ಕಳೆದ ಎರಡು ತಿಂಗಳಿನಿಂದ ನಾಪತ್ತೆಯಾಗಿರುವ ಬ್ರೋ!! ಪಾಪ ನಿಜಕ್ಕೂ ಏನಾಯಿತು ಎಲ್ಲಿದ್ದಾರೆ ಗೊತ್ತಾ? ಕೊನೆಗೂ ಸಿಕ್ತು ಉತ್ತರ !!

ಸೋಶಿಯಲ್ ಮೀಡಿಯಾದಲ್ಲಿ ಬದುಕು ಕಟ್ಟಿಕೊಂಡು ದೊಡ್ಡ ಸಂಖ್ಯೆಯಲ್ಲಿ ಫ್ಯಾನ್ಸ್ ಬಳಗವನ್ನು ಸೃಷ್ಟಿಸಿಕೊಂಡವರಲ್ಲಿ ಡಾ. ಬ್ರೋ ಗೌಡ (Dr. Bro Gowda) ಕೂಡ ಒಬ್ಬರು. ಇವರ ನಿಜವಾದ ಹೆಸರು ಗಗನ್ ಶ್ರೀನಿವಾಸ್ (Gagan Shreenivas). ಆದರೆ ಎಲ್ಲರಿಗೂ ಕೂಡ ಡಾ. ಬ್ರೋ ಗೌಡ ಆಗಿ ಚಿರಪರಿಚಿತರು. ನಮಸ್ಕಾರ ದೇವ್ರು ಎಂದು ವಿಡಿಯೋ ಶುರು ಮಾಡುತ್ತಾ ದೇಶ ವಿದೇಶಗಳನ್ನು ತೋರಿಸುತ್ತಾ ಕನ್ನಡದಲ್ಲೇ ಮಾತನಾಡುತ್ತಾ ಕನ್ನಡಿಗರಿಗೆ ಹತ್ತಿರವಾಗಿದ್ದಾರೆ.

ಸದಾ ದೇಶ ವಿದೇಶ ಸುತ್ತಾಡುವ ವಿಡಿಯೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳುವ ಡಾ. ಬ್ರೋ ಗೌಡರವರು ಕಳೆದೊಂದು ತಿಂಗಳಿಂದ ನಾ-ಪತ್ತೆಯಾಗಿದ್ದಾರೆ. ಕಳೆದೊಂದು ತಿಂಗಳಿಂದ ಒಂದೇ ಒಂದು ವಿಡಿಯೋ ಹಾಕದೆ, ಎಲ್ಲಿದ್ದಾರೆ ಎಂಬ ಮಾಹಿತಿಯೂ ಇಲ್ಲದೆ ಅವರ ಅಭಿಮಾನಿಗಳು, ನೆಟ್ಟಿಗರು ಆ-ತಂಕಕ್ಕೆ ಒಳಗಾಗಿದ್ದಾರೆ.

ಅವರು ಶೇರ್ ಮಾಡಿಕೊಂಡಿರುವ ಕೊನೆಯ ವಿಡಿಯೋ ಚೀನಾ ಪ್ರವಾಸ (China Trip)ದ್ದು. ಇದಾದ ಬಳಿಕ ಒಂದೂ ವಿಡಿಯೋ ಹಂಚಿಕೊಂಡಿಲ್ಲ. ನೆಟ್ಟಿಗರು ನಾ-ಪತ್ತೆಯಾಗಿದ್ದಾರೆ ಈ ಎಂದರೆ ಇತ್ತ ಮಾಧ್ಯಮದವರು ಕೂಡ ಚೀನಾ ದೇಶದ ವಿಡಿಯೋ ಮಾಡಿ ಡಾ. ಬ್ರೋ ತೊಂದ್ರೇಗೆ ಸಿಲುಕಿದ್ದಾರೆ ಎಂದು ಹೇಳಿದ್ದಾರೆ. ಆದರೆ ಇದೀಗ ಡಾ. ಬ್ರೋ ಬಗ್ಗೆ ಎಲ್ಲಿದ್ದಾರೆ ಎನ್ನುವುದನ್ನು ಹೇಳಿದ್ದಾರೆ.

ಸದ್ಯಕ್ಕೆ ಡಾ.ಬ್ರೋ ಗೌಡರವರ ಕುರಿತಾಗಿ ಸ್ಯಾಂಡಲ್ ವುಡ್ ನಲ್ಲಿ ಸುದ್ದಿಯೊಂದು ಹರಿದಾಡುತ್ತಿದ್ದು, ನಟ ಶೈನ್ ಶೆಟ್ಟಿ (Actor Shine Shetty)ಈ ಕುರಿತ ವಿಚಾರವೊಂದನ್ನ ಹಂಚಿಕೊಂಡಿದ್ದಾರೆ. ತಮ್ಮ ಸೋಶಿಯಲ್ ಮೀಡಿಯಾದಲ್ಲಿ, ಡಾ ಬ್ರೋ ಎಲ್ಲಿಯೂ ಹೋಗಿಲ್ಲ ಇಲ್ಲೆ ಇದ್ದಾರೆ ನೋಡಿ ಅಂತ ಶೈನ್ ಶೆಟ್ಟಿ ಬರೆದುಕೊಂಡಿದ್ದಾರೆ.

ಅಷ್ಟೇ ಅಲ್ಲದೇ, ಇಂದು ಮತ್ತೊಬ್ಬ ಖ್ಯಾತ ಯೂಟ್ಯೂಬರ್‌ ಗ್ಲೋಬಲ್‌ ಕನ್ನಡಿಗ (Global Kannadiga (Actrese Mahabala Ram) ಉತ್ತರ ನೀಡಿದ್ದಾರೆ. ಡಾ.ಬ್ರೋ ಸ್ಟಾರ್ ಅವರು ವಿಶ್ವಕಪ್‌ ಸಮಯದಲ್ಲಿ 2 ತಿಂಗಳ ಕಾಲ ಸ್ಪೋರ್ಟ್ ಕನ್ನಡದಲ್ಲಿ ಕಾಣಿಸಿಕೊಂಡಿದ್ದರು. ಸದ್ಯಕ್ಕೆ ಆರಾಮವಾಗಿ ರೆಸ್ಟ್ ಮಾಡುತ್ತಿದ್ದು, ಮುಂದಿನ ಸೀರಿಸ್‌ ಬಗ್ಗೆ ಪ್ಲಾನ್‌ ಮಾಡುತ್ತಿದ್ದಾರೆ. ಅವರು ಆರಾಮವಾಗಿ ಖುಷಿಯಾಗಿದ್ದಾರೆ ಎಂದಿದ್ದಾರೆ.

ಈ ವಿಚಾರವು ಗೊತ್ತಾಗುತ್ತಿದ್ದಂತೆ ಡಾ.ಬ್ರೋ ಗೌಡರವರ ಫ್ಯಾನ್ಸ್ ಬಳಗದವರು ಕಾಮೆಂಟ್ ಮಾಡುತಿದ್ದಾರೆ. ನೆಟ್ಟಿಗನೊಬ್ಬ ಅಬ್ಬಾ ನಮಸ್ಕಾರ ದೇವ್ರು ಆರಮ್​ ಇದ್ದರೆ ಸಾಕು ನೀವು.. ನಾವು ನಿಮ್ಮ ಮುಂದಿನ ವಿಡಿಯೋಗೆ ಕಾಯುತ್ತಿದ್ದೇವೆ…ಬ್ರೋ ಆದಷ್ಟು ಬೇಗ ದರ್ಶನ ಕೊಡಿ ಎಂದಿದ್ದಾನೆ. ಹೀಗಾಗಿ ಡಾ. ಬ್ರೋ ಗೌಡರವರು ಮತ್ತೆ ಯಾವಾಗ ತಮ್ಮ ಹೊಸ ವಿಡಿಯೋದ ಮೂಲಕ ಅಭಿಮಾನಿಗಳ ಮುಂದೆ ಬರುತ್ತಾರೆ ಎಂದು ಕಾದು ನೋಡಬೇಕು ಅಷ್ಟೇ.

Leave a Reply

Your email address will not be published. Required fields are marked *