ಬಣ್ಣದ ಜಗತ್ತಿನಲ್ಲಿ ಗುರುತಿಸಿಕೊಂಡವರಿಗೆ ಕಷ್ಟಗಳೇ ಇಲ್ಲ.ಯಾವಾಗಲೂ ಸುಖದ ಸುಪ್ಪತ್ತಿಗೆಯಲ್ಲಿ ತೇಲಾಡಿಕೊಂಡು ಇರುತ್ತಾರೆ ಎಂದೇ ಅನೇಕರು ಭಾವಿಸುತ್ತಾರೆ. ಅವರು ಅನುಭವಿಸುವ ನೋವು ಸಂಕಷ್ಟಗಳು ಬೆಳಕಿಗೆ ಬಂದಾಗಲೇ ತಿಳಿಯುತ್ತದೆ. ಹೌದು, ಬಣ್ಣದ ಬದುಕಿನಲ್ಲಿ ಬದುಕು ಕಟ್ಟಿಕೊಂಡವರು ಫ್ಲೋರಾ ಸೈನಿ (ಆಶಾ ಸೈನಿ). ಕೋದಂಡ ರಾಮ, ನಮ್ಮಣ್ಣ ಸೇರಿ ಹಲವು ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದರು.
1999ರಲ್ಲಿ ಬಣ್ಣದ ಲೋಕಕ್ಕೆ ಕಾಲಿಟ್ಟ ಫ್ಲೋರಾ ಸೈನಿ ತೆಲುಗು ಚಿತ್ರರಂಗದಿಂದ ನಟನೆಯ ಆರಂಭಿಸಿದರು. ತೆಲುಗು, ಹಿಂದಿ, ಕನ್ನಡ, ಪಂಜಾಬಿ ಚಿತ್ರಗಳಲ್ಲಿ ಅವರು ನಟಿಸಿದ್ದು, ಫ್ಲೋರಾ ಅವರು ಸಿನಿಮಾರಂಗದಲ್ಲಿ ಬ್ಯುಸಿಯಾಗಿದ್ದಾರೆ. ಆದರೆ ಇದೀಗ ನಟಿ ಫ್ಲೋರಾ ಸೈನಿ ಸುದ್ದಿಯಲ್ಲಿದ್ದಾರೆ. 14 ತಿಂಗಳ ಕಾಲ ಅವರು ನಿರ್ಮಾಪಕ ಗೌರಂಗ್ ಜೊತೆಗೆ ರಿಲೇಶನ್ಶಿಪ್ನಲ್ಲಿದ್ದರು. ಆದರೆ, ಈ ರಿಲೇಶನ್ಶಿಪ್ ಅವರು ಮಾತನಾಡಿದ್ದು, ಸದ್ಯಕ್ಕೆ ಚರ್ಚೆಗೆ ಕಾರಣವಾಗಿದೆ.
ಹೌದು, ಗೌರಂಗ್ ದೋಶಿ ಜೊತೆಗೆ ಫ್ಲೋರಾ 14 ತಿಂಗಳುಗಳ ಕಾಲ ಜೊತೆಗೆ ಇದ್ದರು. ಈ ಮೊದಲು ಇದು ನರಕವಾಗಿತ್ತು ಎಂದು ಆರೋಪ ಮಾಡಿದ್ದರು. ಆದರೆ ಇದೀಗ ಮತ್ತೆ ಆ ಬಗ್ಗೆ ಮಾತನಾಡಿದ್ದು ಹೆಸರನ್ನು ಉಲ್ಲೇಖ ಮಾಡಿಲ್ಲ. ‘ನಾನು ಖ್ಯಾತ ನಿರ್ಮಾಪಕನ ಜತೆ ಪ್ರೀತಿಯಲ್ಲಿದ್ದೆ. ಆರಂಭದಲ್ಲಿ ಎಲ್ಲವೂ ಚೆನ್ನಾಗಿತ್ತು.
ಆದರೆ, ಕೆಲವೇ ದಿನಗಳಲ್ಲಿ ಅದು ನಿಂದನಾತ್ಮಕ ಸಂಬಂಧವಾಗಿ ಬದಲಾಯಿತು. ಆತ ನನ್ನ ಮುಖ ಹಾಗೂ ಖಾಸಗಿ ಭಾಗಕ್ಕೆ ಹೊಡೆಯುತ್ತಿದ್ದ. ನನ್ನ ಮೊಬೈಲ್ ಕಸಿದುಕೊಳ್ಳುತ್ತಿದ್ದ. ನನ್ನನ್ನು ಸಿನಿಮಾ ರಂಗದಿಂದ ದೂರ ಇಡಲು ಪ್ರಯತ್ನಿಸಿದ. 14 ತಿಂಗಳು ನಾನು ಯಾರ ಜತೆಯೂ ಮಾತನಾಡದಂತೆ ನೋಡಿಕೊಂಡ. ಒಂದು ದಿನ ಆತ ನನ್ನ ಹೊಟ್ಟೆಯ ಮೇಲೆ ಹೊಡೆದ. ನಾನು ಓಡಿ ಬಂದೆ.
ಎಲ್ಲದರಿಂದ ಚೇತರಿಸಿಕೊಳ್ಳಲು ಸಾಕಷ್ಟು ಸಮಯ ಬೇಕಾಯಿತು. ಆದರೆ, ನಾನು ಈಗ ಖುಷಿಯಾಗಿದ್ದೇನೆ. ನನಗೆ ಪ್ರೀತಿಯೂ ಸಿಕ್ಕಿದೆ’ ಎಂದು ಹೇಳಿದ್ದಾರೆ. ಈ ಸಂಬಂಧದಿಂದ ತಪ್ಪಿಸಿಕೊಂಡು ಓಡಿ ಬಂದ ಫ್ಲೋರಾ ಪೋಷಕರ ಜೊತೆಗೆ ಇದ್ದರು. ಎಲ್ಲರದರಿಂದ ಚೇತರಿಸಿಕೊಂಡು ಇದೀಗ ಮತ್ತೆ ಸಿನಿಮಾ ಲೋಕದಲ್ಲಿ ಸಕ್ರಿಯರಾಗಿದ್ದಾರೆ.