ಸಿನಿ ಲೋಕ ಬಣ್ಣದ ಲೋಕ ಹೀಗೆ ನಾನಾ ಹೆಸರುಗಳಿಂದ ಕರೆಯುವ ಲೋಕದಲ್ಲಿ ಬದುಕು ಕಟ್ಟಿಕೊಂಡವರು ಹಲವರು. ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟು ಅದೃಷ್ಟ ಪರೀಕ್ಷೆಗೆ ಇಳಿಯುವುದು ಆಸ್ತಿ ಸುಲಭದ ಮಾತಲ್ಲ. ಹೌದು, ಸಿನಿಮಾ ಲೋಕವೆಂದರೆ ಬಣ್ಣಗಳಿಂದ ಕೂಡಿರುತ್ತದೆ ಎಂದೇ ಭಾವಿಸಿರುತ್ತೇವೆ. ಹೀಗಾಗಿಯೇ ಅನೇಕರು ಕನಸು ಕಟ್ಟಿಕೊಂಡು ಬಂದಿರುತ್ತಾರೆ.
ಸ್ಟಾರ್ ನಟರಾಗಿ ಬೆಳೆಯಬೇಕು ಎಂದು ಬಂದವರು ಎಲ್ಲರೂ ಕೂಡ ಯಶಸ್ಸು ಕಾಣುವುದಿಲ್ಲ. ಅದಲ್ಲದೆ, ಅವಕಾಶದ ಜೊತೆಗೂ ಅದೃಷ್ಟ ಕೈ ಹಿಡಿದರೆ ನೇಮ್ ಫೇಮ್ ಎರಡು ಕೂಡ ಬರುತ್ತದೆ. ಆದರೆ ಒಬ್ಬ ಸೆಲೆಬ್ರಿಟಿಯಾದ ಮೇಲೆ ಗಾಸಿಫ್ ಗಳ ಬಾಯಿಗೂ ತುತ್ತಾಗುವುದು ಸಹಜ. ಈ ರಂಗದಲ್ಲೂ ಏಳು ಬೀಳುಗಳಿವೆ. ಕನ್ನಡ ಸಿನಿಮಾರಂಗದತ್ತ ಕಣ್ಣು ಹಾಯಿಸಿದರೆ ಸಾಕಷ್ಟು ನಟ ನಟಿಯರು ನಟನೆಯ ಮೂಲಕ ಅಭಿಮಾನಿಗಳನ್ನು ಸಂಪಾದನೆ ಮಾಡಿಕೊಂಡಿದ್ದಾರೆ.
ಆದರೆ ಇಂದು ಸೆಲೆಬ್ರಿಟಿಗಳಾಗಿರುವ ಅನೇಕ ನಟ ನಟಿಯರ ಆರಂಭದ ಬದುಕು, ಅವರು ಉಂಡ ಕಷ್ಟಗಳ ಬಗ್ಗೆ ಯಾರು ಗಮನ ಹರಿಸುವುದಿಲ್ಲ. ಈ ಲೋಕದಲ್ಲಿ ಕೆಲವು ನಟಿಯರಿಗೆ ಕೆಟ್ಟ ಅನುಭವಗಳಾಗಿವೆ. ಕೆಟ್ಟ ಅನುಭವವನ್ನು ಅನುಭವಿಸಿದ ಪೈಕಿ ನಟಿ ಆಶಾ ಶೈನಿ ಅಲಿಯಾಸ್ ಪ್ಲೋರಾ ಶೈನಿ. ನಟಿ ಆಶಾ ಶೈನಿ ಮತ್ತೆ ಸುದ್ದಿಯಲ್ಲಿ ಇದ್ದಾರೆ. ಫ್ಲೋರಾ ಶೈನಿ 1999ರಲ್ಲಿ ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟರು.
ತೆಲುಗು ಚಿತ್ರರಂಗದಿಂದ ಬಣ್ಣದ ಬದುಕು ಆರಂಭಿಸಿದರು. ಕನ್ನಡ ಸಿನಿಮಾರಂಗದಲ್ಲಿ ನಟಿಸಿದ್ದ ನಟಿ ಆಶಾ ಶೈನಿ ಕೋದಂಡ ರಾಮ, ನಮ್ಮಣ್ಣ ಸಿನಿಮಾದಲ್ಲಿ ನಟಿಸಿದ್ದಾರೆ. ಸುಮಾರು ಹದಿನಾಲ್ಕು ತಿಂಗಳ ಕಾಲ ನಿರ್ಮಾಪಕ ಗೌರಂಗ್ ಜೊತೆಗೆ ಸಂಬಂಧದಲ್ಲಿದ್ದರು. ಇತ್ತೀಚಿಗೆ ಈ ಸಂಬಂಧದ ಬಗ್ಗೆ ಮಾತನಾಡುತ್ತಾ ತನಗಾದ ಕೆಟ್ಟ ಅನುಭವವನ್ನು ಹೇಳಿಕೊಂಡಿದ್ದಾರೆ.
ಈ ಬಗ್ಗೆ ಹೇಳಿಕೊಂಡಿದ್ದ ನಟಿ ಆಶಾ ಶೈನಿ, “ನಾನು ಖ್ಯಾತ ನಿರ್ಮಾಪಕನನ್ನು ಪ್ರೀತಿ ಮಾಡುತ್ತಿದ್ದೆ. ಮೊದಮೊದಲು ಎಲ್ಲವೂ ಸರಿಯಾಗಿತ್ತು ಎಲ್ಲವೂ ಚೆನ್ನಾಗಿಯೇ ಇತ್ತು. ಆದರೆ ಕೆಲವು ದಿನಗಳ ನಂತರ ನಮ್ಮ ಸಂಬಂಧದಲ್ಲಿ ಬದಲಾವಣೆ ಆರಂಭವಾಯಿತು. ನಿಂದನೆ ಶುರುವಾಯಿತು. ಆ ವ್ಯಕ್ತಿ ನನ್ನ ಮುಖ ಹಾಗೂ ಖಾಸಗಿ ಭಾಗಕ್ಕೆ ಗುದ್ದುತ್ತಿದ್ದ.ನನ್ನ ಮೊಬೈಲ್ ಫೋನ್ ಅನ್ನು ಕಸಿದು ತನ್ನ ಬಳಿ ಇಟ್ಟುಕೊಳ್ಳುತ್ತಿದ್ದ.
ನಾನು ಸಿನಿಮಾ ರಂಗದಿಂದ ದೂರ ಇರಬೇಕು ಎಂದು ಟಾಕೀತು ಮಾಡಿದ, ಹೊಡೆಯುತ್ತಿದ್ದ. ಬರೋಬ್ಬರಿ 14 ತಿಂಗಳು ನಾನು ಯಾರ ಜೊತೆಗೂ ಸಂಪರ್ಕದಲ್ಲಿ ಇರದಂತೆ ಮಾಡಿದ. ಒಂದು ದಿನ ಆತ ನನ್ನ ಹೊಟ್ಟೆಯ ಮೇಲೆ ಬ-ಲವಾಗಿ ಹೊ-ಡೆದ. ಆಗ ನಾನು ಹೇಗೋ ತಪ್ಪಿಸಿಕೊಂಡು ಮನೆಯಿಂದ ಓಡಿ ಬಂದೆ. ನಾನು ಸಾಕಷ್ಟು ನೋವನ್ನು ತಿಂದು ಇದೀಗ ಚೇತರಿಸಿಕೊಂಡಿದ್ದೇನೆ ಹಾಗೂ ಸಿನಿಮಾದಲ್ಲಿ ಮತ್ತೆ ಅಭಿನಯಿಸುವುದಕ್ಕೂ ಆರಂಭಿಸಿದ್ದೇನೆ, ಖುಷಿಯಾಗಿದ್ದೇನೆ ಪ್ರೀತಿಯೂ ಕೂಡ ಸಿಕ್ಕಿದೆ” ಎಂದು ತನ್ನ ಜೀವನದಲ್ಲಿ ನಡೆದ ಕಹಿ ಘಟನೆಗಳ ಬಗ್ಗೆ ಬಿಚ್ಚಿಟ್ಟಿದ್ದಾರೆ.