ಮನೆ ಕಟ್ಟುವುದು ಬಹುತೇಕರ ಕನಸು. ತಮ್ಮದೇ ಸ್ವಂತವಾದ ಮನೆ ಹೊಂದುವ ಕನಸನ್ನು ನನಸು ಮಾಡಿಕೊಳ್ಳಲು ಸಾಕಷ್ಟು ಜನರು ತಾವು ದುಡಿದ ಅಲ್ಪ ಸ್ವಲ್ಪ ಹಣವನ್ನು ಕೂಡಿಡುತ್ತಾರೆ. ಆದರೆ ಮಧ್ಯಮವರ್ಗದ ಜನರಿಗೆ ಜಾಗ ಖರೀದಿಸಿ ಮನೆ ಕಟ್ಟುವುದು ಅಷ್ಟು ಸುಲಭವಲ್ಲ. ಹೀಗಾಗಿ ತಮ್ಮ ಬಳಿಯಿರುವ ಕೃಷಿ ಭೂಮಿಯಲ್ಲಿ ಮನೆ ಹಾಗೂ ಕಟ್ಟಡ (Commercial building)ಗಳ ನಿರ್ಮಾಣ ಮಾಡುತ್ತಿದ್ದಾರೆ.
ಆದರೆ ಇದೀಗ ಕೃಷಿ ಭೂಮಿಯಲ್ಲಿ ಮನೆ ಕಟ್ಟುವ ಮುನ್ನ ಪ್ಲಾನ್ ಹೊಂದಿದ್ದರೆ ಸರ್ಕಾರದ ಈ ನಿಯಮಗಳನ್ನು ಪಾಲಿಸುವುದು ಅಗತ್ಯ. ಹೌದು, ಕೃಷಿ ಭೂಮಿಯಲ್ಲಿ ಮನೆ ಕಟ್ಟುವುದಕ್ಕೆ ಸರ್ಕಾರ (Government) ಅದರದೇ ರೂಲ್ಸ್ (rules) ಹೊಂದಿದೆ. ಕೃಷಿ ಭೂಮಿಯಲ್ಲಿ ಮನೆ ನಿರ್ಮಾಣ ಮಾಡಿಕೊಳ್ಳಲೇಬಾರದು ಎನ್ನಲಾಗಿದೆ. ಇಲ್ಲಿ ಮುಖ್ಯ ವಿಚಾರವೆಂದರೆ ಕೃಷಿ ಭೂಮಿಯ ಮಾಲೀಕರೇ ಆಗಿದ್ದರೂ ಕೂಡ ಆ ಜಮೀನಿನಲ್ಲಿ ಮನೆಯಲ್ಲಿ ನಿರ್ಮಿಸಿಕೊಳ್ಳಲು ಸರ್ಕಾರದ ಅನುಮತಿ (Government Permission) ಯನ್ನು ಪಡೆಯುವುದು ಕಡ್ಡಾಯವಾಗಿದೆ.
ಸರ್ಕಾರದ ನಿಯಮಗಳ ಪ್ರಕಾರವಾಗಿ ಕೃಷಿ ಭೂಮಿಯಲ್ಲಿ ಮನೆ ನಿರ್ಮಾಣ ಅಥವಾ ಕಮರ್ಷಿಯಲ್ ಕಟ್ಟಡ ನಿರ್ಮಾಣ ಮಾಡುವ ಹಾಗೆ ಇಲ್ಲ. ಕೃಷಿ ಭೂಮಿ ಹೊಂದಿರುವವರು ವಾಸ ಯೋಗ್ಯ ಭೂಮಿ ಎಂದು ಕನ್ವರ್ಷನ್ (convert) ಮಾಡಿಕೊಳ್ಳಬೇಕು. ಭೂಮಿ ಕನ್ವರ್ಷನ್ ಮಾಡಬೇಕಾದರೆ ಸಂಬಂಧಪಟ್ಟ ದಾಖಲೆಗಳನ್ನು ರಾಜ್ಯ ಆದಾಯ ಇಲಾಖೆಯ ಕಚೇರಿಗೆ ಸಲ್ಲಿಸಿ ಕನ್ವರ್ಷನ್ ಮಾಡಿಕೊಳ್ಳಬಹುದು.
ಇದಕ್ಕಾಗಿ ಗ್ರಾಮ ಪಂಚಾಯತ್ ಮುನ್ಸಿಪಾಲಿಟಿ ಹಾಗೂ ಇನ್ನಿತರ ಕಚೇರಿಯಿಂದ ಎನ್ ಓ ಸಿ (no objection certificate-NOC) ಪಡೆದುಕೊಳ್ಳಬೇಕು.ಅದಲ್ಲದೇ ಖರೀದಿಸುವ ಜಮೀನಿನ ಮೇಲೆ ಸಾಲವಿದೆಯೇ ಎನ್ನುವುದನ್ನು ಪರಿಶೀಲನೆ ಮಾಡುವುದು ಮುಖ್ಯ. ಒಂದು ವೇಳೆ ನಿಮ್ಮದೇ ಜಮೀನನ್ನು ಮನೆ ಕಟ್ಟುವುದಾದರೆ ಸಾಲವಿದೆಯೇ ಎನ್ನುವುದು ತಿಳಿದಿರುತ್ತವೆ.
ರಾಜ್ಯ ಆದಾಯ ಇಲಾಖೆ (State Income Department) ಯಿಂದ NOC ಪಡೆದುಕೊಳ್ಳದೆ ಮನೆ ಕಟ್ಟುವ ಕೆಲಸಕ್ಕೆ ಇಳಿದರೆ ಸರ್ಕಾರದ ನಿಯಮವನ್ನು ಉಲ್ಲೇಖಿಸಿದ್ದಕ್ಕೆ ಕಟ್ಟಡ ಕಾಮಗಾರಿಯನ್ನು ಅರ್ಧಕ್ಕೆ ನಿಲ್ಲಿಸುವ ಸಾಧ್ಯತೆಯು ಇರುತ್ತದೆ. ಹೀಗಾಗಿ ಕೃಷಿ ಭೂಮಿಯಲ್ಲಿ ಮನೆ ನಿರ್ಮಾಣಕ್ಕೆ ಕೈ ಹಾಕುವ ಮುನ್ನ ಸರ್ಕಾರದ ಈ ನಿಯಮವನ್ನು ಅನುಸರಿಸಿ ಮನೆ ನಿರ್ಮಾಣಕ್ಕೆ ಕೈ ಹಾಕುವುದು ಉತ್ತಮವಾಗಿದೆ.