ರಾಮಾಯಣದ ಬಗ್ಗೆ ತಪ್ಪು ಮಾಹಿತಿ ನೀಡಿದ್ರಾ ಖ್ಯಾತ ಯೂಟ್ಯೂಬರ್​ ಡಾ. ಬ್ರೋ, ಅಷ್ಟಕ್ಕೂ ವಿಡಿಯೋದಲ್ಲಿ ಏನು ಹೇಳಿದ್ದಾರೆ ಗೊತ್ತಾ?

ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಸಂಖ್ಯೆಯಲ್ಲಿ ಫ್ಯಾನ್ಸ್ ಫಾಲ್ಲೋರ್ಸ್ ಗಳನ್ನು ಹೊಂದಿರುವ ಡಾ. ಬ್ರೋ (Dr. Bro) ಅವರು ಇದೀಗ ಮತ್ತೆ ಪ್ರತ್ಯಕ್ಷವಾಗಿ ಹಲವಾರು ವಿಚಾರಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಯೂಟ್ಯೂಬರ್​ ಡಾ. ಬ್ರೋ ಖ್ಯಾತಿಯ ಗಗನ್​​ ಶ್ರೀನಿವಾಸ್​ (Gagan Shreenivas) ಅವರು ನಮಸ್ಕಾರ ದೇವ್ರು ಎಂದು ಹೇಳುತ್ತಾ ಆಯಾ ಸ್ಥಳದ ಬಗ್ಗೆ ಕನ್ನಡದಲ್ಲಿ ವಿವರಿಸುವುದನ್ನು ನೋಡುವುದೇ ಚಂದ.

ಡಾ.ಬ್ರೋ ​ ಅವರು ಇದೀಗ ಶ್ರೀರಾಮನ ಪುಣ್ಯಭೂಮಿ ಅಯೋಧ್ಯೆ (Ayodhye) ಯಲ್ಲಿ ಕಾಣಿಸಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ರಾಮಾಯಣದ ಬಗ್ಗೆ ವಿವರಣೆಯನ್ನು ನೀಡಿದ್ದಾರೆ. ಅಯೋಧ್ಯೆಯ ಜೊತೆಗೆ ರಾಮಾಯಣಕ್ಕೆ ನಂಟಿರುವ ನೇಪಾಳ (Nepala) ಕ್ಕೂ ಭೇಟಿ ಕೊಟ್ಟು ಹಲವಾರು ವಿಷಯಗಳನ್ನು ಶೇರ್​ ಮಾಡಿಕೊಂಡಿದ್ದಾರೆ. ಪ್ರಾರಂಭದಲ್ಲಿ ಡಾ.ಬ್ರೊ. ಸರಯೂ ನದಿಗೆ ಭೇಟಿ ಕೊಟ್ಟಿದ್ದಾರೆ.

ರಾಮನ ಜನ್ಮಭೂಮಿಯಾದ ಅಯೋಧ್ಯೆ ಉತ್ತರ ಪ್ರದೇಶದ ಸರಯೂ ನದಿಯ ದಂಡೆಯಲ್ಲಿದೆ. ಇಂಥ ಸರಯೂ ನದಿಯ ಪರಿಚಯ ಹಾಗೂ ಅಯೋಧ್ಯೆಯ ಸ್ಥಳಗಳು, ದೇಗುಲಗಳನ್ನು ವಿಡಿಯೋದಲ್ಲಿ ಪರಿಚಯ ಮಾಡಿಸಿದ್ದಾರೆ. ಈ ವೇಳೆಯಲ್ಲಿ ಶ್ರೀರಾಮ-ಸೀತಾಮಾತೆಯ ವಿಗ್ರಹ ಮಾಡಲು ಬಳಸಿಕೊಂಡಿರುವ ಈ ಕಲ್ಲು ನೇಪಾಳದಿಂದ ಸುಮಾರು 1,100 ಕಿಲೋ ಮೀಟರ್​ ದಾಟಿ ಅಯೋಧ್ಯೆಗೆ ಬಂದಿದೆ.

ಅಯೋಧ್ಯೆಯಲ್ಲಿ ನಿರ್ಮಾಣವಾಗಿರುವ ಹಲವಾರು ವಿಗ್ರಹಗಳಿಗೆ ಕರ್ನಾಟಕದ ಕಲ್ಲುಗಳನ್ನೂ ಬಳಸಿಕೊಂಡಿದೆ ಎಂದಿದ್ದಾರೆ. ಆ ಬಳಿಕ ಶ್ರೀ ರಾಮ ಚಂದ್ರನ ಬಗ್ಗೆ ಮಾತನಾಡಿದ್ದು, ಶ್ರೀರಾಮ ಸೂರ್ಯವಂಶಕ್ಕೆ ಸೇರುತ್ತಾರೆ.ಇಕ್ಷ್ವಾಕು ರಾಜವಂಶದ 81ನೇ ಜನರೇಷನ್‌ನಲ್ಲಿ ಜನಿಸ್ತಾರೆ. ಇಕ್ಷ್ವಾಕು ರಾಜವಂಶದ ಸ್ಥಾಪಕ ರಿಷಬ್‌ದೇವು, ಇವರು ಜೈನಿಸಂನ ಮೊದಲ ತೀರ್ಥಂಕರರು. 81ನೇ ಜನರೇಷನ್‌ನಲ್ಲಿ ರಾಮ ಹುಟ್ಟುತ್ತಾರೆ.

ಇದೇ ಇಕ್ಷ್ವಾಕು ರಾಜವಂಶದ 130ನೇ ಜನರೇಷನ್‌ನಲ್ಲಿ ಇನ್ನೊಬ್ಬ ಮಹಾತ್ಮ ಹುಟ್ಟುತ್ತಾರೆ. ಅವರೇ ಗೌತಮ ಬುದ್ಧ. ಏನು ಆಶ್ಚರ್ಯ ಅಲ್ವ. ಜೈನಿಸಂನ ಮೊದಲ ತೀರ್ಥಂಕರರಾದ ರಿಷಬ್‌ ದೇವು ಅವರು, ಶ್ರೀರಾಮ, ಗೌತಮ ಬುದ್ಧ, ಎಲ್ಲರೂ ಸಹ ಒಂದೇ ಇಕ್ಷ್ವಾಕು ವಂಶದಲ್ಲಿ ಜನಿಸುತ್ತಾರೆ” ಎಂದಿದ್ದಾರೆ. ಯೂಟ್ಯೂಬರ್‌ ಡಾ. ಬ್ರೋ ರವರು ಹಂಚಿಕೊಂಡಿರುವ ಈ ವಿಡಿಯೋವು ಲಕ್ಷ ವೀಕ್ಷಣೆ ಕಂಡಿದ್ದು, ರಾಮಾಯಣದ ಬಗ್ಗೆ ನೀಡಿರುವ ಮಾಹಿತಿಗಳು ಚರ್ಚೆಗೆ ಕಾರಣವಾಗಿದೆ. ಡಾ. ಬ್ರೋರವರು ರಾಮನ ಕುರಿತು ತಪ್ಪು ಮಾಹಿತಿ ನೀಡಿದ್ರಾ ಎನ್ನುವ ಪ್ರಶ್ನೆಗಳು ಹುಟ್ಟಿಕೊಂಡಿವೆ. ಈ ವಿಡಿಯೋಗೆ ನಾ ರೀತಿಯ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ.

Leave a Reply

Your email address will not be published. Required fields are marked *