ಅಮೂಲ್ಯ ಮಕ್ಕಳ ಜೊತೆ ಗೋಲ್ಡನ್ ಸ್ಟಾರ್ ಗಣೇಶ್ ತುಂಟಾಟ, ಸುಂದರ ಕ್ಷಣಗಳು ಕ್ಯಾಮರಾದಲ್ಲಿ ಸೆರೆ ನೋಡಿ!!

ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ಅಮೂಲ್ಯ ಅವರ ಜೋಡಿಯನ್ನು ಕನ್ನಡಿಗರು ಬಹುವಾಗಿ ಮೆಚ್ಚಿಕೊಂಡಿದ್ದರು. ಇವರಿಬ್ಬರ ಅಭಿನಯದ ಎಲ್ಲಾ ಸಿನಿಮಾಗಳು ಸೂಪರ್ ಹಿಟ್ ಆಗಿದೆ. ಸ್ಯಾಂಡಲ್ ವುಡ್ ನಲ್ಲಿ ಗೋಲ್ಡನ್ ಕ್ವೀನ್ ಎಂದೇ ಕರೆಸಿಕೊಂಡಿದ್ದ ಅಮೂಲ್ಯ ಅವರು ಕಾಲಕ್ರಮೇಣ ಸಿನಿಮಾರಂಗದಿಂದ ದೂರ ಸರಿದು ತಮ್ಮ ವೈಯಕ್ತಿಕ ಜೀವನಕ್ಕೆ ಹೆಚ್ಚು ಪ್ರಧಾನತೆ ನೀಡಿದ್ದಾರೆ. ಅಮೂಲ್ಯ ಹಾಗೂ ಅವರ ಪತಿ ಜಗದೀಶ್ ಚಂದ್ರ ದಂಪತಿಗಳು ಅವಳಿ ಜವಳಿ ಗಂಡು ಮಕ್ಕಳನ್ನು ಹೊಂದಿದ್ದು ಸಾಮಾಜಿಕ ಜಾಲತಾಣದಲ್ಲಿಯೂ ಆಗಾಗ ಕಾಣಿಸಿಕೊಳ್ಳುತ್ತಾರೆ.

ನಟಿ ಅಮೂಲ್ಯ ತನ್ನ ಆರನೇ ವಯಸ್ಸಿಗೆ ಬಣ್ಣ ಹಚ್ಚಿದವರು. 13ನೇ ವಯಸ್ಸಿನಲ್ಲಿ ಚೆಲುವಿನ ಚಿತ್ತಾರ ಸಿನಿಮಾದ ಮೂಲಕ ನಾಯಕನಟಿಗಾಗಿ ಸ್ಯಾಂಡಲ್ವುಡ್ ನಲ್ಲಿ ಮಿಂಚಿದರು. ಅಮೂಲ್ಯಾ ನಟಿಸಿದ್ದು ಕೆಲವೇ ಸಿನಿಮಾಗಳು ಆಗಿದ್ದರೂ ಕನ್ನಡಿಗರು ಹೆಚ್ಚು ಇಷ್ಟಪಡುವ ನಟಿಯಾಗಿದ್ದಾರೆ.

ಗಣೇಶ ಹಾಗೂ ಅಮೂಲ್ಯ ಅವರು ಫ್ಯಾಮಿಲಿ ಫ್ರೆಂಡ್ಸ್ ಆಗಿದ್ದು ಆಗ ಭೇಟಿಯಾಗುತ್ತಾರೆ ಅಮೂಲ್ಯ ಅವರ ಮದುವೆಯ ಸಮಯದಲ್ಲಿಯೂ ಕೂಡ ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ಅವರ ಪತ್ನಿಶಿಲ್ಪ ಇಬ್ಬರು ಬಹಳ ಮುತುವರ್ಜಿಯಿಂದ ಮದುವೆಯ ಕಾರ್ಯಗಳಲ್ಲಿಯೂ ಕೂಡ ತೊಡಗಿಕೊಂಡಿದ್ದರು. ಇದೀಗ ಅಮೂಲ್ಯ ಅವರಿಗೆ ಅಥರ್ವ ಮತ್ತು ಆದವ್ ಎನ್ನುವ ಅವಳಿ ಮಕ್ಕಳು ಜನಿಸಿದ್ದಾರೆ.

ಶಿವರಾತ್ರಿಯ ದಿನವೇ ಈ ಮಕ್ಕಳು ಹುಟ್ಟಿರುವುದು ಎಂದು ಶಿವನ ಹೆಸರನ್ನೇ ಇಡಲಾಗಿದೆ.ಗಣೇಶ್ ಹಾಗೂ ಅವರ ಪತ್ನಿಶಿಲ್ಪ ಅಮೂಲ್ಯ ಹಾಗೂ ಅವರ ಮನೆಯವರನ್ನು ಆಗಾಗ ಭೇಟಿಯಾಗುತ್ತಾರೆ. ಇತ್ತೀಚೆಗೆ ಗೋಲ್ಡನ್ ಸ್ಟಾರ್ ಗಣೇಶ್ ಅಮೂಲ್ಯ ಅವರ ಮನೆಗೆ ಪತ್ನಿಯ ಜೊತೆಗೆ ಭೇಟಿ ನೀಡಿ ಮಕ್ಕಳ ಜೊತೆಗೆ ತುಂಟಾಟ ಆಡಿದ್ದಾರೆ. ಗಣೇಶ್ ಅಥರ್ವ ಹಾಗೂ ಆದವ್ ಜೊತೆಗೆ ತುಂಟಾಟ ಆಡುತ್ತಿದ್ದರೆ ಆ ಮುಗ್ಧ ಪ್ರೀತಿ ಹಾಗೂ ಮುದ್ದು ನಗು ನೋಡುವುದೇ ಒಂದು ಚಂದ.

ಸದ್ಯ ಅಮೂಲ್ಯ ಮಕ್ಕಳ ಜೊತೆಗೆ ಗಣೇಶ್ ಸಮಯ ಕಳೆದಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅಮೂಲ್ಯ ಕುಟುಂಬ ಹಾಗು ಗಣೇಶ್ ಕುಟುಂಬದವರು ಬಹಳ ಸ್ನೇಹದಿಂದ ಇದ್ದು, ಗಣೇಶ್ ಅವರು ಅಮೂಲ್ಯ ಅವರ ಮಕ್ಕಳಿಗೆ ಹುಟ್ಟು ಹಬ್ಬದ ಸಂದರ್ಭದಲ್ಲಿ ಚಿನ್ನದ ಬ್ರಾಸ್ಲೈಟ್ ಹಾಗೂ ಚಿನ್ನದ ಸರವನ್ನು ಕೂಡ ಉಡುಗೊರೆಯಾಗಿ ನೀಡಿದ್ದರು. ನಟಿ ಅಮೂಲ್ಯಾ 2017ರಿಂದ ಸಿನಿಮಾರಂಗದಿಂದ ದೂರಸರಿದಿದ್ದಾರೆ.

Leave a Reply

Your email address will not be published. Required fields are marked *