ಮಗಳ ಅಗಲುವಿಕೆಯ ನೋವಿನಿಂದ ವೃತ್ತಿ ಜೀವನಕ್ಕೆ ನಿವೃತ್ತಿ ಘೋಷಿಸಿದ್ದ ಪಾಕಿಸ್ತಾನದ ಮಾಜಿ ಆರಂಭಿಕ ಆಟಗಾರ ಸಯೀದ್ ಅನ್ವರ್, ಅಷ್ಟಕ್ಕೂ ಆಗಿದ್ದೇನು ಗೊತ್ತಾ?

ಕ್ರಿಕೆಟ್ ಲೋಕದಲ್ಲಿ ಭಾರತೀಯರು ಮಾತ್ರವಲ್ಲದೇ ವಿದೇಶಿಗರು ಕೂಡ ತಮ್ಮದೇ ಛಾಪನ್ನು ಮೂಡಿಸಿದ್ದಾರೆ. ಅಂತಹವರ ಸಾಲಿಗೆ ಪಾಕಿಸ್ತಾನದ ಮಾಜಿ ಆರಂಭಿಕ ಆಟಗಾರ ಸಯೀದ್ ಅನ್ವರ್ (Saeed Anwar) ಅವರು ಅದ್ಭುತ ಕ್ರಿಕೆಟ್ ಆಟಗಾರರಲ್ಲಿ ಒಬ್ಬರಾಗಿದ್ದಾರೆ. 1990 ರ ದಶಕದ ಏಷ್ಯಾದ ಪ್ರಭಾವಶಾಲಿ ಆರಂಭಿಕ ಬ್ಯಾಟ್ಸ್‌ಮನ್ (Batsman) ಎನಿಸಿಕೊಂಡಿದ್ದರು.

ಈಗಾಗಲೇ ತಮ್ಮ ವೃತ್ತಿ ಜೀವನದಲ್ಲಿ ಅದ್ಭುತ ಪ್ರದರ್ಶನಗಳನ್ನು ನೀಡಿದ್ದು, ಕ್ರಿಕೆಟ್ ಪ್ರೇಮಿಗಳ ಮನಸ್ಸು ಗೆದ್ದುಕೊಂಡಿದ್ದಾರೆ. 2001 ರ ಮುಲ್ತಾನ್ ಟೆಸ್ಟ್ (Multan Test) ಈ ಆರಂಭಿಕ ಬ್ಯಾಟ್ಸ್‌ಮನ್‌’ಗೆ ಕೊನೆಯ ಟೆಸ್ಟ್ ಎನ್ನಬಹುದು. 1989 ರಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್‌ ಲೋಕಕ್ಕೆ ಎಂಟ್ರಿ ಕೊಟ್ಟರೂ ಕೂಡ ತಮ್ಮ 13 ವರ್ಷಗಳ ಕಾಲ ಏಕದಿನ ಕ್ರಿಕೆಟ್‌’ ನಲ್ಲಿ ಅದ್ಭುತ ಪ್ರದರ್ಶನ ನೀಡಿದ್ದರು. ಆದರೆ ಬದುಕಿನಲ್ಲಿ ನಡೆದ ಘಟನೆಯೊಂದರಿಂದ ತಮ್ಮ ವೃತ್ತಿ ಜೀವನಕ್ಕೆ ಬ್ರೇಕ್ ತೆಗೆದುಕೊಳ್ಳುವ ಕಾಲ ಬಂದಿತ್ತು.

ಅಂದಹಾಗೆ, ಮುಲ್ತಾನ್‌’ನಲ್ಲಿ ಮೊದಲ ಪಂದ್ಯ ಆಗಸ್ಟ್ 29 ರಂದು ಪ್ರಾರಂಭವಾಗಿತ್ತು. ಈ ಮ್ಯಾಚ್ ನಲ್ಲಿ ಅನ್ವರ್ (Anwar) ಮೊದಲ ಇನ್ನಿಂಗ್ಸ್‌’ನಲ್ಲಿ ಶತಕ ಬಾರಿಸಿದ್ದರು. ಪಾಕಿಸ್ತಾನ ತಂಡವು 264 ರನ್‌’ಗಳಿಂದ ಪಂದ್ಯವನ್ನು ಜಯಗಳಿಸಿತ್ತು. ಈ ಟೆಸ್ಟ್ ಪಂದ್ಯದ ವೇಳೆಯಲ್ಲಿ ಮೂರೂವರೆ ವರ್ಷದ ಮಗಳು ಬಿಸ್ಮಾ (Bisma) ದೀರ್ಘಕಾಲದ ಅನಾರೋಗ್ಯದಿಂದ ಸಾ-ವನ್ನಪ್ಪಿದ್ದಾರೆ ಎಂಬ ಸುದ್ದಿ ಅನ್ವರ್ ಗೆ ತಿಳಿಯಿತು.

ಈ ಘಟನೆಯಿಂದ ತೀರಾ ನೊಂದುಕೊಂಡ ಅವರು ತಕ್ಷಣವೇ ಲಾಹೋರ್‌’ಗೆ ಹೋದರು. ಆ ಬಳಿಕ ಮತ್ತೆ ಅವರು ಟೆಸ್ಟ್ ಪಂದ್ಯಗಳನ್ನು ಅಡಲಿಲ್ಲ 2001 ರಲ್ಲಿ, ಸಯೀದ್ ಅನ್ವರ್ ಅವರ ಮಗಳು ನಿಧನವು ಅವರ ವೃತ್ತಿ ಜೀವನವನ್ನು ಅಂತ್ಯಗೊಳಿಸುವ ನಿರ್ಧಾರವನ್ನು ಕೈಗೊಳ್ಳುವಂತೆ ಮಾಡಿತ್ತು ಎನ್ನಬಹುದು. ಮಗಳ ಅಗಲುವಿಕೆಯ ನೋ-ವಿನಿಂದ ನೊಂದುಕೊಂಡಿದ್ದ ಅವರು ಇಸ್ಲಾಂ ಧರ್ಮ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡು ಬಿಟ್ಟರು.

ಆ ಬಳಿಕ 2003 ರ ಐಸಿಸಿ ವಿಶ್ವಕಪ್‌’ (World Cup) ನಲ್ಲಿ ಭಾರತದ ವಿರುದ್ಧ 101 ರನ್‌’ಗಳ ಇನ್ನಿಂಗ್ಸ್ ಆಡಿದ್ದರು. ಈ ವೇಳೆ ಅನ್ವರ್ ಅವರು ತಮ್ಮ ಶತಕವನ್ನು ದಿವಂಗತ ಪುತ್ರಿಗೆ ಅರ್ಪಿಸುವ ಮೂಲಕ ಮಗಳನ್ನು ನೆನಪಿಸಿಕೊಂಡಿದ್ದರು. ಆಗಸ್ಟ್ 2003 ರಲ್ಲಿ ಕ್ರಿಕೆಟ್‌’ನಿಂದ ನಿವೃತ್ತರಾಗಲು ನಿರ್ಧಾರ ಮಾಡಿದ್ದು, ನಿವೃತ್ತಿಯನ್ನು ಘೋಷಿಸಿಯೇ ಬಿಟ್ಟಿದ್ದರು.

Leave a Reply

Your email address will not be published. Required fields are marked *