ಮಗ ಚೆನ್ನಾಗಿ ಇರ್ಲಿ ಅಂತಾ ಬೇಕಾದಷ್ಟು ಆಸ್ತಿ ಮನೆ ಮಾಡಿದ ತಂದೆಗೆ, ಸಣ್ಣ ಕಾರಣಕ್ಕೆ ಮಗ ಏನು ಮಾಡಿಬಿಟ್ಟ ಗೊತ್ತಾ? ಮಕ್ಕಳ ಮೇಲೆ ಅತಿಯಾದ ವ್ಯಾಮೋಹ ಇರೋರು ನೋಡಿ ಒಮ್ಮೆ!!

ಪ್ರತಿಯೊಬ್ಬ ಮಕ್ಕಳು ಕೂಡ ವಯಸ್ಕ ತಂದೆ ತಾಯಿಯರನ್ನು ನೋಡಿಕೊಳ್ಳುವುದು ಕರ್ತವ್ಯ. ಆದರೆ ಇಂದಿನವರಿಗೆ ಉದ್ಯೋಗ ಹಾಗೂ ಒತ್ತಡ ತುಂಬಿದ ಬದುಕಿನ ನಡುವೆ ತಂದೆ ತಾಯಿಯನ್ನು ನೋಡಿಕೊಳ್ಳಲು ಸಮಯವಿಲ್ಲ. ಇನ್ನೊಂದೆಡೆ ವಯಸ್ಸಾದ ತಂದೆ ತಾಯಿ ಮಕ್ಕಳ ಪಾಲಿಗೆ ಕಿರಿಕಿರಿ ಎಂದೇನಿಸಬಹುದು. ಇದೇ ಕಾರಣಕ್ಕೆ ವೃದ್ಧಾಶ್ರಮಗಳ ಸಂಖ್ಯೆಯೂ ಗಣನೀಯವಾಗಿ ಹೆಚ್ಚಾಗುತ್ತಿದೆ.

ಹೌದು ತಂದೆತಾಯಿ ಬೇಡ. ಆದರೆ ಅವರು ಮಾಡಿರುವ ಆಸ್ತಿ ಬೇಕು ಎಂದು ಹೇಳುವ ಮಕ್ಕಳಿರುವುದು ನಿಜಕ್ಕೂ ಬೇಸರವೆನಿಸುತ್ತದೆ. ಕೆಲವು ಮಕ್ಕಳು ಅಸ್ತಿಗಾಗಿ ತಂದೆ ತಾಯಿಯ ಕಥೆ ಮುಗಿಸುವವರು ಇದ್ದಾರೆ. ಆದರೆ ಇಲ್ಲೊಬ್ಬ ಮಗನು ತಂದೆಯ ಕೊ-ಲೆಗೆ ಕೋಟಿ ಕೋಟಿ ರೂಪಾಯಿ ಸುಪಾರಿ ನೀಡಿದ್ದು, ತಂದೆಯ ಕಥೆಯನ್ನೇ ಮುಗಿಸಿದ್ದಾನೆ. ಬೆಂಗಳೂರಿನ ಮಾರತ್ತಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಇಂತಹದೊಂದು ಘಟನೆಯೂ ನಡೆದಿರುವುದು ನಿಜಕ್ಕೂ ವಿಪರ್ಯಾಸವೆನ್ನಬಹುದು.

ಆದರೆ ಈ ಆ-ರೋಪಿ ಮಣಿಕಂಠ ಎಂಬಾತನನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅದಲ್ಲದೇ ಸು-ಪಾರಿ ಪಡೆದು ವ್ಯಕ್ತಿಯನ್ನು ಕೊ-ಲೆ ಮಾಡಿದ್ದ ಇಬ್ಬರು ದು-ಷ್ಕರ್ಮಿಗಳನ್ನು ಪೊಲೀಸರು ತನ್ನ ವಶಕ್ಕೆ ಪಡೆದುಕೊಂಡಿದ್ದಾರೆ. ಮಾರತ್ತಹಳ್ಳಿಯಲ್ಲಿ ನಿವಾಸಿಯಾಗಿದ್ದ ರಿಯಲ್​ ಎಸ್ಟೇಟ್​​ ಉದ್ಯಮಿ ನಾರಾಯಣಸ್ವಾಮಿ ಎಂಬವರನ್ನು ಫೆಬ್ರವರಿ 13 ರಂದು ಅಂದುಕೊಳ್ಳದ ರೀತಿಯಲ್ಲಿ ಕೊ-ಲೆಯಾಗಿದ್ದರು.

ಹೌದು, ಇಂದ್ರಪ್ರಸ್ಥ ಅಪಾರ್ಟ್‌ಮೆಂಟ್ ಬಳಿ ನಾರಾಯಣಸ್ವಾಮಿ ಅವರನ್ನು ಕೊ-ಲೆ ಮಾಡಿದ್ದರು. ಈ ಘಟನೆಯ ಬಳಿಕ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿದ್ದು, ಇಬ್ಬರು ಆರೋಪಿಗಳಾದ ನಡವತ್ತಿ ಶಿವ ಹಾಗೂ ಆದರ್ಶ್​ ಎಂಬವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದರು. ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಶಾಕಿಂಗ್ ವಿಚಾರವು ಹೊರಬಿದ್ದಿತ್ತು. ಹೌದು, ನಾರಾಯಣಸ್ವಾಮಿಯವರ ಜೀವ ತೆಗೆಯಲು ಅವರ ಪುತ್ರ ಮಣಿಕಂಠನೇ ಸುಪಾರಿ ನೀಡಿದ್ದಾಗಿ ಆರೋಪಿಗಳು ತನಿಖೆಯ ವೇಳೆ ಬಾಯಿ ಬಿಟ್ಟಿದ್ದರು.

ಅದಲ್ಲದೆ ತನ್ನ ತಂದೆಯ ಜೀವ ತೆಗೆದರೆ ಆರೋಪಿಗಳಿಗೆ ಒಂದು ಕೋಟಿ ರೂಪಾಯಿ ಹಣ, ಒಂದು ಫ್ಲ್ಯಾಟ್​​ ಹಾಗೂ ಒಂದು ಐಷಾರಾಮಿ ಕಾರು ನೀಡುವುದಾಗಿ ಆರೋಪಿ ಮಣಿಕಂಠ ಹೇಳಿದ್ದಾನೆ ಎನ್ನಲಾಗಿದೆ. ಅಡ್ವಾನ್ಸ್​ ಆಗಿ 15 ಲಕ್ಷ ರೂಪಾಯಿ ಹಣವನ್ನು ನೀಡುವುದಾಗಿ ಹೇಳಿದ್ದನು ಎನ್ನಲಾಗಿದೆ. ಮಾರತ್ತಹಳ್ಳಿ ಪೊಲೀಸರು ಸುಪಾರಿ ನೀಡಿದ ಮಗ ಮಣಿಕಂಠನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಹೌದು ಈ ಬಗ್ಗೆ ಡೀಲ್​ ಪಡೆದ ಆರೋಪಿಗಳು ಫೆಬ್ರವರಿ 13ರಂದು ಇಂದ್ರಪ್ರಸ್ಥ ಅಪಾರ್ಟ್‌ಮೆಂಟ್ ಮಾಲೀಕರಾಗಿದ್ದ ನಾರಾಯಣಸ್ವಾಮಿ ಅವರನ್ನು ಅಲ್ಲಿಯೇ ಕೊ-ಲೆ ಮಾಡಿ ಪರಾರಿಯಾಗಿದ್ದರು. ರಿಯಲ್​ ಎಸ್ಟೇಟ್​ ವ್ಯವಹಾರ ಮಾಡುತ್ತಿದ್ದ ನಾರಾಯಣಸ್ವಾಮಿ ಸಾಕಷ್ಟು ಆಸ್ತಿ ಹೊಂದಿದ್ದರು. ಮಗ ಮಣಿಕಂಠನ ಹೆಸರಲ್ಲಿ ಯಾವುದೇ ಆಸ್ತಿ ಇರಲಿಲ್ಲ. ಅದಲ್ಲದೇ ನಾರಾಯಣಸ್ವಾಮಿ ಅವರು ಅಪಾರ್ಟ್‌ಮೆಂಟ್​​ನಲ್ಲಿ ಫ್ಲ್ಯಾಟ್​​ಗಳನ್ನು ಇಷ್ಟ ಬಂದವರಿಗೆ ಕೊಡುತ್ತಿದ್ದರು. ಇದು ಮಗ ಮಣಿಕಂಠನು ಈ ರೀತಿ ನಿರ್ಧಾರ ಮಾಡಲು ಕಾರಣವಾಯಿತು. ಹೀಗಾಗಿ ತಂದೆಯನ್ನು ಮಗನೇ ಸು-ಪಾರಿ ಕೊಟ್ಟು ಜೀವ ತೆಗೆದಿದ್ದಾನೆ.

ತಂದೆ ಕೊ-ಲೆಯಾಗುತ್ತಿದ್ದಂತೆ, ಪೊಲೀಸ್ ಠಾಣೆಗೆ ಹೋಗಿ ಮಣಿಕಂಠನೇ ಬಗ್ಗೆ ದೂ-ರು ನೀಡಿದ್ದನು. ಕೊನೆಗೆ ತೀವ್ರ ತೆರೆನಾದ ವಿಚಾರಣೆಯನ್ನು ನಡೆಸಿದಾಗ ಕೆಲವು ವಿಚಾರಗಳು ಬೆಳಕಿಗೆ ಬಂದಿತ್ತು. ಆರೋಪಿ ಮಣಿಕಂಠ ಮೊದಲ ಪತ್ನಿಯನ್ನು ಕೊ-ಲೆಗೈದು ಜೈಲು ಸೇರಿದ್ದನು ಎನ್ನಲಾಗಿದೆ. ಜೈಲಿನಿಂದ ಹೊರ ಬಂದ ಬಳಿಕ ಮೊದಲ ಪತ್ನಿಯನ್ನು ಕೊ-ಲೆ ಮಾಡಿದ್ದನ್ನು ಮುಚ್ಚಿಟ್ಟು ಎರಡನೇ ಮದುವೆಯಾಗಿದ್ದನು.

ಎರಡನೇ ಮದುವೆಯ ಬಳಿಕ ಬೇರೊಬ್ಬ ಹೆಣ್ಣಿನ ಸಹವಾಸ ಬೆಳೆಸಿದ್ದನು. ಈ ವಿಚಾರದಿಂದ ಮನೆಯಲ್ಲಿ ಸದಾ ಗಲಾಟೆ ಕೂಡ ನಡೆಯುತ್ತಿತ್ತು. ಗಂಡ ಹೆಂಡಿರ ಜಗಳ ವೇಳೆ ಮಧ್ಯ ಪ್ರವೇಶ ಮಾಡಿದ್ದ ಮಾವ ನಾರಾಯಣಸ್ವಾಮಿ ಅವರು ಮಗನಿಗೆ ವಿಚ್ಛೇದನ ನೀಡದಂತೆ ಹೇಳಿದ್ದರು. ಪತ್ನಿಗೆ ಡಿವೋರ್ಸ್​ ನೀಡಿದರೆ ಸೊಸೆ ಹಾಗೂ ಮೊಮ್ಮಗಳಿಗೆ ಕಷ್ಟ ಎದುರಾಗದಂತೆ ಅವರ ಹೆಸರಿಗೆ ಒಂದು ಫ್ಲ್ಯಾಟ್​ ಬರೆದುಕೊಡುವುದಾಗಿ ಮಗನಿಗೆ ಹೇಳಿದ್ದರು ಎನ್ನಲಾಗಿದೆ.

ಈ ಎಲ್ಲಾ ವಿಚಾರಗಳಿಂದ ಮಣಿಕಂಠ ಕೆರಳಿದ್ದನು. ಈ ಪ್ರಕರಣದ ಸಂಬಂಧ ಮಾಹಿತಿ ನೀಡಿರುವ ವೈಟ್ ಫೀಲ್ಡ್ ಡಿಸಿಪಿ ಗಿರೀಶ್ ಅವರು ಫೆಬ್ರವರಿ 13ರಿಂದ ಇಲ್ಲಿವರೆಗೂ ಪೊಲೀಸರು ಸಾಕ್ಷಿಯನ್ನು ಕಲೆ ಹಾಕುವಲ್ಲಿ ಯಶಸ್ವಿಯಾಗಿದ್ದಾರೆ. ಮಣಿಕಂಠನ ವಿಚಾರಣೆ ವೇಳೆ ಕೊ-ಲೆ ಕೇಸ್ ಹಿಂದಿನ ಸತ್ಯ ಬೆಳಕಿಗೆ ಬಂದಿತ್ತು. ಒಟ್ಟಿನಲ್ಲಿ ತಂದೆಯನ್ನು ಕೊ-ಲ್ಲಲು ಸು-ಪಾರಿ ಕೊಟ್ಟ ಮಗ ಪೊಲೀಸರ ಅತಿಥಿಯಾಗಿದ್ದಾನೆ.

Leave a Reply

Your email address will not be published. Required fields are marked *