ಸೆಪ್ಟೆಂಬರ್ 18 ರ ಗಣೇಶ ಚತುರ್ಥಿ ಹಬ್ಬ (Genesh Chaturti Festival) ದ ದಿನವಾದ ಇಂದು ಚಂದ್ರನು ಭೌತಿಕ ಸೌಕರ್ಯಗಳ ಅಧಿಪತಿಯಾದ ಶುಕ್ರನ ರಾಶಿ ತುಲಾ ರಾಶಿಯಲ್ಲಿ ಸಾಗುತ್ತಿದ್ದು, ಈ ಚಂದ್ರನು ತುಲಾರಾಶಿಯಲ್ಲಿ ಮತ್ತು ಗುರು ಮೇಷದಲ್ಲಿ ಇರುವುದರಿಂದ ಇಂದು ಗಜಕೇಸರಿ ಯೋಗ (Gaja Kesari Yog) ದ ಮಂಗಳಕರ ಸಂಯೋಜನೆಯು ರೂಪುಗೊಳ್ಳುತ್ತಿದೆ.
ಇದರೊಂದಿಗೆ ಚಿತ್ರಾನಕ್ಷತ್ರ ಮತ್ತು ಐಂದ್ರ ಯೋಗ (Indra Yog) ಮತ್ತು ರವಿ ಯೋಗವು (Ravi Yog) ಇರುವುದರಿಂದ ಕೆಲವು ರಾಶಿಯವರಿಗೆ ಶುಭದಾಯಕ ದಿನ (Good Day) ವಾಗಿರಲಿದೆ. ಹಾಗಾದ್ರೆ ಈ ದಿನ ಯಾವ ರಾಶಿಯವರಿಗೆ ಏನೆಲ್ಲಾ ಶುಭ ಫಲಗಳಿವೆ ಎನ್ನುವುದನ್ನು ಈ ಲೇಖನ ದಲ್ಲಿ ತಿಳಿದುಕೊಳ್ಳಬಹುದು.

ಮೇಷ ರಾಶಿ: ಈ ದಿನವು ಆದಾಯ ಮತ್ತು ಖರ್ಚು ವೆಚ್ಚಗಳ ನಡುವೆ ಸ್ವಲ್ಪ ಸಮತೋಲನವನ್ನು ಕಾಯ್ದುಕೊಳ್ಳುವುದು ಒಳ್ಳೆಯದು. ಎರಡನ್ನು ಬ್ಯಾಲೆನ್ಸ್ ಮಾಡಿದರೆ ಮಾತ್ರ ಆರ್ಥಿಕ ಸ್ಥಿತಿಯೂ ಸುಧಾರಿಸುತ್ತದೆ. ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಕಡೆಗೆ ಹೆಚ್ಚು ಗಮನ ಕೊಡಿ. ಮನೆ ಅಥವಾ ವ್ಯವಹಾರದಲ್ಲಿ ಕೋಪದಲ್ಲಿ ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳುವುದನ್ನು ಸೂಕ್ತವಲ್ಲ. ಕೆಲವೊಮ್ಮೆ ನಿಮ್ಮ ನಿರ್ಧಾರಗಳು ದೊಡ್ಡ ಸಮಸ್ಯೆಗೆ ದಾರಿ ಮಾಡಿಕೊಡುವ ಸಾಧ್ಯತೆಯೂ ಅಧಿಕವಾಗಿದೆ.
ವೃಷಭ ರಾಶಿ : ಈ ರಾಶಿಯವರು ವ್ಯಾಪಾರ ಯೋಜನೆಗಳಿಗೆ ಕೈಹಾಕಿದರೆ ಒಳ್ಳೆಯ ಫಲ ಸಿಗಲಿದೆ ಹಾಗೂ ಮುಂಬರುವ ದಿನಗಳಲ್ಲಿ ಲಾಭವು ದೊರಕಲಿದೆ. ಆದರೆ ಕೆಲಸ ಕಾರ್ಯದ ಸ್ಥಳಗಳಲ್ಲಿ ಅಡಚಣೆಯಾಗುವ ಸಾಧ್ಯತೆಯೂ ಇದೆ. ಶತ್ರುಗಳ ಮೇಲೆ ಒಂದು ಕಣ್ಣು ಇಡುವುದು ಒಳ್ಳೆಯದು. ವೈವಾಹಿಕ ಜೀವನವು ಉತ್ತಮವಾಗಿರುತ್ತದೆ, ಅದರ ಜೊತೆಗೆ ಆರೋಗ್ಯವು ಸುಧಾರಿಸಲಿದೆ.
ಮಿಥುನ ರಾಶಿ : ವಾರದ ಮೊದಲ ದಿನ ಮಿಥುನ ರಾಶಿಯವರಿಗೆ ವೃತ್ತಿಯಲ್ಲಿ ಉತ್ತಮ ಪ್ರಗತಿಯನ್ನು ಕಾಣುವಿರಿ. ನೀವು ತೆಗೆದುಕೊಳ್ಳುವ ನಿರ್ಧಾರ ಹಾಗೂ ನಿಮ್ಮ ಆಲೋಚನೆಗಳನ್ನು ಯಾರೊಂದಿಗೂ ಹಂಚಿಕೊಳ್ಳಲು ಹೋಗಬೇಡಿ. ಸಂಗಾತಿಯ ಜೊತೆಗಿನ ಬಾಂಧವ್ಯವು ಸುಧಾರಣೆಯಾಗಲಿದೆ. ಅದಲ್ಲದೇ ಇಂದು ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸುವಿರಿ.
ಕಟಕ ರಾಶಿ: ಕುಟುಂಬದ ಸದಸ್ಯರಿಂದ ಒಳ್ಳೆಯ ಸುದ್ದಿ ಕೇಳುವ ದಿನ ಇಂದು ನಿಮ್ಮದಾಗಲಿದೆ. ಸಂಗಾತಿಯ ಜೊತೆಯಲ್ಲಿ ಪ್ರಾಮಾಣಿಕವಾಗಿರುವುದು ನಿಮ್ಮ ಸಂಬಂಧವನ್ನು ಬಲಪಡಿಸುತ್ತದೆ. ಕುಟುಂಬದ ಮಹಿಳಾ ಸದಸ್ಯರಿಂದ ಹಣಕಾಸಿನ ಬೆಂಬಲವು ಸಿಗಲಿದೆ. ಯಾವುದೇ ಕೆಲಸ ಕಾರ್ಯಗಳಿಗೂ ಕೈ ಹಾಕುವ ಮುನ್ನ ಸರಿಯಾಗಿ ಯೋಚಿಸುವುದು ಒಳಿತು.
ಸಿಂಹ ರಾಶಿ : ಸಿಂಹ ರಾಶಿಯವರು ಕೆಲಸ ಸ್ಥಳದಲ್ಲಿ ಕೆಲವು ತೊಂದರೆಗಳಿಗೆ ಸಿಲುಕುವಿರಿ. ಸ್ವಲ್ಪ ಎಚ್ಚರಿಕೆಯಿಂದ ಕೆಲಸ ಕಾರ್ಯಗಳಲ್ಲಿ ತೊಡಗಿ..ತಂದೆಯ ಆರೋಗ್ಯದ ಬಗ್ಗೆ ಸ್ವಲ್ಪ ಜಾಗರೂಕರಾಗಿರಿ. ಹಣ ಹೂಡಿಕೆಯೂ ಮಾಡದಿದ್ದರೆ ನಷ್ಟ ಅನುಭವಿಸುವ ಸಾಧ್ಯತೆಯಿದೆ. ಕುಟುಂಬದ ಜೊತೆಗೆ ಸಮಯ ಕಳೆಯುವ ದಿನ ಇಂದು ನಿಮ್ಮದಾಗಲಿದೆ.
ಕನ್ಯಾ ರಾಶಿ : ಈ ರಾಶಿಯ ಜನರು ಇಂದು ಉದ್ಯೋಗ ಕ್ಷೇತ್ರದಲ್ಲಿ ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ದೊರಕುತ್ತದೆ. ಅರ್ಧಕ್ಕೆ ನಿಂತು ಹೋಗಿರುವ ಕೆಲಸ ಕಾರ್ಯಗಳು ಇಂದು ಪ್ರಾರಂಭವಾಗಲಿದೆ. ಶತ್ರುಗಳನ್ನು ಸ್ನೇಹಿತರಂತೆ ನಟಿಸಬಹುದು. ಶತ್ರುಗಳ ವಿಚಾರದಲ್ಲಿ ಜಾಗರೂಕರಾಗಿರುವುದು ಒಳ್ಳೆಯದು. ಕುಟುಂಬದ ಜೊತೆಗೆ ಸಮಯ ಕಳೆಯುವ ದಿನ ಇಂದು ನಿಮ್ಮದಾಗಲಿದೆ.
ತುಲಾ ರಾಶಿ: ಈ ರಾಶಿಯವರಿಗೆ ವ್ಯಾಪಾರ ವ್ಯವಹಾರಗಳಲ್ಲಿ ಲಾಭದಾಯಕ ದಿನವಾಗಿರಲಿದೆ. ಆಸ್ತಿ ವಿಚಾರದಲ್ಲಿ ಕೋರ್ಟ್ ಮೆಟ್ಟಿಲ್ಲೇರಿದ್ದರೆ ಜಯ ನಿಮ್ಮದಾಗಲಿದೆ. ಹಣದ ವ್ಯವಹಾರಗಳನ್ನು ಮಾಡುವುದನ್ನು ನಿಲ್ಲಿಸಿ, ಇಲ್ಲವಾದರೆ ನಷ್ಟದ ಸಾಧ್ಯತೆಯಿದೆ. ಇಂದು ಸಂಜೆ ಸ್ನೇಹಿತರ ಮನೆಗೆ ಹೋಗಿಗಿ ಅವರೊಂದಿಗೆ ಸಮಯ ಕಳೆಯುವಿರಿ. ಆರೋಗ್ಯವು ಸುಧಾರಿಸಲಿದೆ.
ವೃಶ್ಚಿಕ ರಾಶಿ : ಈ ರಾಶಿಯ ಜನರು ಇಂದು ಧೈರ್ಯದಿಂದ ಸವಾಲುಗಳನ್ನು ಎದುರಿಸಲಿದ್ದಾರೆ. ಅರ್ಧಕ್ಕೆ ನಿಂತಿರುವ ಕೆಲಸ ಕಾರ್ಯಗಳನ್ನು ಪೂರ್ಣಗೊಳ್ಳಲಿದೆ ಸಂಗಾತಿಯ ಸಲಹೆಯೊಂದಿಗೆ ಆರ್ಥಿಕ ಸ್ಥಿತಿ ಇಂದು ಬಲಗೊಳ್ಳಲಿದೆ. ಅನಗತ್ಯ ಹಣವನು ಖರ್ಚು ಮಾಡುವುದನ್ನು ತಪ್ಪಿಸುವುದು ಒಳ್ಳೆಯದು. ಕೆಲಸ ಮಾಡುವ ಕಚೇರಿಯಲ್ಲಿ ತಮ್ಮ ಮೇಲಧಿಕಾರಿಗಳೊಂದಿಗೆ ಉತ್ತಮ ಸಂಬಂಧವನ್ನು ಹೊಂದಲಿದ್ದಾರೆ. ಧಾರ್ಮಿಕ ಕಾರ್ಯಗಳಲ್ಲಿ ಭಾಗಿಯಾಗುವಿರಿ.
ಧನು ರಾಶಿ : ಈ ರಾಶಿಯವರಿಗೆ ಲಾಭದಾಯಕ ದಿನವಾಗಲಿರದೆ. ಹಿರಿಯ ಅಧಿಕಾರಿಯ ಸಹಾಯದಿಂದ ಬಾಕಿಯಿರುವ ಕೆಲಸಗಳು ಇಂದು ಪೂರ್ಣಗೊಳ್ಳುತ್ತವೆ. ನೀವು ಆಸ್ತಿಯನ್ನು ಖರೀದಿಸಲು ಅಥವಾ ಮಾರಾಟ ಮಾಡಲು ಯೋಜಿಸುತ್ತಿದ್ದರೆ, ಸ್ವಲ್ಪ ಯೋಚಿಸಿ ನಿರ್ಧಾರ ತೆಗೆದುಕೊಳ್ಳಿ. ಸಂಬಂಧಿಕರ ಹಣದ ವ್ಯವಹಾರ ಮಾಡಬೇಡಿ, ಇದು ಸಂಕಷ್ಟಕ್ಕೆ ಕಾರಣವಾಗಬಹುದು. ಹಳೆಯ ಸಮಸ್ಯೆಗಳು ಇಂದು ಪರಿಹಾರವಾಗಲಿದೆ.
ಮಕರ ರಾಶಿ : ಹಬ್ಬದ ದಿನವಾದ ಇಂದು ಈ ರಾಶಿಯವರು ಕುಟುಂಬದೊಂದಿಗೆ ಸಂಬಂಧವು ಸಂತೋಷದಿಂದ ಕೂಡಿರುತ್ತದೆ. ವ್ಯಾಪಾರ ಮಾಡುವ ಜನರು ಇಂದು ಧನಾತ್ಮಕ ಫಲಿತಾಂಶಗಳನ್ನು ಪಡೆಯಲಿದ್ದಾರೆ. ಸಹೋದರ ಸಹೋದರಿಯರೊಂದಿಗೆ ಸಂಜೆ ಕಳೆಯುವ ದಿನವಾಗಲಿದೆ. ಲಾಭದಾಯಕ ದಿನ ಈ ರಾಶಿಯವರದ್ದು ಆಗಿರಲಿದೆ.
ಕುಂಭ ರಾಶಿ : ಇಂದು ದೀರ್ಘಾವಧಿಯ ಕೆಲಸಗಳು ಸುಲಭವಾಗಿ ಪೂರ್ಣಗೊಳ್ಳಲಿದೆ. ವಿದ್ಯಾರ್ಥಿಗಳು ಶಿಕ್ಷಣ ಕ್ಷೇತ್ರದಲ್ಲಿ ಎದುರಿಸುತ್ತಿರುವ ಸಮಸ್ಯೆಗಳನ್ನು ತಮ್ಮ ಹಿರಿಯರು ಮತ್ತು ಶಿಕ್ಷಕರೊಂದಿಗೆ ಹಂಚಿಕೊಂಡು ಪರಿಹಾರ ಕಂಡುಕೊಳ್ಳುತ್ತಾರೆ. ಇಂದು ಹೂಡಿಕೆ ಮಾಡಿದರೆ ಉತ್ತಮ ಲಾಭ ಮತ್ತು ಸಂಪತ್ತನ್ನು ಹೊಂದುವಿರಿ. ಕುಟುಂಬದ ಸದಸ್ಯರು ಸೇರಿಕೊಂಡು ಸಂತಸದಿಂದ ದಿನ ಕಳೆಯುವಿರಿ.
ಮೀನ ರಾಶಿ: ಈ ರಾಶಿಯವರು ಇಂದು ಎಲ್ಲಾ ಕಾರ್ಯಗಳನ್ನು ಒಂದೊಂದಾಗಿ ಪೂರ್ಣಗೊಳಿಸುವಲ್ಲಿ ಯಶಸ್ವಿಯಾಗುತ್ತಾರೆ. ಕುಟುಂಬ ಸದಸ್ಯರೊಂದಿಗೆ ಸ್ವಲ್ಪ ದೂರದ ಪ್ರವಾಸಕ್ಕೆ ಹೋಗುವ ಸಾಧ್ಯತೆಯೂ ಇದೆ. ಒಡಹುಟ್ಟಿದವರೊಂದಿಗಿನ ಸಂಬಂಧಗಳು ಗಟ್ಟಿಯಾಗಿ ಜೊತೆಯಾಗಿ ಹೊಸ ವ್ಯವಹಾರವನ್ನು ಪ್ರಾರಂಭಿಸಬಹುದು. ಅವಿವಾಹಿತರಿಗೆ ಉತ್ತಮ ವಿವಾಹ ಪ್ರಸ್ತಾಪಗಳು ಬರಲಿದ್ದು ಶುಭ ಕಾರ್ಯಗಳು ನಡೆಯುವ ಬಗ್ಗೆ ಸೂಚನೆಯೂ ಸಿಗಬಹುದು.