ಗಟ್ಟಿಮೇಳ ಧಾರಾವಾಹಿ ಖ್ಯಾತಿಯ ರಕ್ಷ್ ಅವರ ಮದುವೆಯ ಸುಂದರ ಕ್ಷಣದ ಫೋಟೋ ಹೇಗಿತ್ತು ಗೊತ್ತಾ? ಇಲ್ಲಿದೆ ನೋಡಿ

ಬಣ್ಣದ ಜಗತ್ತು ಎಷ್ಟು ಸುಂದರವೆಂದರೆ ಈ ಲೋಕಕ್ಕೆ ಒಮ್ಮೆ ಎಂಟ್ರಿ ಕೊಟ್ಟರೆ ಸಾಕು ಹೆಸರು ಹಾಗೂ ಕೀರ್ತಿ ಎರಡು ಒಟ್ಟಾಗಿಯೇ ಬರುತ್ತದೆ. ಒಮ್ಮೆ ಬಣ್ಣದ ಲೋಕದೆಡೆಗೆ ಮುಖ ಮಾಡಿದರೆ ಯಾರೆಂದು ಗೊತ್ತಿಲ್ಲದ ವ್ಯಕ್ತಿಗಳು ಕೂಡ ಸೆಲೆಬ್ರಿಟಿಗಳಾ ಗಿ ಬಿಡುತ್ತಾರೆ. ಆದರೆ ಒಮ್ಮೆ ನೇಮ್ ಫೇಮ್ ಬಂದರೆ ಅದನ್ನು ಉಳಿಸಿಕೊಂಡು ಹೋಗುವುದು ಕೂಡ ತಿಳಿದಿರಬೇಕು. ಇದೀಗ ಕನ್ನಡ ಕಿರುತೆರರೆ ಲೋಕದಲ್ಲಿ ಗುರುತಿಸಿಕೊಂಡಿರುವ ರಕ್ಷ್ (Raksh) ಯಾರಿಗೆ ತಾನೇ ಗೊತ್ತಿಲ್ಲ ಹೇಳಿ?. ಈ ಧಾರಾವಾಹಿ ಬಳಿಕ ರಕ್ಷ್ ಅವರ ಫ್ಯಾನ್ಸ್ ಬಳಗ ದೊಡ್ಡದಾಯಿತು.

ಪುಟ್ಟ ಗೌರಿ ಮದುವೆ (Putta Gowri Maduve) ಧಾರಾವಾಹಿ ಮೂಲಕ ಜನಪ್ರಿಯತೆಯನ್ನು ಗಳಿಸಿಕೊಂಡ ಸದ್ಯಕ್ಕೆ ಕಿರುತೆರೆಯಲ್ಲಿ ಬ್ಯುಸಿಯಾಗಿರುವ ನಟರಲ್ಲಿ ಒಬ್ಬರು. ಪುಟ್ಟಗೌರಿ ಮದುವೆ (Putta Gowri Maduve) ಹಾಗೂ’ಗಟ್ಟಿಮೇಳ’ (Gattimela) ಧಾರಾವಾಹಿ ಖ್ಯಾತಿಯ ನಟ ರಕ್ಷ್ ಅವರಿಗೆ ರಕ್ಷ್ ಅವರಿಗೆ ದೊಡ್ಡ ಸಂಖ್ಯೆಯಲ್ಲಿ ಫ್ಯಾನ್ಸ್ ಬಳಗವಿದೆ. ವೃತ್ತಿ ಜೀವನದಲ್ಲಿ ಸಾಧನೆಯತ್ತ ಸಾಗುತ್ತಿದ್ದು, ವೈಯುಕ್ತಿಕ ಜೀವನದಲ್ಲಿ ಅಂದುಕೊಂಡಂತೆ ಪ್ರೀತಿಸಿದ ಹುಡುಗಿಯನ್ನು ಮದುವೆಯಾಗಿ ಸುಖವಾಗಿ ಸಂಸಾರ ಮಾಡುತ್ತಿದ್ದಾರೆ.

ಇದೀಗ ನಟ ರಕ್ಷ್ ಅವರ ಮದುವೆಯ ಫೋಟೋ (Marriage Photo) ವೊಂದು ವೈರಲ್ ಆಗಿದೆ. ಈ ಫೋಟೋದಲ್ಲಿ ರಕ್ಷ್ ಮದುವೆಯಲ್ಲಿ ಕಿರುತೆರೆ ಹಾಗೂ ಬೆಳ್ಳಿತೆರೆಯ ನಟ ನಟಿಯರು ಭಾಗಿಯಾಗಿರುವುದನ್ನು ಕಾಣಬಹುದು. 2019ರಲ್ಲಿ ಆತ್ಮೀಯರು, ಕುಟುಂಬಸ್ಥರು, ಸ್ಯಾಂಡಲ್‌ವುಡ್ ಮಂದಿಯ ಸಾಕ್ಷಿಯಾಗಿ ಬೆಂಗಳೂರಿ (Banglore) ನ ಅರಮನೆ ಮೈದಾನದ ಶೀಶ್ ಮಹಲ್‌ (Shish Mahal) ನಲ್ಲಿ ರಕ್ಷ್ ಅವರು ಬಹುಕಾಲದ ಗೆಳತಿ ಅನುಷಾ (Anusha)ಜೊತೆಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. 12 ವರ್ಷಗಳಿಂದ ರಕ್ಷ್, ಅನುಷಾ ಪರಿಚಯಸ್ಥರು.

ಪಿಯುಸಿಯಿಂದಲೇ ಅವರಿಬ್ಬರು ಕ್ಲಾಸ್‌ಮೇಟ ಆಗಿದ್ದು, ಲಾ ಕಾಲೇಜಿನಲ್ಲಿಯೂ ಒಟ್ಟಾಗಿಯೇ ಓದಿದ್ದರು. ಆದರೆ ಅನುಷಾ ಅಷ್ಟಾಗಿ ಸಾರ್ವಜನಿಕವಾಗಿ ಕಾಣಿಸಿಕೊಳ್ಳದೇ ಸೈಲೆಂಟ್ ಆಗಿದ್ದ ಹುಡುಗಿಯಾಗಿದ್ದರು. ಆದ್ರೆ ಕೊನೆಗೂ ರಕ್ಷ್ ಅವರು ಅನುಷಾರವರ ಪ್ರೀತಿಗೆ ಬಿದ್ದು ಇದೀಗ ಮದುವೆಯಾಗಿ ಸಂಸಾರ ಮಾಡುತ್ತಿದ್ದಾರೆ. ಕೆಲವು ಕಾರ್ಯಕ್ರಮಗಳಲ್ಲಿ ರಕ್ಷ್ ಜೊತೆಗೆ ಅನುಷಾ ಕಾಣಿಸಿಕೊಂಡಿದ್ದರು.

ಅದಲ್ಲದೇ ಈ ಹಿಂದೆ ತನ್ನ ಮುದ್ದಿನ ಮಡದಿ ಬಗ್ಗೆ ಮಾತನಾಡಿದ್ದ ರಕ್ಷ್, “ನನ್ನ ಪತ್ನಿ ಅನುಷಾ ಲೊ ಪ್ರೊಫೈಲ್‌ ಮೆಂಟೇನ್‌ ಮಾಡಲು ಬಯಸುತ್ತಾಳೆ. ಹೀಗಾಗಿ ನನ್ನ ಪಕ್ಕದಲ್ಲೇ ಅವಳು ಇದ್ದರೂ ಎಷ್ಟೋ ಜನ ಹೆಣ್ಣುಮಕ್ಕಳು ಆಕೆಯನ್ನು ಗಮನಿಸದೇ ಸೆಲ್ಫಿ ಕ್ಲಿಕ್ಕಿಸಿ ಬಳಿಕ ನನಗೆ ‘ಲವ್‌ ಯೂ’ ಅಂದದ್ದೂ ಇದೆ’ ಎಂದು ಹೇಳಿದ್ದರು. ಗಟ್ಟಿಮೇಳ’ ಧಾರಾವಾಹಿಯಲ್ಲಿ ನಟಿಸುವುದರ ಜೊತೆಗೆ ಇತ್ತೀಚೆಗೆ ಅದರ ನಿರ್ಮಾಣದ ಜವಾಬ್ದಾರಿಯನ್ನು ಕೂಡ ರಕ್ಷ್ ವಹಿಸಿಕೊಂಡು ಹೋಗುತ್ತಿದ್ದು, ನಟ ರಕ್ಷ್ ಅವರಿಗೆ ಸಾಲು ಸಾಲು ಅವಕಾಶ ಗಳು ಬರುತ್ತಿವೆ.

Leave a Reply

Your email address will not be published. Required fields are marked *