ಖ್ಯಾತ ಗಾಯಕ ವಿಜಯ್ ಪ್ರಕಾಶ್ ಅವರ ಸುಂದರ ಕುಟುಂಬ ಹೇಗಿದೆ ಗೊತ್ತಾ? ಇಲ್ಲಿದೆ ಅಪರೂಪದ ಫೋಟೋ

ಕರ್ನಾಟಕದ ಖ್ಯಾತ ಗಾಯಕ, ಸಾವಿರಾರು ಹಾಡುಗಳಿಗೆ ಕಂಠದಾನ ಮಾಡಿರುವ ಗಾಯಕ ಈ ವಿಜಯ್ ಪ್ರಕಾಶ್ (Vijay Prakash) ಯಾರಿಗೆ ತಾನೇ ಗೊತ್ತಿಲ್ಲ ಹೇಳಿ?. ಕನ್ನಡ ಮಾತ್ರವಲ್ಲದೇ ತಮಿಳು, ತೆಲುಗು, ಹಿಂದಿ, ಮರಾಠಿ ಸೇರಿದಂತೆ ಅನೇಕ ಭಾಷೆಯ ಹಾಡುಗಳಿಗೆ ಧ್ವನಿ ನೀಡಿದ್ದಾರೆ. ಖ್ಯಾತ ಗಾಯಕ ವಿಜಯ್ ಪ್ರಕಾಶ್‌ ಕಿರುತೆರೆ ಹಾಗೂ ಬೆಳ್ಳಿತೆರೆಯಲ್ಲಿ ಬ್ಯುಸಿಯಾಗಿದ್ದಾರೆ. ಕಿರುತೆರೆಯಲ್ಲಿ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಸರಿಗಮಪ ಲಿಟಲ್ ಚಾಂಪ್ಸ್ ಸೀಸನ್ 19 (SARIGAMAPA Little Champs Sisan 19) ಶೋನಲ್ಲಿ ತೀರ್ಪುಗಾರರಾಗಿ ವಿಜಯ್ ಪ್ರಕಾಶ್ ಕಾಣಿಸಿಕೊಂಡಿದ್ದರು.

ಹೀಗೆ ದೊಡ್ಡ ಸಂಖ್ಯೆಯಲ್ಲಿ ಅಭಿಮಾನಿ ಬಳಗವನ್ನು ಸಂಪಾದನೆ ಮಾಡಿಕೊಂಡಿರುವ ವಿಜಯ್ ಪ್ರಕಾಶ್ ಕಂಠಕ್ಕೆ ಎಲ್ಲರೂ ಫಿದಾ ಆಗುವವವರೇ. ಇದೀಗ ಖ್ಯಾತ ಗಾಯಕ ವಿಜಯ್ ಪ್ರಕಾಶ್ ಅವರು ಫ್ಯಾಮಿಲಿ ಫೋಟೋ (Family Photo) ವೊಂದು ವೈರಲ್ ಆಗಿವೆ. ಖ್ಯಾತ ಗಾಯಕ ವಿಜಯ್ ಪ್ರಕಾಶ್ ಅವರ ತನ್ನ ಮುದ್ದಿನ ಮಡದಿ ಹಾಗೂ ಇಬ್ಬರೂ ಮಕ್ಕಳ ಜೊತೆಗೆ ಸಮುದ್ರ ತೀರದಲ್ಲಿ ಕ್ಯಾಮೆರಾಗೆ ಪೋಸ್ ನೀಡಿದ್ದಾರೆ. ಈ ಫೋಟೋಗಳು ವೈರಲ್ ಆಗಿದ್ದು ಆರುನೂರಕ್ಕೂ ಅಧಿಕ ಲೈಕ್ಸ್ ಗಳು ಬಂದಿವೆ.

ಖ್ಯಾತ ಗಾಯಕ ವಿಜಯ್ ಪ್ರಕಾಶ್ ಅವರು ಮೈಸೂರಿ (Mysore) ನಲ್ಲಿ ಹುಟ್ಟಿ ಬೆಳೆದವರು. ಚಿಕ್ಕ ವಯಸ್ಸಿನಿಂದಲೇ ಸಂಗೀತದ ಬಗ್ಗೆ ಅಪಾರ ಒಲವನ್ನು ಹೊಂದಿದ್ದ ವಿಜಯ್ ಪ್ರಕಾಶ್ ಅವರ ಸ್ನೇಹಿತರೊಬ್ಬರು ಲಂಡನ್ ಗೆ ತೆರಳಿದ್ದರು. ಅಲ್ಲಿಂದ ವಾಪಸ್ಸು ಬರುವಾಗ ವೆಸ್ಟ್ರನ್ ಇನ್ ಸ್ಟ್ರು ಮೆಂಟ್ ತೆಗೆದುಕೊಂಡು ಬಂದಿದ್ದನ್ನು ನೋಡಿದ್ದರು.

ಆದಾಗಲೇ ಅವರಿಗೆ ಸಂಗೀತದ ಮೇಲೆ ಅಪಾರ ಆಸಕ್ತಿಯಿತ್ತು. ಹೀಗಾಗಿ ಇಂಜಿನಿಯರಿಂಗ್ ಪದವಿ ಸೇರಿಕೊಂಡಿದ್ದ ವಿಜಯ್ ಪ್ರಕಾಶ್ ಅವರಿಗೆ ಓದಿನ ಮೇಲೆ ಹೇಳಿಕೊಳ್ಳುವಷ್ಟು ಆಸಕ್ತಿ ಇರಲಿಲ್ಲ. ಏನಾದರೂ ಸಾಧನೆ ಮಾಡಬೇಕು ಎಂದುಕೊಂಡು ತಂದೆ ತಾಯಿಗೂ ಹೇಳದೇ ಕೈ ನಲ್ಲಿ 700 ರೂಪಾಯಿ ಇಟ್ಟುಕೊಂಡು ಮನೆ ಬಿಟ್ಟು ಹೊರಟರು. ಈ ಹಿಂದೆ ವೀಕೆಂಡ್ ವಿತ್ ರಮೇಶ್ (Weekend With Ramesh)ಕಾರ್ಯಕ್ರಮದಲ್ಲಿ ವಿಜಯ್ ಪ್ರಕಾಶ್ ಅವರು ರಿವೀಲ್ ಮಾಡಿದ್ದರು.

“ಮೊದಲು ನಾನು ಮುಂಬೈಗೆ ಹೋದಾಗ ಆನಂದ್ ಮಿಲಿಂದ್ ಅಂತ ಮ್ಯೂಸಿಕ್ ಡೈರೆಕ್ಟರ್ ರವರ ಮನೆ ಗೊತ್ತಾಯ್ತು. ಅಲ್ಲಿ ಹೋದಾಗ ಅವರು ಸುರೇಶ್ ವಾಡ್ಕರ್ ಹತ್ರ ಕಳುಹಿಸಿದ್ರು. ಅವರ ಹತ್ರ ಹೋಗಿ ಹಾಡಿದ್ಮೇಲೆ ನನ್ನ ವಾಯ್ಸ್ ಇಷ್ಟ ಪಟ್ಟರು. ನಂತರ ರಾಧಾ ಕೃಷ್ಣ ದೇವಸ್ಥಾನದಲ್ಲಿ ಉಳಿದುಕೊಳ್ಳುವುದಕ್ಕೆ ವ್ಯವಸ್ಥೆ ಮಾಡಿದ್ರು. ಇದ್ದ ಒಂದು ಬಟ್ಟೆಯನ್ನ ಸಮುದ್ರದ ನೀರಲ್ಲಿ ಒಗೆದು ಒಣಗಿಸಿ ಹಾಕೊಳ್ತಿದ್ದೆ. ತಿನ್ನೋಕೆ ದುಡ್ಡು ಇರ್ಲಿಲ್ಲ. ನಾನು ಇದ್ದ ಸ್ಥಿತಿ ನೋಡಿ ಅವರು ನನಗೆ 100 ರೂಪಾಯಿ ಕೊಟ್ಟು ಊಟ ಮಾಡಿ ಬಾ ಅಂತ ಹೇಳಿದ್ರು” ಎಂದು ಹೇಳಿದ್ದರು.

ಸುರೇಶ್ ವಾಡ್ಕರ್ (Suresh Vadkar) ಅವರ ಗೆಳೆಯನ ಮುಖಾಂತರ ಜಾಹಿರಾತುಗಳಿಗೆ ಧ್ವನಿ ನೀಡಲು ವರ್ಡ್ಸ ಅಂಡ್ ವಾಯ್ಸಸ್ ಕಂಪನಿಗೆ ಸೇರಿದರು. ವಿಜಯ್ ಪ್ರಕಾಶ್ ಕೆಲ್ಲಾಗ್ಸ್ ಆಡ್‌ಗೆ ಮೊದಲು ವಾಯ್ಸ್ ನೀಡಿದ್ದರು. ಚೀನಿ ಕಮ್ ಸಿನಿಮಾ ಮೂಲಕ ಹಿನ್ನಲೆ ಗಾಯಕರಾಗಿ ಪಾದಾರ್ಪಣೆ ಮಾಡಿದರು.

ಅಮಿತಾಬ್ ಬಚ್ಚನ್ (Amithabh Bacchan) ಅವರಿಗೆ ಧ್ವನಿಯಾಗುವ ಮೂಲಕ ಗಾಯನ ವೃತ್ತಿ ಪ್ರಾರಂಭಿಸಿದ್ದು ಮತ್ತೆ ಹಿಂದೆ ತಿರುಗಿ ನೋಡಿದ್ದೆ ಇಲ್ಲ. ಆ ಬಳಿಕ ಎ.ಆರ್ ರೆಹಮಾನ್ (A.R Reheman) ಅವರ ಸಂಗೀತ ನಿರ್ದೇಶನದ ಹಾಡಿಗೆ ಧ್ವನಿ ನೀಡಿದ್ದರು. ಶಾರುಖ್ ಖಾನ್ ನಟನೆಯ ಸ್ವದೇಶ್ ಚಿತ್ರದ ಹಾಡನ್ನು ಹಾಡಿದ್ದರು. ಈಗಾಗಲೇ ಸಿನಿ ಲೋಕದಲ್ಲಿ ಬೇಡಿಕೆಯ ಗಾಯಕರಾಗಿ ಬ್ಯುಸಿಯಾಗಿದ್ದಾರೆ.

Leave a Reply

Your email address will not be published. Required fields are marked *