ಪದವಿದರರಿಗೆ ಸಿಹಿ ಸುದ್ದಿ. ತಿಂಗಳಿಗೆ 1500 ನೀಡುವ ಯುವ ಯುವ ನಿಧಿ ಯೋಜನೆ ಜಾರಿಗೆ. ಯಾವಾಗಿನಿಂದ ಸಿಗಲಿದೆ ಗೊತ್ತಾ ಇಲ್ಲಿದೆ ನೋಡಿ ಮಾಹಿತಿ!!!

ರಾಜ್ಯದ ಚುಕ್ಕಾಣಿಗೂ ಹಿಡಿದಿರುವ ಕಾಂಗ್ರೆಸ್ ಸರ್ಕಾರ (Congress Government) ವು ತಮ್ಮ ಅಧಿಕಾರವಧಿಯಲ್ಲಿ ರಾಜ್ಯದ ಜನರಿಗೆ ಪ್ರಯೋಜನವಾಗುವಂತಹ ಕೆಲಸಗಳನ್ನು ಮಾಡುತ್ತಿದೆ. ಕಾಂಗ್ರೆಸ್ ಪಕ್ಷ (Congress Party) ವು ಚುನಾವಣೆಗೂ ಮೊದಲು ಕಾಂಗ್ರೆಸ್​ ನೀಡಿದ್ದ ಐದು ಗ್ಯಾರಂಟಿ ಯೋಜನೆ (Five Gurantee Scheme) ಗಳನ್ನು ಜಾರಿಗೆ ತರುವ ಬಗ್ಗೆ ಭರವಸೆ ನೀಡಿತ್ತು.

ಈಗಾಗಲೇ ಷರತ್ತುಗಳನ್ನು ಒಳಗೊಂಡಂತೆ ಗೃಹಲಕ್ಷ್ಮಿ (Gruhalakshmi), ಗೃಹ ಜ್ಯೋತಿ (Gruhajyothi), ಶಕ್ತಿ ಯೋಜನೆ (Shakti Scheme) ಹಾಗೂ ಅನ್ನ ಭಾಗ್ಯ ಯೋಜನೆ (Annabhagya Scheme)ಗಳನ್ನು ಜಾರಿಗೆ ತಂದಿದೆ. ಅದಲ್ಲದೇ ನಿರುದ್ಯೋಗ ಯುವಕ ಯುವತಿಯರನ್ನು ಗಮನದಲ್ಲಿಟ್ಟುಕೊಂಡು ಯುವನಿಧಿ ಯೋಜನೆಯನ್ನು ಜಾರಿಗೆ ತರಲು ಸಕಲ ಸಿದ್ದತೆಯನ್ನು ಮಾಡಿಕೊಂಡಿದೆ.

ಈ ಯುವ ನಿಧಿ ಯೋಜನೆಯಲ್ಲಿ 2022-23ರಲ್ಲಿ ಪಾಸ್​ ಆದ ಪದವೀಧರ ನಿರುದ್ಯೋಗಿಗಳು (Unemployment) ಹಣವನ್ನು ಪಡೆಯಬಹುದು. ಯುವನಿಧಿ ಯೋಜನೆಯಡಿಯಲ್ಲಿ ಪ್ರತಿ ತಿಂಗಳು 3000 ಸಾವಿರ ರೂಪಾಯಿ ಹಾಗೂ ಡಿಪ್ಲೋಮೋ ಹೊಂದಿದ ನಿರುದ್ಯೋಗಿಗಳಿಗೆ ಪ್ರತಿ ತಿಂಗಳು 1500 ರೂಪಾಯಿಗಳನ್ನು ನಿರುದ್ಯೋಗ ಭತ್ಯೆಯಾಗಿ 24 ತಿಂಗಳು ನೀಡಲಿದೆ.

ಆದರೆ ರಾಜ್ಯದ ಮುಖ್ಯ ಮಂತ್ರಿ ಸಿಎಂ ಸಿದ್ದರಾಮಯ್ಯನವರು ಯುವನಿಧಿ ಯೋಜನೆಯ ಕುರಿತು ಮಹತ್ವದ ಹೇಳಿಕೆಯನ್ನು ನೀಡಿದ್ದಾರೆ. ಮೈಸೂರು ದಸರಾ ಮಹೋತ್ಸವ ಉದ್ಘಾಟನಾ ಸಮಾರಂಭ (Mysore Dasara Mahotsava Inauguration Programme)ದಲ್ಲಿ ಸಿಎಂ ಸಿದ್ದರಾಮಯ್ಯ (Siddharamaiha) ಮಾತನಾಡಿದ್ದು ಯುವ ನಿಧಿ ಯೋಜನೆಯು ಯಾವಾಗ ಆರಂಭವಾಗಲಿದೆ ಎನ್ನುವುದನ್ನು ಘೋಷಿಸಿದ್ದಾರೆ.

ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, “ನಾಡಿನ ಸಂಪತ್ತು, ಅಧಿಕಾರ ಎಲ್ಲರಿಗೂ ಹಂಚಿಕೆಯಾಗಬೇಕು. ಎಲ್ಲರಿಗೂ ಸಮಾನ ಅವಕಾಶಗಳು ಸಿಗಬೇಕು. ಇದನ್ನೇ ಡಾ.ಬಿ.ಆರ್.ಅಂಬೇಡ್ಕರ್ ಹೇಳಿದ್ದರು. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರವು 5 ಗ್ಯಾರಂಟಿಗಳ ಪೈಕಿ ಈಗಾಗಲೇ 4 ಗ್ಯಾರಂಟಿಗಳನ್ನು ಜಾರಿಗೆ ತಂದಿದ್ದು, ಜನವರಿಯಲ್ಲಿ 5 ನೇ ಗ್ಯಾರಂಟಿ ಯುವನಿಧಿ ಯೋಜನೆ (Yuvanidhi Scheme) ಯನ್ನು ಜಾರಿಗೆ ತರಲಾಗುವುದು” ಎಂದಿದ್ದಾರೆ.

Leave a Reply

Your email address will not be published. Required fields are marked *