ಯಾವ ಅಕ್ಷರದಿಂದ ಪ್ರಾರಂಭವಾಗುವ ಹುಡುಗಿಯರು ಹೆಚ್ಚಾಗಿ ಮಾತನಾಡುತ್ತಾರೆ ಗೊತ್ತಾ? ಮರಳು ಮಾಡುವ ಮಾತಿನ ಮಲ್ಲಿಯರು ನೋಡಿ!!

ಮಾತು ಇದು ನಮ್ಮ ಭಾವನೆಗಳನ್ನು ಇತರರಿಗೂ ಅರ್ಥವಾಗುವಂತೆ ವ್ಯಕ್ತಪಡಿಸುವ ಒಂದು ಸುಲಭದ ಮಾರ್ಗ. ನಾವೆಲ್ಲರೂ ಮನುಷ್ಯ ಜಾತಿಗೆ ಸೇರಿದ್ದೆವಾದರೂ ನಮ್ಮ ರೂಪ, ಗುಣ, ಭಾವನೆ, ವ್ಯಕ್ತಿತ್ವಗಳಲ್ಲಿ ವ್ಯತ್ಯಾಸಗಳಿವೆ. ವಾಸಿಸುವ ಸ್ಥಳಕ್ಕೆ ತಕ್ಕನಾಗಿ ಭಾಷೆಯನ್ನು ರೂಢಿಸಿಕೊಂಡಿದ್ದರೂ ಕೂಡ ಭಾವನೆಯನ್ನು ವ್ಯಕ್ತಪಡಿಸುವ ಪರಿ ವಿಭಿನ್ನವಾಗಿದೆ.

ಸಾಮಾನ್ಯವಾಗಿ ಹೆಂಗಸರು ಗಂಡಸರಿಗಿಂತ ತುಸು ಹೆಚ್ಚಾಗಿಯೇ ಮಾತನಾಡುತ್ತಾರೆ ಎನ್ನಬಹುದು. ಕೆಲವರು ಬೇಸರವಾದಾಗ ಕೋಪಗೊಂಡಾಗ ಮೌನಿಗಳಾದರೆ, ಇನ್ನು ಕೆಲವರು ಸಮಾಧಾನ ಸಿಗುವವರೆಗೂ ಗೊಣಗುತ್ತಲೇ ಇರುತ್ತಾರೆ. ಆದರೆ ಎಲ್ಲ ರೀತಿಯ ಸನ್ನಿವೇಶಗಳಲ್ಲಿಯೂ ಒಂದೇ ಸಮನೆ ಮಾತನಾಡುವ ಮಹಿಳೆಗೆ ಮಾತಿನ ಮಲ್ಲಿ ಎನ್ನುವರು.

ಹರೆಯದ ಹುಡುಗರು ತಮ್ಮ ಹುಡುಗಿಯೂ ಪಟಪಟ ಎಂದು ಮಾತನಾಡುತ್ತಿದ್ದರೆ ಖುಷಿಪಡುತ್ತಾರೆ. ಪರಿಸ್ಥಿತಿಯು ಕೊಂಚ ಹದಗೆಟ್ಟಾಗ ಈ ಮಾತುಗಳೇ ತಲೆನೋವು ಆಗಿಬಿಡುತ್ತದೆ. ಇನ್ನು ಮಾತಿನಲ್ಲಿಯೇ ಕಳೆದುಹೋಗುವ ಹುಡುಗಿಯರಿಗಂತು ವಾಸ್ತವದ ಅರಿವೇ ಮರೆತುಹೋಗಿರುತ್ತದೆ. ಇನ್ನು ಕೆಲವು ಹುಡುಗಿಯರು ತಮ್ಮ ಮಾತನ್ನೇ ಅಸ್ತ್ರವಾಗಿ ಮುಂದಿಟ್ಟುಕೊಂಡು ವ್ಯಾಪಾರ ವಹಿವಾಟುಗಳಲ್ಲಿ, ಉದ್ಯೋಗಗಳಲ್ಲಿ ಯಶಸ್ಸನ್ನು ಕಾಣುತ್ತಾರೆ.

ಕೆಲವೊಮ್ಮೆ ಅತಿಯಾದ ಮಾತಿನಿಂದ ಸ್ನೇಹ ಸಂಬಂಧಗಳು ಒಡನಾಟಗಳು ಮುರಿದು ಹೋದರೆ, ಇನ್ನು ಕೆಲವೊಮ್ಮೆ ಮೋಡಿ ಮಾಡುವ ಮಾತುಗಳು ಘಾಸಿಗೊಂಡ ಮನಸ್ಸುಗಳು ಮತ್ತೊಮ್ಮೆ ಬೆರೆಯಲು ಸಹಕರಿಸುತ್ತವೆ. ಈ ರೀತಿ ಮಾತನ್ನೇ ಬಂಡವಾಳವಾಗಿಟ್ಟುಕೊಂಡು ಎಂತಹ ಸನ್ನಿವೇಶವನಾದರೂ ಮಾತಿನಲ್ಲಿ ಎದುರಿಸಿ ನಿಲ್ಲುವ ತಾಕತ್ತು ಮಾತಿನ ಮಲ್ಲಿಯರಲ್ಲಿದೆ. ಎಂತಹ ಕಲ್ಲು ಮನಸ್ಸಿನವರನ್ನಾದರೂ ಕರಗಿಸಿ ನೀರಾಗಿಸುವ ಶಕ್ತಿ, ಮಾತನ್ನೇ ಬಂಡವಾಳವಾಗಿಸಿಕೊಂಡ ಚಟಪಟ ಎಂದು ಹೇಗೆ ಬೇಕೋ ಹಾಗೆ ಮಾತಿನಲ್ಲಿಯೇ ಎಲ್ಲವನ್ನು ಬಗೆಹರಿಸುವ ಚಾಣಾಕ್ಷತನ ಹೊಂದಿದ ಮಹಿಳೆಯರಲ್ಲಿದೆ.

ಇಂತಹ ಘಟನೆಗಳನ್ನು ವೀಕ್ಷಿಸಿ ವಾಡಿಕೆಯಲ್ಲಿ ಬಂದಂತಹ ಒಂದು ಮಾತಿದೆ: ‘ಮಾತಿನಲ್ಲಿಯೇ ಮನೆ ಕಟ್ಟುವುದು’ ಎಂಬುದು. ಕೆಲವು ಅಕ್ಷರಗಳಿಂದ ಪ್ರಾರಂಭವಾಗುವ ಹೆಸರನ್ನು ಹೊಂದಿದ ಹುಡುಗಿಯರು ಹೆಚ್ಚಾಗಿ ಮಾತನಾಡುತ್ತಾರಂತೆ. ಇವರು ಹೆಚ್ಚಾಗಿ ಮಾತನಾಡುವುದಲ್ಲದೆ, ಇತರರನ್ನು ಸಹಜವಾಗಿಯೇ ಬೇಗನೆ ನಂಬುತ್ತಾರಂತೆ.

ತಮ್ಮ ನೋವು, ಖುಷಿ, ದುಃಖಗಳನ್ನು ಇತರರೊಡನೆ ಹಂಚಿಕೊಂಡು ಸುಲಭವಾಗಿ ಮನಸ್ಸನ್ನು ನಿರಾಳಗೊಳಿಸಿಕೊಂಡು, ಸ್ನೇಹಜೀವಿಯಾಗಿ ಬದುಕುತ್ತಾರಂತೆ. ಹಾಗಾದರೆ ಅಕ್ಷರಗಳು ಯಾವವು ಎಂದು ತಿಳಿಯೋಣ… A,C, P ಮತ್ತು R letterಗಳಿಂದ ಪ್ರಾರಂಭವಾಗುವ ಹೆಸರನ್ನು ಹೊಂದಿದ ಹುಡುಗಿಯರು ಹೆಚ್ಚಾಗಿ ಮಾತನಾಡುತ್ತಾರಂತೆ.

Leave a Reply

Your email address will not be published. Required fields are marked *