ಅಂಗಿ ಬಿಚ್ಚಿ ನೆಕ್ಲೇಸ್ ಹಾಕಿ ಕೊಂಡು ಹೊಸ ಟ್ರೆಂಡ್ಖ್ಯಾ ಶುರು ಮಾಡಿದ ತ ಗಾಯಕ ಸಂಜಿತ್ ಹೆಗ್ಡೆ, ಗಾಯನದ ಹೊಸ ಅವತಾರಕ್ಕೆ ಫ್ಯಾನ್ಸ್ ಫಿದಾ

ಸಿನಿಮಾರಂಗದಲ್ಲಿ ನಟ ನಟಿಯರಷ್ಟೇ ಬೇಡಿಕೆ ಬೇಡಿಕೆ ನಿರ್ಮಾಪಕ, ನಿರ್ದೇಶಕ, ಸಂಗೀತ ನಿರ್ದೇಶಕ, ಗಾಯಕ ಹಾಗೂ ತಂತ್ರಜ್ಞರಿಗಿದೆ. ಸಂಗೀತ ಲೋಕದಲ್ಲಿ ತಮ್ಮ ಗಾಯನದ ಮೂಲಕವೇ ಅಭಿಮಾನಿ ಬಳಗವನ್ನು ಸೃಷ್ಟಿಸಿಕೊಂಡವರು ಸಂಜಿತ್ ಹೆಗ್ಡೆ (Sanjit Hegde). ಸಂಜಿತ್ ಹೆಗಡೆಯವರು ಸಾಕಷ್ಟು ಹಾಡುಗಳಿಗೆ ಧ್ವನಿಯಾಗಿದ್ದಾರೆ. ಮರೆತು ಹೋಯಿತೇ ನನ್ನಯ ಹಾಜರಿ ಸಂಜಿತ್ ಹೆಗ್ಡೆರವರ ಕಂಠ ಸಿರಿಯಲ್ಲಿ ಮೂಡಿ ಬಂದಿತ್ತು. ಆದರೆ ಇದೀಗ ಖ್ಯಾತ ಗಾಯಕ ಸಂಜಿತ್ ಹೆಗ್ಡೆ ಮತ್ತೆ ಸುದ್ದಿಯಲ್ಲಿದ್ದಾರೆ.

ಇತ್ತೀಚಿಗೆ ಸಂಜಿತ್ ಹೆಗ್ಡೆ ಕಂಠಸಿರಿಯಲ್ಲಿ ಮೂಡಿ ಬಂದ ‘ಗೀಜಗ ಹಕ್ಕಿ’ (Gijaga Hakki Song) ಹಾಡು ಸೂಪರ್ ಹಿಟ್ ಆಗಿದೆ. ಸಂಜಿತ್ ಹೆಗ್ಡೆ ಸ್ಟೈಲ್ ಎಲ್ಲರ ಗಮನ ಸೆಳೆಯುತ್ತಿವೆ. ಸಂಜಿತ್ ಹೆಗ್ಡೆಯವರ ಕತ್ತಿನಲ್ಲಿರುವ ನೆಕ್ಲೇಸ್ (Necklece) ನಿಂದಾಗಿ ಸುದ್ದಿಯಲ್ಲಿದ್ದಾರೆ. ಸಂಜಿತ್ ಹೆಗ್ಡೆ ಗೋಲ್ಡನ್ ಪ್ಯಾಚ್ ವರ್ಕ್‌ ಪ್ಯಾಂಟ್, ಕೋಟ್ ಸ್ಟೈಲ್ ಶರ್ಟ್ ಧರಿಸಿ ಸಂಜಿತ್ ಮಿಂಚಿದ್ದಾರೆ. ವೀಂಜೇಜ್ ಕ್ರಿಸ್ಟಲ್ ಫಿಂಝ್ ನೆಕ್ಲೇಸ್ ಧರಿಸಿ ಹೊಸ ಲುಕ್ ನಲ್ಲಿ ಸಂಜಿತ್ ಕಾಣಿಸಿಕೊಂಡಿದ್ದಾರೆ. ಸಂಜಿತ್ ಹೆಗ್ಡೆಯವರ ಈ ಲುಕ್ ಯುವಕ ಯುವತಿಯರ ಗಮನ ಸೆಳೆಯುತ್ತಿದೆ.

ಕನ್ನಡ ಸಿನಿಮಾರಂಗದಲ್ಲಿ ಬಹುಬೇಡಿಕೆಯ ಗಾಯಕರಾಗಿ ಗುರುತಿಸಿ ಕೊಂಡಿರುವ ಸಂಚಿತ್ ಹೆಗ್ಡೆಯವರು ಝೀ ಕನ್ನಡ (Zee Kannada) ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಸರಿಗಮಪ ಸೀಜನ್ ಹದಿಮೂರರಲ್ಲಿ ಸ್ಪರ್ಧಿ ಕಂಟೆಸ್ಟ್ಂಟ್ ಆಗಿ ಬಂದಿದ್ದರು. ವೇದಿಕೆಯ ಮೇಲೆ ಸಂಚಿತ್ ಹೆಗ್ಡೆ ಮೊದಲ ಗಾಯನದಿಂದಲೇ ತೀರ್ಪುಗಾರರಿಂದ ಶಭಾಷ್ ಗಿರಿ ಗಿಟ್ಟಿಸಿಕೊಂಡರು. ಅದಲ್ಲದೆ, ಗಾಯಕ ವಿಜಯ್ ಪ್ರಕಾಶ್ (Vijay Prakash) ಅವರು ಕೂಡ ಸಂಚಿತ್ ಹೆಗ್ಡೆ ಅವರ ಜೊತೆ ತಮ್ಮ ಧ್ವನಿಯನ್ನು ಸೇರಿಸಿ ವೇದಿಕೆಯ ಮೇಲೆ ಹಾಡಿದ್ದರು.

ಖ್ಯಾತ ಗಾಯಕ ಸಂಚಿತ್ ಹೆಗ್ಡೆ ಕನ್ನಡ ಅಷ್ಟೇ ಅಲ್ಲದೆ ತೆಲುಗು ತಮಿಳು ಹಾಗೂ ಹಿಂದಿ ಚಿತ್ರಗಳಲ್ಲಿ ಧ್ವನಿ ನೀಡಿದ್ದಾರೆ. 2018 ರಲ್ಲಿ ತೆರೆಕಂಡ ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಚಮಕ್ (Chamak) ಚಿತ್ರದಲ್ಲಿ ಮೂಡಿ ಬಂದ ” ಕುಷ್ ,ಕುಶ್ ” ಹಾಡಿಗಾಗಿ ಅತ್ಯುತ್ತಮ ಹಿನ್ನೆಲೆ ಗಾಯಕನೆಂದು ಸೈಮಾ ಪ್ರಶಸ್ತಿ ಪಡೆದಿದ್ದಾರೆ. 2019 ರಲ್ಲಿ ಅತ್ಯುತ್ತಮ ಮುಂಬರುವ ಪುರುಷ ಗಾಯಕ ಎಂದು ಗಾನಾ ಮಿರ್ಚಿ ಸಂಗೀತ ಪ್ರಶಸ್ತಿ ಕೂಡ ಪಡೆದಿದ್ದಾರೆ. ಖ್ಯಾತ ಗಾಯಕ ಸಂಜಿತ್ ಹೆಗ್ಡೆಯವರು ಕನ್ನಡ ಸೇರಿದಂತೆ ಪರಭಾಷೆಯಲ್ಲಿ ಬ್ಯುಸಿಯಾಗಿದ್ದಾರೆ.

Leave a Reply

Your email address will not be published. Required fields are marked *