ಒಂದೇ ಸಲ ಇಬ್ಬರ ಜೊತೆ ಡೇಟಿಂಗ್ ಮಾಡಬೇಡ ಎಂದು ಮಗಳಿಗೆ ಬುದ್ದಿ ಹೇಳಿದ ಶಾರುಖ್ ಖಾನ್ ಪತ್ನಿ ಗೌರಿ ಖಾನ್! ಅಸಲಿ ಕಾರಣ ತಿಳಿದು ಬಾಲಿವುಡ್ ಶೇಕ್!!

ಬಾಲಿವುಡ್ ಸಿನಿಮಾರಂಗದಲ್ಲಿ ಖ್ಯಾತಿ ಗಳಿಸಿದ ನಟರಲ್ಲಿ ಶಾರುಖ್ ಖಾನ್ ಕೂಡ ಒಬ್ಬರು. ಬಾಲಿವುಡ್‌ ಬಾದ್‌ಷಾ, ಕಿಂಗ್ ಖಾನ್ ಹೆಸರು ಪಡೆದಿರುವ ಇವರು ಖ್ಯಾತ ನಟರಾಗಿ ಹೊರ ಹೊಮ್ಮಿದ್ದವರು. ಖ್ಯಾತ ರಂಗನಿರ್ದೇಶಕ ‘ಬ್ಯಾರ್ರಿ ಜಾನ್‌’ ರ ಗರಡಿಯಲ್ಲಿ ದೆಹಲಿಯ ಥಿಯೇಟರ್‌ ಆಕ್ಷನ್‌ ಗ್ರೂಪ್‌ ನ ಮೂಲಕ ನಟನೆಯಲ್ಲಿ ಪಳಗಿದರು ಶಾರುಖ್ ಖಾನ್.

1980ರ ದಶಕದ ಕೊನೆಯಲ್ಲಿ ಅನೇಕ ಕಿರುತೆರೆ ಧಾರಾವಾಹಿಗಳಲ್ಲಿ ಕಾಣಿಸಿಕೊಳ್ಳುತ್ತಾ ತಮ್ಮ ನಟನಾ ಬದುಕನ್ನು ಶುರು ಮಾಡಿದರು. ಹಿಟ್ ಸಿನಿಮಾಗಳನ್ನು ನೀಡಿದರೂ ಕೆಲವು ಸಿನಿಮಾಗಳ ಮೂಲಕ ಸೋತುಕಂಡರು. ಬಾಲಿವುಡ್ ರಂಗದಲ್ಲಿ ಶಾರುಖ್ ಖಾನ್ ಅವರ ಬೇಡಿಕೆ ಮಾತ್ರ ಕುಗ್ಗಿಲ್ಲ. ಶಾರುಖ್ ಖಾನ್ ಪತ್ನಿ ಹಾಗೂ ಮಕ್ಕಳು ಆಗಾಗ ಸುದ್ದಿಯಲ್ಲಿರುತ್ತಾರೆ.

ಬಾಲಿವುಡ್ ನಟ ಶಾರುಖ್ ಖಾನ್ ಅವರ ಪತ್ನಿ ಗೌರಿ ಖಾನ್ ಅವರು ಕರಣ್ ಜೋಹರ್ ಅವರ ಚಾಟ್ ಶೋ ಕಾಫಿ ‘ವಿತ್ ಕರಣ್ ಎಸ್ 7’ ನ ಮುಂದಿನ ಸಂಚಿಕೆಯಲ್ಲಿ ಶೀಘ್ರದಲ್ಲೇ ಕಾಣಿಸಿಕೊಳ್ಳಲಿದ್ದಾರೆ. ಈ ಕಾರ್ಯಕ್ರಮದ ಹೊಸ ಪ್ರೋಮೋವನ್ನು ಕರಣ್ ಜೋಹರ್ ಸೋಶಿಯಲ್ ಮೀಡಿಯಾಗಳಲ್ಲಿ ಹಂಚಿಕೊಂಡಿದ್ದಾರೆ. ಈ ಪ್ರೋಮೊದಲ್ಲಿ ಶಾರುಖ್ ಖಾನ್ ಪತ್ನಿ ಗೌರಿ ಖಾನ್ ತಮ್ಮ ಮಗಳು ಸುಹಾನಾ ಖಾನ್ ಗೆ ಸಲಹೆಯನ್ನು ನೀಡಿದ್ದಾರೆ.

ಅಂದಹಾಗೆ, ‘ಕಾಫಿ ವಿತ್ ಕರಣ್ – 7’ ಸಂಚಿಕೆಯಲ್ಲಿ ಗೌರಿ ಖಾನ್ ಜೊತೆಗೆ ಚಂಕಿ ಪಾಂಡೆ ಅವರ ಪತ್ನಿ ಭಾವನಾ ಪಾಂಡೆ ಮತ್ತು ಸಂಜಯ್ ಕಪೂರ್ ಅವರ ಪತ್ನಿ ಮಹೀಪ್ ಕಪೂರ್ ಕಾಣಿಸಿಕೊಳ್ಳಲಿದ್ದಾರೆ. ಸದ್ಯಕ್ಕೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಪ್ರೋಮೋದ ಆರಂಭದಲ್ಲಿ ಕರಣ್ ಜೋಹರ್ ಎಂದಿನಂತೆ ತಮ್ಮ ಅತಿಥಿಗಳನ್ನು ಸ್ವಾಗತಿಸುತ್ತಾರೆ. ಈ ವೇಳೆಯಲ್ಲಿ ಕರಣ್ ಅವರು ಸುಹಾನಾ ಖಾನ್‌ಗೆ ಏನು ಸಲಹೆ ನೀಡಲು ಬಯಸುತ್ತೀರಿ ಎಂದು ಗೌರಿ ಖಾನ್‌ಗೆ ಕೇಳಿದರು. ಅದಕ್ಕೆ ಗೌರಿ ಖಾನ್: ಏಕಕಾಲದಲ್ಲಿ ಒಬ್ಬ ಹುಡುಗನ ಜೊತೆ ಮಾತ್ರ ಡೇಟ್ ಮಾಡು’ ಎಂದರು.

ಗೌರಿ ಖಾನ್ ಮಾತು ಕೇಳಿ ಕರಣ್ ಜೋಹರ್ ಜೋರಾಗಿ ನಗಲು ಪ್ರಾರಂಭಿಸುತ್ತಾರೆ. ತದನಂತರ ಮಹೀಪ್ ಕಪೂರ್ ಅವರನ್ನು ಯಾವ ಬಾಲಿವುಡ್ ನಟನೊಂದಿಗೆ ಕೆಲಸ ಮಾಡಲು ಬಯಸುತ್ತೀರ? ಎಂದು ಕೇಳಿದರು. ಈ ಪ್ರಶ್ನೆಗೆ ಉತ್ತರಿಸಿರುವ ಮಹೀಪ್ ಕಪೂರ್, ಹೃತಿಕ್ ರೋಷನ್ ಹೆಸರನ್ನು ಹೇಳುತ್ತ “ಅವರ ಲುಕ್ಸ್ ಚೆನ್ನಾಗಿದೆ, ನೋಡಲು ಸ್ಮಾರ್ಟ್ ಇದಾರೆ, ನಾನೂ ಅವರೊಂದಿಗೆ ಚೆನ್ನಾಗಿ ಕಾಣುತ್ತೇನೆ“ ಎಂದರು.

ಆ ಬಳಿಕ, ಕರಣ್ ಜೋಹರ್ ಅನನ್ಯಾ ಪಾಂಡೆ ಅವರ ತಾಯಿ ಭಾವನಾ ಪಾಂಡೆ ಅವರನ್ನು ಯಾವ ಬಾಲಿವುಡ್ ಸೆಲೆಬ್ರಿಟಿಯೊಂದಿಗೆ ಕೆಲಸ ಮಾಡಲು ಬಯಸುತ್ತೀರಿ ಎಂದು ಕೇಳುತ್ತಾರೆ. ಕರಣ್ ಕೇಳಿದ ಪ್ರಶ್ನೆಗೆ ಉತ್ತರ ನೀಡಿದ ಭಾವನಾ, “ಹಲವು ಜನರೊಂದಿಗೆ” ಎಂದು ಹೇಳುತ್ತಾರೆ. ಇನ್ನು, ಕರಣ್ ಜೋಹರ್ ಮತ್ತೆ ಗೌರಿ ಖಾನ್ ಅವರನ್ನು ಯಾವ ಚಿತ್ರದ ಟೈಟಲ್ ನೊಂದಿಗೆ ನಿಮ್ಮ ಮತ್ತು ಶಾರುಖ್ ಖಾನ್ ಅವರ ಪ್ರೇಮಕಥೆಯನ್ನು ವ್ಯಾಖ್ಯಾನಿಸಲು ಬಯಸುತ್ತೀರಿ? ಎಂದು ಕೇಳುತ್ತಾರೆ.

ಇದಕ್ಕೆ ಗೌರಿ ಖಾನ್ ಅವರು ದಿಲ್ವಾಲೆ ದುಲ್ಹನಿಯಾ ಲೇ ಜಾಯೇಂಗೆ. ಏಕೆಂದರೆ ಆ ಚಿತ್ರ ನನಗೆ ತುಂಬಾ ಇಷ್ಟ” ಎಂದು ಹೇಳುತ್ತಾರೆ. ಕೊನೆಗೆ ‘ಕಾಫಿ ವಿತ್ ಕರಣ್ S7’ ನ ಈ ಪ್ರೋಮೋದಲ್ಲಿ, ಕರಣ್ ಜೋಹರ್ ಅವರು ತಮ್ಮ ತಮ್ಮ ಚಾಯ್ಸ್‌ನ ಸೆಲೆಬ್ರಿಟಿಗಳಿಗೆ ಕರೆ ಮಾಡಲು ಮೂವರನ್ನೂ ಹೇಳುತ್ತಾರೆ. ಗೌರಿ ಖಾನ್ ಶಾರುಖ್ ಖಾನ್ ಗೆ ಕಾಲ್ ಮಾಡುತ್ತಾರೆ. ಇದಕ್ಕೆ ಕರಣ್, “ಶಾರುಖ್ ಕಾಲ್ ರಿಸೀವ್ ಮಾಡಿದರೆ, ನಾನು ನಿಮಗೆ ಫಿಕ್ಸ್ ಪಾಯಿಂಟ್ ನೀಡುತ್ತೇನೆ” ಎನ್ನುತ್ತಾರೆ. ಆಗ ಶಾರುಖ್ ಖಾನ್ ಅವರೇ ಫೋನ್ ಪಿಕ್ ಮಾಡಿ ‘ಹಾಯ್ ಕರಣ್’ ಎಂದು ಹೇಳುವ ಮೂಲಕ ಪ್ರತಿಕ್ರಿಯಿಸುತ್ತಾರೆ. ಒಟ್ಟಿನಲ್ಲಿ ಈ ಪ್ರೋಮೊವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

Leave a Reply

Your email address will not be published. Required fields are marked *