26 ಕೋಟಿ ಬೆಲೆಯ ಮನೆಯನ್ನು ಕಟ್ಟಿದ ಖ್ಯಾತ ಯೂಟ್ಯೂಬರ್ ಅಭಿಷೇಕ್​ ಮಲ್ಹಾನ್ ಅವರ ನಿವ್ವಳ ಆದಾಯ ಎಷ್ಟು ಗೊತ್ತಾ? ಕೇಳಿದ್ರೆ ಶಾಕ್ ಆಗ್ತೀರಾ!!

ಇತ್ತೀಚೆಗಿನ ದಿನಗಳಲ್ಲಿ ಸೋಶಿಯಲ್ ಮೀಡಿಯಾ (Social Media) ವನ್ನು ಬಳಸುವವರ ಸಂಖ್ಯೆಯು ಹೆಚ್ಚಾಗಿದೆ. ಹೆಚ್ಚಿನವರು ಸೋಶಿಯಲ್ ಮೀಡಿಯಾವನ್ನೇ ಆದಾಕ್ಕಾಗಿ ಅವಲಂಬಿಸಿಕೊಂಡಿದ್ದಾರೆ. ಹೆಚ್ಚಿನವರು ತಮ್ಮದೇ ಯೂಟ್ಯೂಬ್ ಚಾನೆಲ್ (Youtube Chanel) ಗಳನ್ನು ಹೊಂದಿದ್ದು, ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕುತ್ತಾ, ಹೊಸ ಹೊಸ ವಿಚಾರಗಳನ್ನು ಅಥವಾ ತಮ್ಮ ಬದುಕಿನ ವಿಚಾರಗಳನ್ನು ಫ್ಯಾನ್ಸ್ ಫಾಲ್ಲೋರ್ಸ್ ಗಳಿಗೆ ತಿಳಿಸುವ ಪ್ರಯತ್ನ ಮಾಡುತ್ತಾರೆ.

ಕೋಟಿಗಟ್ಟಲೇ ಆದಾಯ ಗಳಿಸುವ ಯೂಟ್ಯೂಬರ್ ಗಳಲ್ಲಿ ಅಭಿಷೇಕ್​ ಮಲ್ಹಾನ್​ (Abhishek Malhan) ಕೂಡ ಒಬ್ಬರಾಗಿದ್ದಾರೆ. ಹೌದು, ಯೂಟ್ಯೂಬ್​ನಲ್ಲಿ ಫುಕ್ರಾ ಇನ್ಸಾನ್​ ಎಂದೇ ಪ್ರಖ್ಯಾತಿಯಾಗಿರುವ ಮಲ್ಹಾನ್​​, ತಮ್ಮ ಆದಾಯದ ಬಗ್ಗೆ ಮಾತನಾಡಿದ್ದು, ಫ್ಯಾನ್ಸ್ ಗಳಿಗೆ ಶಾಕ್ ನೀಡಿದ್ದಾರೆ. ಮಲ್ಹಾನ್​ ಅವರು ತಮ್ಮ YouTube ನಲ್ಲಿ 9.3 ಮಿಲಿಯನ್ ಚಂದಾದಾರರನ್ನು ಹೊಂದಿದ್ದು ತಮ್ಮ ಯೂಟ್ಯೂಬ್ ಚಾನೆಲ್ ನಲ್ಲಿ ವಿಶೇಷ ಕಂಟೆಂಟ್ ಗಳನ್ನು ಹಾಕುವ ಮೂಲಕ ಅಭಿಮಾನಿಗಳನ್ನು ಖುಷಿಪಡಿಸುತ್ತಿರುತ್ತಾರೆ.

ಆದರೆ ಇದೀಗ ಎನ್​ಡಿಟಿವಿ (NDTV)ಯೊಂದಿಗೆ ಮಾತನಾಡಿರುವ ಆದಾಯ ಸೇರಿದಂತೆ ಇನ್ನಿತರ ಪ್ರಶ್ನೆಗಳಿಗೆ ಉತ್ತರ ನೀಡಿದ್ದಾರೆ. ಎನ್​ಡಿಟಿವಿಯ ಸಂದರ್ಶನವೊಂದರಲ್ಲಿ ಮಾತನಾಡಿದ್ದು, ತಮ್ಮ ಆದಾಯ (Income) ದ ಕುರಿತು ರಿವೀಲ್ ಮಾಡಿದ್ದು, ಮಲ್ಹಾನ್​, 25 ಕೋಟಿ ರೂ. ಮೌಲ್ಯದ ಮನೆಯನ್ನು ಹೊಂದಿರುವುದಾಗಿ ತಿಳಿಸಿದ್ದಾರೆ. ಹೌದು, ಸಂದರ್ಶನವೊಂದರಲ್ಲಿ ತಿಂಗಳ ಆದಾಯ ಎಷ್ಟು ಎಂದು ಪ್ರಶ್ನಿಸಿದಾಗ, ‘ಅದನ್ನು ಬಹಿರಂಗಪಡಿಸಲು ಇಷ್ಟಪಡುವುದಿಲ್ಲ, ನನ್ನ ತಂದೆ ನನ್ನನ್ನು ಕೊಂದು ಬಿಡುತ್ತಾರೆ’ ಎಂದಿದ್ದಾರೆ.

ನಿವ್ವಳ ಆದಾಯದ ಬಗ್ಗೆ ಮತ್ತೆ ಮತ್ತೆ ಕೇಳಿದಾಗ, ‘ನನಗೆ ಏನು ಹೇಳಬೇಕು ಗೊತ್ತಾಗುತ್ತಿಲ್ಲ. ನಾನು ನನ್ನ ನಿವ್ವಳ ಆದಾಯದ ಬಗ್ಗೆ ಲೆಕ್ಕ ಹಾಕಿಲ್ಲ. ನಾನು ಒಮ್ಮೆ ಸಂದರ್ಶನವೊಂದರಲ್ಲಿ ಆದಾಯವನ್ನು ಬಹಿರಂಗಪಡಿಸಿದ್ದೆ. ಅದಕ್ಕೆ ಹೋಲಿಕೆ ಮಾಡಿದರೆ ಇಂದು ಮೂರು ಪಟ್ಟು ಇದೆ’ ಎಂದಿದ್ದಾರೆ. ಇದೇ ವೇಳೆಯಲ್ಲಿ ರ್ಯಾಪಿಡ್​ ಫೈರ್​ನಲ್ಲಿ ಕೆಲವೊಂದು ಪ್ರಶ್ನೆಗಳಿಗೆ ಉತ್ತರಿಸಿದ್ದು ತಮ್ಮ ಬಳಿ ಜಾಗ್ವಾರ್​ ಎಫ್​-ಪೇಸ್​ ಮತ್ತು 25 ಕೋಟಿ ರೂ. ಮೌಲ್ಯದ ಒಂದು ಮನೆ ಇರುವುದಾಗಿ ಹೇಳಿಕೊಂಡಿದ್ದಾರೆ.

Leave a Reply

Your email address will not be published. Required fields are marked *