ ಆರು ತಿಂಗಳಲ್ಲಿ ನಿವಾಸವನ್ನು ನೀಡುವುದಾಗಿ ಭರವಸೆ ನೀಡಿದ್ದರು.
ಈ ಭರವಸೆಯೂ ನೆರವೇರಿಸಲು ಸಾಧ್ಯವಾಗದೇ ಹೋದರೆ, ಮೊತ್ತವನ್ನು ಹಿಂತಿಗಿಸುತ್ತೇವೆ ಎಂದು ಕಂಪನಿ ಹೇಳಿತ್ತು. ಆದರೆ ಈ ನಡುವೆ ಕಂಪನಿ ಬೇರೆಯವರಿಗೆ ಮಾರಾಟ ಮಾಡಲಾಗಿದೆ. ಅಷ್ಟೇ ಅಲ್ಲದೇ ಒಪ್ಪಂದವೂ ಕೂಡ ಮುಗಿದಿದ್ದು, ತಾನು ಖರೀದಿ ಮಾಡಿದ ಫ್ಲಾಟ್ ಸೇರಿ ಎಲ್ಲವನ್ನೂ ಇನ್ನೊಬ್ಬರಿಗೆ ಮಾರಾಟ ಮಾಡಲಾಗಿದ್ದು, ನನಗೆ ಲಕ್ಷಾಂತರ ರೂಪಾಯಿ ಮೋಸ ಉಂಟಾಗಿದೆ ಎಂದು ಕಳೆದ ಫೆಬ್ರವರಿ 25 ರಂದು ಸುಶಾಂತ್ ಗಾಲ್ಫ್ ಸಿಟಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲು ಮಾಡಿದ್ದಾರೆ.
ಗ್ರಾಹಕನ ದೂರಿನ ಮೇರೆಗೆ ತುಳಸಿಯಾನಿ ಕಂಪನಿಯ ಅನಿಲ್ ಕುಮಾರ್ ತುಳಸಿಯಾನಿ, ಮಹೇಶ್ ತುಳಸಿಯಾನಿ ಮತ್ತು ಗೌರಿ ಖಾನ್ ವಿರುದ್ಧ ವಂ-ಚನೆ ಆರೋಪದಡಿ ಎಫ್‌ಐಆರ್ ದಾಖಲಿಸಲಾಗಿದೆ. ತನಿಖೆಯ ನಂತರ ಮುಂದಿನ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಸುಶಾಂತ್ ಗಾಲ್ಫ್ ಸಿಟಿ ಇನ್ಸ್‌ಪೆಕ್ಟರ್ ಶೈಲೇಂದ್ರ ಗಿರಿ ಹೇಳಿದ್ದಾರೆ. ಸದ್ಯಕ್ಕೆ ಈ ಶಾರುಖ್ ಖಾನ್ ಪತ್ನಿ ವಿರುದ್ಧ ದೂರು ದಾಖಲಾಗಿದ್ದು, ಈ ಪ್ರಕರಣವು ಯಾವ ಹಂತಕ್ಕೆ ತಲುಪುತ್ತದೆ ಎನ್ನುವುದನ್ನು ಕಾದು ನೋಡಬೇಕು.