Golden star ganesh daughter charirtya ಸೆಲೆಬ್ರಿಟಿಗಳಾಗಿ ಬದುಕು ಕಟ್ಟಿಕೊಳ್ಳುವುದು ಅಷ್ಟು ಸುಲಭವಲ್ಲ. ಆದರೆ ಬಣ್ಣದ ಲೋಕದಲ್ಲಿ ಈಗಾಗಲೇ ಸಾಕಷ್ಟು ಜನರು ಸಕ್ರಿಯರಾಗಿದ್ದಾರೆ. ಅಂತಹವರ ಸಾಲಿಗೆ ಮಳೆ ಹುಡುಗ ಖ್ಯಾತಿಯ ಗೋಲ್ಡನ್ ಸ್ಟಾರ್ ಗಣೇಶ್ (Golden Star Ganesh) ಕೂಡ ಒಬ್ಬರು. ಪ್ರಥಮ ಬಾರಿಗೆ ಕಾಮಿಡಿ ಶೋಗಳಲ್ಲಿ ಅಭಿನಯ ಮಾಡುವುದರ ಮೂಲಕ ಚಲನ ಚಿತ್ರಕ್ಕೆ ಹೀರೋ ಆಗಿ ಎಂಟ್ರಿ ಕೊಟ್ಟರು.
2006 ರ ವೇಳೆಗೆ ಬಿಡುಗಡೆ ಗೊಂಡ ಚೆಲ್ಲಾಟ (Chellata) ಚಿತ್ರದಲ್ಲಿ ನಾಯಕನಾಗಿ ಎಂಟ್ರಿ ಕೊಟ್ಟರು. ಹೀಗೆ ಶುರುವಾದ ಜರ್ನಿಯಲ್ಲಿ, ಯೋಗರಾಜ್ ಭಟ್ಟ (Yogaraj Bhat) ರ ನಿರ್ದೇಶನದಲ್ಲಿ ಮುಂಗಾರು ಮಳೆ ಸಿನಿಮಾದಲ್ಲಿ ಕಾಣಿಸಿಕೊಂಡರು. ಈ ಮುಂಗಾರು ಮಳೆ (Mungaru Male) ಚಿತ್ರ ಗಣೇಶ್ ಗೆ ಬಹುದೊಡ್ಡ ಮಟ್ಟಿಗೆ ಬಿಗ್ ಬ್ರೇಕ್ ನೀಡಿತು. ಇದಾದ ಬಳಿಕ ಗೋಲ್ಡನ್ ಸ್ಡಾರ್ ನಾಯಕರಾಗಿ ಸುಮಾರು 35 ಚಿತ್ರಗಳಲ್ಲಿ ನಟಿಸಿದ್ದಾರೆ. ತಮ್ಮ ನಟನೆಗಾಗಿ ಹಲವು ಪ್ರಶಸ್ತಿಗಳನ್ನು ಬಾಚಿಕೊಂಡಿದ್ದಾರೆ. ಸದ್ಯಕ್ಕೆ ಕನ್ನಡ ಕಿರುತೆರೆ ಹಾಗೂ ಬೆಳ್ಳಿತೆರೆಯಲ್ಲಿ ಬ್ಯುಸಿಯಾಗಿದ್ದಾರೆ.
ಗೋಲ್ಡನ್ ಸ್ಟಾರ್ ಗಣೇಶ್ (Golden Star Ganesh) ಅವರು ಕೂಡ ಮದುವೆಯ ವಿಚಾರವಾಗಿ ನಾನಾ ರೀತಿಯ ಸುದ್ದಿಗಳು ಕೇಳಿ ಬಂದಿದ್ದವು. ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ಶಿಲ್ಪಾ (Shilpa) ಒಬ್ಬರನ್ನೊಬ್ಬರು ಇಷ್ಟ ಪಟ್ಟು ಮದುವೆಯಾದರು. ಆದರೆ,ಗಣೇಶ ಅವರ ಪತ್ನಿ ಶಿಲ್ಪಾರವರಿಗೆ ಈ ಮೊದಲೇ ಮದುವೆಯಾಗಿತ್ತು. ಆದರೂ ಗಣೇಶ್ ಅವರನ್ನು ಹೆದರಿಸಿ ಬೆದರಿಸಿ ಶಿಲ್ಪ ಮದುವೆಯಾಗಿದ್ದಾರೆ ಅದಕ್ಕಾಗಿ ರವಿ ಪೂ’ಜಾರಿ (Ravi Poojary) ಅವರನ್ನು ಬಿಟ್ಟು ಹೆ’ದರಿಸಿದ್ದಾರೆ ಹೀಗೆ ಸಾಕಷ್ಟು ಸುದ್ದಿಗಳು ಹರಿದಾಡಿದ್ದವು. ಆ ಎಲ್ಲಾ ಗಾಳಿಸುದ್ದಿಗಳಿಗೆ ತಲೆಕೆಡಿಸಿಕೊಳ್ಳದೇ ಇರುವ ಈ ಜೋಡಿಯು ಎಲ್ಲರಿಗೂ ಮಾದರಿಯಾಗುವಂತೆ ಬದುಕುತ್ತಿದ್ದಾರೆ.
View this post on Instagram
ಗೋಲ್ಡನ್ ಸ್ಟಾರ್ ಗಣೇಶ್ ಅವರು ಶಿಲ್ಪಾ ಅವರನ್ನು ಪ್ರೀತಿಸಿ ಮದುವೆಯಾಗಿದ್ದಾರೆ. ಈ ದಂಪತಿಗಳಿಗೆ ಮುದ್ದಾದ ಇಬ್ಬರು ಮಕ್ಕಳಿದ್ದಾರೆ. ನಟ ಗಣೇಶ್ ಅವರ ಮಕ್ಕಳಾದ ಚಾರಿತ್ರ್ಯ (Charithrya) ಹಾಗೂ ವಿಹಾನ್ (Vihan) ಅವರ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುತ್ತವೆ. ಅದಲ್ಲದೇ ನಟನ ಮಗಳು ಚಾರಿತ್ರ್ಯ ಗಣೇಶ್ ಚಮಕ್ ಸಿನಿಮಾದಲ್ಲಿ ಕ್ಲೈಮ್ಯಾಕ್ಸ್ ನಲ್ಲಿ ನಟಿಸಿದ್ದಾಳೆ.
ಗಣೇಶ್ ಅವರ ಮಗಳಾಗಿರುವ ಚಾರಿತ್ರ್ಯ ಗಣೇಶ್ (Charithrya Ganesh) ಹದಿನಾಲ್ಕನೇ ವಯಸ್ಸಿಗೆ ಕಾಲಿಟ್ಟಿದ್ದಾರೆ. ಗೋಲ್ಡನ್ ಸ್ಟಾರ್ ಗಣೇಶ್ ಅವರ ಮಗಳು ಚಾರಿತ್ರ್ಯಳು ತಂದೆಯಂತೆ ಸಿಕ್ಕಾಪಟ್ಟೆ ಆಕ್ಟಿವ್ ಆಗಿದ್ದು, ಮುಂಬರುವ ದಿನಗಳಲ್ಲಿ ಚಂದನವನಕ್ಕೆ ಒಳ್ಳೆಯ ನಟಿಯು ಸಿಗುವುದರಲ್ಲಿ ಎರಡು ಮಾತಿಲ್ಲ.