ಜಿಮ್, ವರ್ಕ್ ಔಟ್ ಮಾಡದೇನೆ 60 ಕೆಜಿ ತೂಕ ಇಳಿಸಿಕೊಂಡ ಗಟ್ಟಿಮೇಳ ಧಾರಾವಾಹಿಯ ನಟಿ ಅಶ್ವಿನಿ.. ಹೇಗೆ ಗೊತ್ತಾ? ಸೂಪರ್ ಅಂತಿರಾ..

ಕಿರುತೆರೆ ಹಾಗೂ ಬೆಳ್ಳಿತೆರೆಯಲ್ಲಿ ಸಕ್ರಿಯರಾಗಿರುವ ನಟ ನಟಿಯರು ಫಿಟ್ ನೆಸ್, ಯೋಗ, ವರ್ಕ್ ಔಟ್ ಎಂದು ಬ್ಯುಸಿಯಾಗಿರುತ್ತಾರೆ. ಆಹಾರ ಶೈಲಿ (Food style) ಹಾಗೂ ಜೀವನ ಶೈಲಿ (Lifestyle) ಯಿಂದ ದಿನೇ ದಿನೇ ತೂಕ ಹೆಚ್ಚಾಗುತ್ತಿರುತ್ತದೆ. ಆದರೆ ಸಿನಿಮಾರಂಗದಲ್ಲಿರುವವರು ಆರೋಗ್ಯ ಹಾಗೂ ಫಿಟ್ ನೆಸ್ ಬಗ್ಗೆ ಹೆಚ್ಚು ಗಮನ ಕೊಡಲೇ ಬೇಕಾಗುತ್ತದೆ.

ಆದರೆ ಈ ವಿಚಾರದಲ್ಲಿ ಗಟ್ಟಿಮೇಳ’ (Gattimela) ಧಾರಾವಾಹಿಯಲ್ಲಿ ಆರತಿ ಪಾತ್ರ (Arati role) ವನ್ನು ಕಾಣಿಸಿಕೊಂಡಿದ್ದ ನಟಿ ಅಶ್ವಿನಿ ಸ್ವಲ್ಪ ಭಿನ್ನ ಎನ್ನಬಹುದು. ಗಟ್ಟಿಮೇಳ’ ಧಾರಾವಾಹಿಯಲ್ಲಿ ಆರತಿ ಪಾತ್ರವನ್ನು ಮಾಡುತ್ತಿದ್ದ ವೇಳೆಯಲ್ಲಿ ಅಶ್ವಿನಿ ಗುಂಡು ಗುಂಡು ಆಗಿಯೇ ಕಾಣಿಸಿಕೊಂಡಿದ್ದರು. ಆದರೆ ಇದೀಗ ಬಳುಕುವ ಬಳ್ಳಿಯಂತೆ ಸ್ಲಿಮ್ (Slim) ಆಗಿದ್ದಾರೆ.

ಗಟ್ಟಿಮೇಳ’ ಧಾರಾವಾಹಿಯಲ್ಲಿ ಇದ್ದಾಗ, 60 ಕೆಜಿ ಇದ್ದರು. ಆ ವೇಳೆಯಲ್ಲಿ ತೆಲುಗಿನಲ್ಲಿ ನಾಗಿಣಿ ಪಾತ್ರದಲ್ಲಿ ನಟಿಸಲು ಅವಕಾಶ ಸಿಕ್ಕಿತು. ಈ ಕಾರಣದಿಂದ ತೂಕವನ್ನು ಇಳಿಸಿಕೊಂಡಿದ್ದಾರೆ. ಆದರೆ ನಟಿ ಅಶ್ವಿನಿಯವರು ಯಾವುದೇ ವರ್ಕ್ ಔಟ್, ಜಿಮ್ ಗೆ ಹೋಗದೇ ತೂಕ ಇಳಿಸಿಕೊಂಡಿರುವುದು ವಿಶೇಷ ಎನ್ನಬಹುದು. ಆಗಾಗ ಫೋಟೋ ಹಾಗೂ ವಿಡಿಯೋಗಳನ್ನು ಶೇರ್ ಮಾಡಿಕೊಳ್ಳುತ್ತಾ ತಮ್ಮ ಡೈಲಿ ಲೈಫ್ ನ ಬಗ್ಗೆ ಫ್ಯಾನ್ಸ್ ಗಳಿಗೆ ತಿಳಿಸುವ ಪ್ರಯತ್ನ ಮಾಡುತ್ತಾರೆ.

ಆದರೆ ತಾನು ಸಣ್ಣ ಆಗಿದ್ದರ ಬಗ್ಗೆ ವಿಡಿಯೋ (Video) ಮಾಡಿ ಶೇರ್ ಮಾಡಿಕೊಂಡಿದ್ದು ಈ ಬಗ್ಗೆ ಹೇಳಿಕೊಂಡಿದ್ದಾರೆ. ತನ್ನ ತೂಕ ಕಡಿಮೆ ಆಗಿರುವುದರ ಬಗ್ಗೆ ವಿಡಿಯೋ ಮಾಡಿರುವ ನಟಿ ಅಶ್ವಿನಿಯವರು , “ನಾನು ಪ್ರತಿದಿನ ಬೆಳಗಿನ ಜಾವ 4 ಗಂಟೆಗೆ ಏಳುತ್ತೇನೆ. ಬೆಳಗ್ಗೆ ಅಷ್ಟು ಬೇಗ ಏಳುವುದರಿಂದ ಆರೋಗ್ಯಕ್ಕೂ ತುಂಬಾ ಒಳ್ಳೆಯದು. ದಿನವೂ ಆಕ್ಟೀವ್ ಆಗಿ ಇರುತ್ತೀವಿ.

ಅದರ ಜೊತೆಗೆ ಎದ್ದ ಕೂಡಲೇ ಮನೆಯಲ್ಲಿಯೇ ಒಂದಷ್ಟು ವ್ಯಾಯಾಮ ಮಾಡುತ್ತೇನೆ. ದೇಹದ ಬೊಜ್ಜನ್ನು ಕರಗಿಸುವಂತ ವ್ಯಾಯಾಮಗಳನ್ನು ಮಾಡುತ್ತೇನೆ” ಎಂದು ಹೇಳಿದ್ದಾರೆ. ನಟಿ ಅಶ್ವಿನಿಯವರು ಸಣ್ಣ ಆಗುವುದಕ್ಕೆ ಉತ್ತಮ ಆರೋಗ್ಯ ಶೈಲಿ (Good Food Style) ಯನ್ನು ಅನುಸರಿಸಿದ್ದು, ಬೆಳಗ್ಗೆ ವ್ಯಾಯಾಮ ಮಾಡಿ 8 ಗಂಟೆಯ ಒಳಗೆ ರಾಗಿ ಮಾಲ್ಟ್‌ ಮಾಡಿಕೊಂಡು ಕುಡಿಯುತ್ತಾರೆರಂತೆ.

ಆದಾದ ಬಳಿಕ ಮತ್ತೆ 10 ಗಂಟೆಗೆ ಒಳಗೆ ಸೌತೆಕಾಯಿ, ಕ್ಯಾರೆಟ್ ಮತ್ತು ಆ ಸೀಸನ್‌ನಲ್ಲಿ ಸಿಗುವ ಹಣ್ಣುಗಳನ್ನು ತಿನ್ನುತ್ತಾರೆ.ಇನ್ನು ಡಯಟ್ ಮಾಡುವ ಸಮಯದಲ್ಲಿ ಪದೇ ಪದೇ ಹೊಟ್ಟೆ ಹಸಿವಾದರೆ ಒಂದು ಮೊಟ್ಟೆಯನ್ನು ಬೇಯಿಸಿಕೊಂಡು ಸೇವಿಸುತ್ತಾರೆ. ಆದಾದ ಬಳಿಕ ಮಧ್ಯಾಹ್ನದ ಊಟಕ್ಕೆ ಬ್ರೌನ್ ರೈಸ್ ಮತ್ತು ಸೊಪ್ಪಿನ ಸಾರನ್ನು ಸೇವಿಸುತ್ತಾರೆ. ಹೀಗಾಗಿ ತಮ್ಮ ತೂಕವನ್ನು ಇಳಿಸಿಕೊಂಡು ಫಿಟ್ ಆಗಿರುವ ಫಿಟ್ ನೆಸ್ ಮಂತ್ರವನ್ನು ತನ್ನ ಫ್ಯಾನ್ಸ್ ಗಳಿಗೆ ತಿಳಿಸಿದ್ದಾರೆ.

Leave a Reply

Your email address will not be published. Required fields are marked *