ಸೆಪ್ಟೆಂಬರ್ ತಿಂಗಳಲ್ಲಿ ಕುಂಭ ರಾಶಿಯವರಿಗೆ ಗುಡ್ ನ್ಯೂಸ್, ಈ ವಿಚಾರದಲ್ಲಿ ಎಚ್ಚರಿಕೆ ಅಗತ್ಯ, ಇಲ್ಲಿದೆ ಅಸಲಿ ವಿಚಾರ

ರಾಶಿ ಚಕ್ರದಲ್ಲಿಯಾಗುವ ಬದಲಾವಣೆಗಳು ಕೆಲವು ರಾಶಿಗಳ ಮೇಲೆ ಧನಾತ್ಮಕ ಹಾಗೂ ಋಣಾತ್ಮಕ ಪರಿಣಾಮ ವನ್ನು ಬೀರುತ್ತದೆ. ಸೆಪ್ಟೆಂಬರ್ ತಿಂಗಳಲ್ಲಿ ಕುಂಭ ರಾಶಿಯವರು ಶುಭ ಸಮಾಚಾರಗಳು ಕೇಳುತ್ತಾರೆ. ಹೌದು ಈ ಕುಂಭ ರಾಶಿಯವರ ಐದನೇ ಮನೆಯಲ್ಲಿ ರಾಹುವಿದ್ದಾನೆ. ಲಾಭ ಸ್ಥಾನದಲ್ಲಿ ಕೇತುವಿದ್ದಾನೆ. ಹೀಗಾಗಿ ಲಾಭದಾಯಕ (Profit) ಹಾಗೂ ಶುಭ ಸಮಾಚಾರ (Good News) ಗಳಿದ್ದರೂ, ಕೆಲವು ವಿಚಾರಗಳಿಂದ ಸ್ವಲ್ಪ ಎಚ್ಚರ ವಹಿಸಬೇಕಾಗುತ್ತದೆ.

ಕುಂಭ ರಾಶಿಯವರು ಈ ಸೆಪ್ಟೆಂಬರ್ (September) ತಿಂಗಳಲ್ಲಿ ಕ-ಳ್ಳರ ವಿಚಾರದಲ್ಲಿ ಜಾಗರೂಕರಾಗಿರುವುದು ಉತ್ತಮ. ಹಣ, ಒಡವೆ, ಮೊಬೈಲ್ ಫೋನ್ ಸೇರಿದಂತೆ ದುಬಾರಿ ಬೆಲೆಯ ವಸ್ತುಗಳನ್ನು ಆದಷ್ಟು ಜಾಗರೂಕರಾಗಿಟ್ಟುಕೊಳ್ಳುವುದು ಒಳ್ಳೆಯದು. ಅಷ್ಟೇ ಅಲ್ಲದೇ ಈ ವಸ್ತುಗಳನ್ನು ಎಲ್ಲೋ ಇಟ್ಟು ಮರೆಯುವ ಸಾಧ್ಯತೆಯೂ ಅಧಿಕವಾಗಿದೆ.

ಕುಂಭ ರಾಶಿಯವರು ಹತ್ತಿರದ ಸಂಬಂಧಿಗಳು ಹಾಗೂ ಮಿತ್ರರ ಜೊತೆಗೆ ಮನಸ್ತಾಪವನ್ನು ಮಾಡಿಕೊಳ್ಳುವ ಸಾಧ್ಯತೆಯೂ ಅಧಿಕವಾಗಿದೆ. ಮನಸ್ತಾಪಗಳು ಬಾರದ ರೀತಿಯಲ್ಲಿ ಗಮನ ಹರಿಸಿದರೆ ಒಳ್ಳೆಯದು. ಒಂದೇ ಕೆಲಸಕ್ಕಾಗಿ ಪದೇ ಪದೇ ಅಲೆದಾಡುವ ಸಂಭವವು ಅಧಿಕವಾಗಿರುತ್ತದೆ. ಕೈ ಹಾಕುವ ಕೆಲಸಗಳಲ್ಲಿ ಪ್ರತಿಫಲವನ್ನು ನಿರೀಕ್ಷಿಸುವುದು ಕಷ್ಟ ಸಾಧ್ಯ. ಮುಂಬರುವ ಸೆಪ್ಟೆಂಬರ್ 26 ರಿಂದ ಕುಂಭ ರಾಶಿಯವರಿಗೆ ಸ್ವಲ್ಪ ಸಮಾಧಾನದಾಯಕ ದಿನವಾಗಿರುತ್ತದೆ.

ಸೆಪ್ಟೆಂಬರ್ ತಿಂಗಳಲ್ಲಿ ಕುಂಭ ರಾಶಿಯವರಿಗೆ ಒಳಿತು, ಯಶಸ್ಸನ್ನು ಬಯಸುವಂತಹ ಸ್ನೇಹಿತರು ಜೊತೆಯಾಗಲಿದ್ದಾರೆ. ಒಳ್ಳೆಯ ಮನುಷ್ಯರು ಸಿಕ್ಕರೆ ಕಳೆದುಕೊಳ್ಳಬೇಡಿ. ಕೆಲವು ಸಂದರ್ಭಗಳಲ್ಲಿ ಸ್ನೇಹಿತರನ್ನು ಕಳೆದುಕೊಳ್ಳುವ ಸಂಭವ ಬಂದರೆ ಜಾಗ್ರತೆಯಿಂದ ಎಲ್ಲವನ್ನು ನಿಭಾಯಿಸಿಕೊಂಡು ಹೋಗುವುದು ಒಳ್ಳೆಯದು. ಕಬ್ಬಿಣದ ವ್ಯಾಪಾರ ಮಾಡುವವರಿಗೆ ಉತ್ತಮ ಆದಾಯ, ಲಾಭ ಸಿಗುವ ಸಾಧ್ಯತೆಯು ಅಧಿಕವಾಗಿದೆ.

ಮಕ್ಕಳು ಸರಕಾರಿ ಉದ್ಯೋಗಕ್ಕೆ ಪ್ರಯತ್ನ ಪಡುತ್ತಿದ್ದರೆ ಒಳ್ಳೆಯದು ಆಗುತ್ತದೆ. ಆದರೆ ಕುಂಭ ರಾಶಿಯವರಿಗೆ ಕೆಲವು ದೋ-ಷಗಳು ಇರುವ ಕಾರಣದಿಂದಾಗಿ ರಾಹು ಕೇತುಗಳ ದೋಷ ಪರಿಹಾರವಾಗಿ ಕಾಳಸರ್ಪ ದೋಷ ಪರಿಹಾರ ಶಾಂತಿ ಹೋಮ ಹಾಗೂ ನಾಗಾರಾಧನೆ ಹೋಮವನ್ನು ಮಾಡಿಸಬೇಕು. ಅದಲ್ಲದೇ, ಸೆಪ್ಟೆಂಬರ್ ತಿಂಗಳಲ್ಲಿ ಪ್ರತಿ ಶುಕ್ರವಾರ ಶುಕ್ರ ಗ್ರಹನಿಗೆ ಅಭಿಷೇಕ ಮಾಡಿಸಬೇಕು. ಬಿಳಿ ಹೂವನ್ನು ಅರ್ಚನೆ ಮಾಡಿಸಿ, 28 ಬಾರಿ ಪ್ರದಕ್ಷಿಣೆ ಮಾಡಿ, ಅವರೆಬೇಳೆಯನ್ನು ದಾನ ಮಾಡಬೇಕು. ಹೀಗೆ ಮಾಡಿದ್ದಲ್ಲಿ ಕುಂಭ ರಾಶಿಯವರಿಗಿರುವ ಎಲ್ಲಾ ಸಮಸ್ಯೆಗಳು ದೂರವಾಗುತ್ತದೆ.

Leave a Reply

Your email address will not be published. Required fields are marked *