Geeta ramu chouhan 31 years old : ಆಕೆಯ ದಾಂಪತ್ಯ ಜೀವನದಲ್ಲಿ ಆಗಾಗ ಕಲಹಗಳು ಆಗುತ್ತಿದ್ದವಂತೆ. ಕೌಟುಂಬಿಕ ಮನಸ್ತಾಪಗಳ ಹಿನ್ನೆಲೆಯಲ್ಲಿಯೇ ಮಹಿಳೆ ತನ್ನ ಮೂರು ಎಳೆ ವಯಸ್ಸಿನ ಮಕ್ಕಳ ಸಮೇತವಾಗಿ ನೀರಿನ ಸಂಪ್ ಗೆ ಹಾರಿ ಆ-ತ್ಮ-ಹ-ತ್ಯೆ ಮಾಡಿಕೊಂಡಿದ್ದಾಳೆ. ವಿಜಯಪುರದ ತಿಕೋಟಾ ತಾಲೂಕಿನ ಜಾಲಗೇರಿ ಗ್ರಾಮದ ಬಳಿಯ ವಿಠಲವೇಡಿ ತಾಂಡಾದಲ್ಲಿ ಈ ಘಟನೆಯು ನಡೆದಿದೆ ದುರಂತ ಘಟನೆಯು ನಡೆದ ಸ್ಥಳದಲ್ಲಿ ಗ್ರಾಮಸ್ಥರು ಸೇರಿದ್ದಾರೆ.
ಕುಟುಂಬದ ಜಗಳಗಳಿಗೆ ಬೇಸತ್ತು ಸಾ-ವಿ-ಗೆ ಶರಣಾದ ಮಹಿಳೆಯು ಗೀತಾ ರಾಮು ಚೌವ್ಹಾನ್ ಎಂದು ಗುರುತಿಸಲಾಗಿದೆ. ಆಕೆಗೆ 32 ವರ್ಷ. ಆಕೆಯ ಪತಿಯ ಹೆಸರು ರಾಮು. ಗೀತಾ ಹಾಗೂ ರಾಮು ದಂಪತಿಗಳಿಗೆ ಮೂವರು ಮಕ್ಕಳಿದ್ದರು. ಸೃಷ್ಟಿಗೆ ಆರು ವರ್ಷ. ಎರಡನೇಯ ಮಗು ಸಮರ್ಥನಿಗೆ ನಾಲ್ಕು ವರ್ಷ. ಹಾಗೂ ಕಿರಿಯ ಮಗುವಿನ ಹೆಸರು ಕಿಶನ್. ಮೂರು ವರ್ಷದ ಪುಟ್ಟ ಮಗು.
ಈ ದುರಂತ ಘಟನೆಯು ನಡೆಯುವ ಹಿಂದಿನ ದಿನವಷ್ಟೇ ಗೀತಾ ಹಾಗೂ ರಾಮು ಅವರಿಗೆ ಜಗಳವಾಗಿತ್ತಂತೆ. ಅದೇ ಕಾರಣಕ್ಕಾಗಿ ಗೀತಾ ಮನನೊಂದು ಈ ರೀತಿಯ ನಿರ್ಧಾರವನ್ನು ತೆಗೆದುಕೊಂಡಿದ್ದಾಳೆ ಎನ್ನಲಾಗುತ್ತಿದೆ. ಪತಿ ನಿದ್ದೆ ಮಾಡಿದ ಬಳಿಕ ಗೀತಾ ಮಕ್ಕಳನ್ನು ನೀರಿನ ಸಂಪಿಗೆ ಎಸೆದು ತಾನು ಕೂಡ ಆ-ತ್ಮ-ಹ-ತ್ಯೆ ಮಾಡಿಕೊಂಡಿದ್ದಾಳೆ. ಉತ್ತಮವಾಗಿ ವಿದ್ಯಾಭ್ಯಾಸವನ್ನು ಪಡೆದು ಪ್ರಜ್ವಲವಾದ ಭವಿಷ್ಯವನ್ನು ಅನುಭವಿಸಬೇಕಾಗಿದ್ದ ಮೂವರು ಎಳೆ ಮಕ್ಕಳು ನೀರಿನ ಸಂಪಿನಲ್ಲಿ ಮೃ-ತಪಟ್ಟಿದ್ದಾರೆ.
ಘಟನೆಯು ನಡೆದ ಸ್ಥಳಕ್ಕೆ ಭೇಟಿ ನೀಡಿದ ತಿಕೋಟಾ ಪೊಲೀಸ್ ಠಾಣೆಯ ಅಧಿಕಾರಿಗಳು ಸ್ಥಳದ ಸಂಪೂರ್ಣ ಪರಿಶೀಲನೆಯನ್ನು ನಡೆಸಿದ್ದಾರಂತೆ. ಈ ಪ್ರಕರಣವನ್ನು ದಾಖಲಿಸಿಕೊಂಡಿದ್ದು, ತನಿಖೆಯನ್ನು ನಡೆಸಲಿದ್ದಾರಂತೆ. ತನಿಖೆಯು ಸಂಪೂರ್ಣವಾಗಿ ಮುಗಿದ ಬಳಿಕವೇ ಇನ್ನಷ್ಟು ವಿಚಾರಗಳು ತಿಳಿಯಬೇಕಿದೆ