ಸೋಶಿಯಲ್ ಮೀಡಿಯಾಗಳು ಟ್ಯಾಲೆಂಟ್ ಗೆ ವೇದಿಕೆಯನ್ನು ವೇದಿಕೆಯನ್ನು ಸೃಷ್ಟಿಸಿದೆ. ಹೀಗಾಗಿ ಇತ್ತೀಚೆಗಿನ ದಿನಗಳಲ್ಲಿ ತಮ್ಮ ಪ್ರತಿಭೆಗಳನ್ನು ತೋರಿಸಲು ಕಷ್ಟ ಪಡಬೇಕಾಗಿಲ್ಲ. ಹೌದು ಸೋಶಿಯಲ್ ಮೀಡಿಯಾಗಳು ಪ್ರತಿಭೆಗಳಿಗೆ ಒಂದೊಳ್ಳೆ ಅವಕಾಶಗಳನ್ನು ಮಾಡಿಕೊಟ್ಟಿದೆ. ಹೌದು, ಈ ಸಾಮಾಜಿಕ ಜಾಲತಾಣಗಳು ಅನೇಕರಿಗೆ ತಮ್ಮ ಪ್ರತಿಭೆಗಳು ಬೆಳಕಿಗೆ ಬಂದಿದ್ದಾರೆ ಎನ್ನುವುದು ಎಲ್ಲರಿಗೂ ತಿಳಿದಿರುವ ವಿಚಾರ.
ಲಾಕ್ ಡೌನ್ ಸಮಯದಲ್ಲಿಯಂತೂ ಸಾಕಷ್ಟು ಸಂಖ್ಯೆಯಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿದ್ದರು. ಉದ್ಯೋಗವಿಲ್ಲ ಎಂದಾಗ ಈ ಸೋಶಿಯಲ್ ಮೀಡಿಯಾದಿಂದಲೇ ಬದುಕಿನ ದಾರಿ ಕಂಡವರು ಹಲವರು. ಅದಲ್ಲದೇ ತಮ್ಮ ಪ್ರತಿಭೆಗಳನ್ನು ಸಾಮಾಜಿಕ ಜಾಲತಾಣಗಳ ಮೂಲಕ ಇಡೀ ಜಗತ್ತಿಗೆ ತೋರಿಸುವ ಮೂಲಕ ಸೆಲೆಬ್ರಿಟಿಗಳಾಗಿ ಇದ್ದಾರೆ.
ಅದರಲ್ಲಿಯೂ ಇಂದಿನ ಯುವಕ ಯುವತಿಯರ ಬಗ್ಗೆ ಹೇಳಬೇಕೇ, ಸಿಕ್ಕ ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳುವುದರಲ್ಲಿ ನಿಸ್ಸಿಮರು. ಅಷ್ಟೇ ಅಲ್ಲದೆ ಇಂದಿನ ಯುವಕರು ಯುವತಿಯರು ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟಿವ್. ಹೀಗಾಗಿ ತಮ್ಮ ಡ್ಯಾನ್ಸ್ ಹಾಗೂ ಇನ್ನಿತರ ವಿಡಿಯೋಗಳನ್ನು ಶೇರ್ ಮಾಡಿಕೊಳ್ಳುವ ಮೂಲಕ ಸಾಕಷ್ಟು ಫ್ಯಾನ್ಸ್ ಫಾಲ್ಲೋರ್ಸ್ ಸೃಷ್ಟಿಸಿಕೊಂಡಿದ್ದಾರೆ.
ಇನ್ನು ಕೆಲವರು ಒಂದು ಹೆಜ್ಜೆ ಮುಂದೆ ಹೋಗಿ ಕೆಲವರು ಸಿನಿ ಹಾಗೂ ಕಿರುತೆರೆಗೆ ಎಂಟ್ರಿ ಕೊಟ್ಟಿದ್ದಾರೆ. ಲೆಕ್ಕವಿಲ್ಲದಷ್ಟು ಪ್ರತಿಭೆಗಳು ಸೋಶಿಯಲ್ ಮೀಡಿಯಾದಲ್ಲೂ ಫೇಮಸ್ ಆಗಿ ಸ್ಟಾರ್ ಗಳಾಗಿ ಬದುಕು ಕಟ್ಟಿಕೊಂಡಿದ್ದಾರೆ. ಕೆಲವು ಪ್ರತಿಭೆಗಳನ್ನು ಕಂಡಾಗ ಫ್ಯಾಷನ್ ಪ್ರಿಯರು ಎನ್ನುವುದು ಅವರ ಉಡುಗೆ ತೊಡುಗೆಯಲ್ಲಿ ತಿಳಿಯುತ್ತದೆ.
ಆದರೆ ಇಲ್ಲೊಬ್ಬಳು ಉಡುಗೆಯಲ್ಲಿ ನಟಿ ಊರ್ಫಿ ಜಾಧವ್ ಅವರನ್ನು ಮೀರಿಸಿದ್ದಾರೆ. ಹೌದು ವಿಭಿನ್ನ ಉಡುಗೆಯ ಮೂಲಕ ಪಠಾಣ್ ಸಿನಿಮಾದ ಬೇಷರಂ ರಂಗ್ ಹಾಡಿಗೆ ಸ್ಟೆಪ್ ಹಾಕಿದ್ದು, ಈ ಯುವತಿಯ ಉಡುಗೆಯೂ ಎಲ್ಲರ ಗಮನ ಸೆಳೆಯುತ್ತಿದೆ. ಈ ಯುವತಿಯೂ ಮೇಲಿನ ಭಾಗಕ್ಕೆ ಬಟ್ಟೆ ಧರಿಸುವ ಬದಲು ಬಾಳೆ ಕಾಯಿಯ ಗೊಂಚಲು ತೂಗು ಹಾಕಿಕೊಂಡು ಮೈ ಮುಚ್ಚಿಕೊಂಡಿದ್ದಾಳೆ.
ಕೆಳ ಭಾಗಕ್ಕೆ ಸ್ಕಾರ್ಫ್ ಧರಿಸಿದ್ದು, ಬೇಷರಂ ರಂಗ್ ಹಾಡಿಗೆ ಭರ್ಜರಿಯಾಗಿ ಡಾನ್ಸ್ ಮಾಡಿದ್ದಾಳೆ. ಈ ವಿಡಿಯೋ ನೋಡಿ ನೆಟ್ಟಿಗರು ಫುಲ್ ಶಾಕ್ ಆಗಿದ್ದು , ಊರ್ಫಿ ಜಾಧವ್ ಅವರು ನಿಮ್ಮಿಂದಲೇ ಫ್ಯಾಷನ್ ಕಲಿತಿದ್ದಾರಾ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಈ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.