ಕನ್ನಡ ಕಿರುತೆರೆಯ ಧಾರಾವಾಹಿಯಲ್ಲಿ ಅವಕಾಶಗಳನ್ನು ಗಿಟ್ಟಿಸಿಕೊಂಡು ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟವರು ಹಲವರು ಇದ್ದಾರೆ. ಅಂತಹವರ ಸಾಲಿಗೆ ಗೀತಾ (Geetha) ಧಾರಾವಾಹಿ ಖ್ಯಾತಿಯ ಭವ್ಯಾ ಗೌಡ (Bhavya Gowda) ಕೂಡ ಸೇರಿಕೊಳ್ಳುತ್ತಾರೆ. ಚೆಂದದ ಚೆಲುವೆ ಭವ್ಯಾ ಗೌಡರವರು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿದ್ದಾರೆ. ಫೋಟೋ ಹಾಗೂ ರೀಲ್ಸ್ ಎಂದು ಸುದ್ದಿಯಲ್ಲಿರುವ ನಟಿಯು ಆಗಾಗ ಫೋಟೋ ಹಾಗೂ ವಿಡಿಯೋಗಳನ್ನು ಶೇರ್ ಮಾಡಿಕೊಳ್ಳುತ್ತಾ ತನ್ನ ಅಭಿಮಾನಿಗಳನ್ನು ಖುಷಿ ಪಡಿಸುತ್ತಾರೆ.
ಆದರೆ ಇದೀಗ ನಟಿ ಭವ್ಯಾ ಗೌಡ ತನ್ನ ಮುದ್ದಾದ ಫೋಟೋವೊಂದನ್ನು ಇನ್ಸ್ಟಾಗ್ರಾಮ್ ಖಾತೆಯಲ್ಲಿ ಫೋಟೋವೊಂದನ್ನು ಶೇರ್ ಮಾಡಿಕೊಂಡಿದ್ದಾರೆ. ಈ ಫೋಟೋಗೆ ಹನ್ನೆರಡು ಸಾವಿರಕ್ಕೂ ಅಧಿಕ ವ್ಯೂಸ್ ಕಂಡಿದೆ. ಗೀತಾ ಸೀರಿಯಲ್ ಖ್ಯಾತಿಯ ನಟಿ ಭವ್ಯಾ ಗೌಡರವರ ಹಿನ್ನಲೆಯನ್ನು ಗಮನಿಸುವುದಾದರೆ, ಭವ್ಯಾ ಗೌಡರವರು ಮೂಲತಃ ಮಂಡ್ಯ (Mandya) ದ ನಾಗಮಂಗಲ (Nagamangala)ದವರು. ಗಗನ ಸಖಿಯಾಗಬೇಕು ಎಂದು ಕನಸು ಕಂಡಿದ್ದರರು.
ಈ ನಡುವೆ ಭವ್ಯ ಗೌಡ ಸಾಮಾಜಿಕ ಜಾಲತಾಣದಲ್ಲಿ ಆಗಾಗ ರೀಲ್ಸ್ ಮಾಡುತ್ತಿದ್ದರು. ಆದರೆ ನಟಿಯ ಅಪ್ಪ ಅಮ್ಮನಿಗೆ ತಮ್ಮ ಮಗಳೂ ಸಹ ನಟಿಯಾಗಬೇಕು ಎನ್ನುವ ಆಸೆಯಿತ್ತು. ಅಪ್ಪ ಅಮ್ಮನ ಒತ್ತಾಯಕ್ಕೆ ಮಣಿದು ಭವ್ಯಾ ಗೌಡ ಗೀತಾ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟರು. ಗೀತಾ ಧಾರಾವಾಹಿಯೂ ಭವ್ಯಾ ಗೌಡರಿಗೆ ದೊಡ್ಡ ಮಟ್ಟಕ್ಕೆ ನೇಮ್ ಫೇಮ್ ತಂದುಕೊಟ್ಟಿತು. ಕಿರುತೆರೆಯಲ್ಲಿ ಬ್ಯುಸಿಯಿರುವಾಗಲೇ ಬೆಳ್ಳಿತೆರೆಯಲ್ಲಿ ಅವಕಾಶಗಳು ಬರ ತೊಡಗಿದವು. ಡಿಯರ್ ಕಣ್ಮಣಿ (Dear Kanmani)+ಎಂಬ ಸಿನಿಮಾ ಮೂಲಕ ಭವ್ಯ ಗೌಡ ಬೆಳ್ಳಿತೆರೆಗೆ ಕಾಲಿಟ್ಟರು.
ಅಂದಹಾಗೆ, ನಟಿ ಭವ್ಯಾ ಗೌಡ ಇತ್ತೀಚಿಗೆ ನನ್ನಮ್ಮ ಸೂಪರ್ ಸ್ಟಾರ್-2 (Nannamma Super Star 2) ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ವೇಳೆ ಕೆಲವು ವಿಚಾರಗಳ ಬಗ್ಗೆ ಬಗ್ಗೆ ಮಾತನಾಡಿದ್ದು, ಕೈ ಹಿಡಿಯಲಿರುವ ಹುಡುಗ ಹೇಗಿರಬೇಕು ಎಂದು ವೇದಿಕೆ ಮೇಲೆ ನಿರೂಪಕ ನಿರಂಜನ್ ದೇಶಪಾಂಡೆ ಕೇಳಿದ್ದರು. ಈಗಿನ ಕಾಲದ ಮಕ್ಕಳು ನಾವು ಇಷ್ಟ ಪಟ್ಟ ರೀತಿ ಏನೂ ಇಲ್ಲ ಅವರು ಆಯ್ಕೆ ಮಾಡುವುದನ್ನು ನಾವು ಒಪ್ಪಿಕೊಳ್ಳಬೇಕು ಖಂಡಿತ ಒಪ್ಪಿಕೊಳ್ಳುವೆ. ನಮ್ಮ ಮಗಳನ್ನು ಚೆನ್ನಾಗಿ ನೋಡಿಕೊಂಡರೆ ಸಾಕು. ಅರೇಂಜ್ಡ್ ಮ್ಯಾರೇಜ್ ಆಗಬೇಕು ಅನ್ನೋ ಆಸೆ ತುಂಬಾ ಇದೆ ಎಂದಿದ್ದರು.
ಈ ನಡುವೆ ತಾಯಿಯನ್ನು ಹಾಡಿ ಹೊಗಳಿದ್ದು ನಟಿ ಭವ್ಯಾ ಗೌಡ, ‘ಪ್ರತಿಯೊಬ್ಬರ ಜೀವನದಲ್ಲೂ ಅವರ ತಾಯಿನೇ ಸೂಪರ್ ಸ್ಟಾರ್. ನನ್ನ ಲೈಫಲ್ಲಿ ಅಮ್ಮ ಯಾಕೆ ಸ್ಟಾರ್ ಅಂದ್ರೆ ಎಲ್ಲನೂ ತ್ಯಾಗ ಮಾಡಿದ್ದಾರೆ. ನಾವು ನಾಲ್ಕು ಜನ ಹೆಣ್ಣು ಮಕ್ಕಳು ಚಿಕ್ಕ ವಯಸ್ಸಿನಿಂದ ಕಷ್ಟ ನೋಡಿಕೊಂಡು ಬೆಳೆದಿದ್ದೇವೆ. ನಾವು ನಾಲ್ಕು ಜನರನ್ನು ಬೆಳೆಸುವಾಗ ಸಾಕಷ್ಟು ಅವಮಾನಗಳನ್ನು ಎದುರಿಸಿದ್ದಾರೆ. ನಿಮ್ಮ ಹೆಣ್ಣು ಮಕ್ಕಳು ಬೀದಿಗೆ ತರುತ್ತಾರೆ ಬಿಡು ಅಂತ ಮಾತನಾಡಿದ್ದಾರೆ. ಆ ನೋವನ್ನು ಬಚ್ಚಿಟ್ಟುಕೊಂಡು ಕಷ್ಟ ಪಟ್ಟು ಇಷ್ಟ ಪಟ್ಟು ಬೆಳೆಸಿದ್ದಾರೆ. ನಾನು ಸ್ಕ್ರೀನ್ ಮೇಲೆ ಬರಬೇಕು ಅನ್ನೋದು ನನ್ನ ತಾಯಿ ಆಸೆ ಆಗಿತ್ತು. ಸುಮ್ಮನೆ ಪ್ರಯತ್ನ ಪಟ್ಟೆ ಅವಕಾಶ ಸಿಗ್ತು. ಅವಕಾಶ ಸಿಕ್ಕಿದ ಮೇಲೆ ತುಂಬಾ ಅವಮಾನ ಎದುರಿಸಿದೆ’ ಎಂದಿದ್ದರು.
ದಿನ ಟ್ರೋಲ್ ಮಾಡುತ್ತಿದ್ದರು ಕೆಟ್ಟ ಕೆಟ್ಟ ಕಾಮೆಂಟ್ ಮಾಡುತ್ತಿದ್ದರು. ಆಗ ಅಮ್ಮ ಒಂದು ಮಾತು ಹೇಳಿದ್ದರು “ನೀನು ಏನೆಂದು ನಿನಗೆ ಗೊತ್ತು ನನಗೆ ನಿನ್ನ ಬಗ್ಗೆ ಗೊತ್ತು” ಎಂದು ಹೇಳಿ ಧೈರ್ಯ ತುಂಬಿದರು. ನನ್ನ ತಾಯಿ ಆಶೀರ್ವಾದದಿಂದ ಇಷ್ಟು ನಟನೆಯಲ್ಲಿ ಬೆಳೆಯಲು ಸಾಧ್ಯವಾಯಿತು. ಅಮ್ಮ ಮೊದಲು ನಿನಗೆ ಕ್ಷಮೆ ಕೇಳುವೆ. ಶೂಟಿಂಗ್ ಕೆಲಸ ಪ್ರೆಶರ್ ಕೋಪ ಎಲ್ಲವೂ ನಿನ್ನ ಮೇಲೆ ತೋರಿಸಿರುವೆ. ದಿನ ಬೆಳಗ್ಗೆ 4 ಗಂಟೆಗೆ ಎದ್ದು ಬಾಕ್ಸ್ ಪ್ಯಾಕ್ ಮಾಡುವೆ.
ನೀನು ನನ್ನ ಮೇಲೆ ತುಂಬಾ ಪ್ರೀತಿ ತೋರಿಸುವೆ ನಾನು ತುಂಬಾ ಕಿರಿಕಿರಿ ಮಾಡಿದ್ದರೂ ಅದೇ ಪ್ರೀತಿ ನನಗೆ ಕೊಡುತ್ತಿರುವೆ. ನಿನ್ನ ಜೊತೆ ಸಮಯ ಕಳೆಯಲು ಆಗುತ್ತಿಲ್ಲ ಸಮಯ ಕೊಡುವೆ. ಹೈದರಾಬಾದ್‌ಗೆ ಹೋದಾಗ ಹುಷಾರಿಯಿಲ್ಲ ಅನ್ನೋ ವಿಚಾರ ನಿನ್ನಿಂದ ಮುಚ್ಚಿಟಾಗ ನೀನು ಫೋನ್ ಮಾಡಿ ಅತ್ತಿರುವೆ. ಇದಕ್ಕೆಲ್ಲಾ ಕ್ಷಮೆ ಕೇಳುವೆ. ನನ್ನ ಇರಿಟೇಷನ್ ನಾನೇ ಅನುಭವಿಸುವೆ ಇನ್ಮುಂದೆ ನಿನ್ನ ಮೇಲೆ ತೋರಿಸುವುದಿಲ್ಲ ಎಂದು ನಟಿ ಹೇಳಿದ್ದರು. ಕನ್ನಡ ಕಿರುತೆರೆಯಲ್ಲಿ ತನ್ನ ಮುದ್ದಾದ ನಟನೆಯಿಂದಲೇ ಎಲ್ಲರ ಚಿತ್ತ ಸೆಳೆದಿರುವ ನಟಿ ಭವ್ಯಾ ಗೌಡರಿಗೆ ಎಲ್ಲಿಲ್ಲದ ಬೇಡಿಕೆಯಿದ್ದು, ಇನ್ನಷ್ಟು ಅವಕಾಶಗಳು ನಟಿಗೆ ಒದಗಿ ಬರಲಿ ಎನ್ನುವುದೇ ಆಶಯ.