ಸರ್ಜರಿ ಮಾಡಿಸಿಕೊಂಡು ತಂದೆಯಾಗುತ್ತೆನೆ ಎಂದು ಕರಣ್ ಜೋಹರ್ ತಾಯಿ ಬಳಿ ಹೇಳಿದಾಗ ತಾಯಿ ಏನು ಹೇಳಿದರು ಗೊತ್ತಾ !

ಬಾಲಿವುಡ್ (Bollywood) ನಿರ್ಮಾಪಕ ಕರಣ್ ಜೋಹರ್ (Karan Johar) ಅವರು ಒಂದಲ್ಲ ಒಂದು ವಿಚಾರದಿಂದ ಸುದ್ದಿಯಲ್ಲಿರುತ್ತಾರೆ. ಕಾಫಿ ವಿಥ್ ಕರಣ್ ಜೋಹರ್ (Coffee with karan Johar) ಶೋ ಮೂಲಕ ಜನಪ್ರಿಯತೆಯನ್ನು ಗಳಿಸಿಕೊಂಡಿರುವ ನಟ ಕರಣ್ ಜೋಹರ್ ತಮ್ಮ ವೈಯುಕ್ತಿಕ ಜೀವನದ ಕುರಿತು ಮಾತನಾಡಿದ್ದಾರೆ. ತಾವು ಬಾಡಿಗೆ ತಾಯ್ತತನದ ಮೂಲಕ ತಂದೆಯಾಗಲು ಬಯಸಿದಾಗ ತಾಯಿಯ ಪ್ರತಿಕ್ರಿಯೆ ಹೇಗಿತ್ತು ಎನ್ನುವುದನ್ನು ರಿವೀಲ್ ಮಾಡಿದ್ದಾರೆ.

44ರ ಹರೆಯದ ಕರಣ್‌ ತನ್ನ ಆತ್ಮಕಥೆ ‘ಅನ್‌ಸುಟೆಬಲ್‌ ಬಾಯ್‌’ (Insuitable boy) ನಲ್ಲಿ ಬಾಡಿಗೆ ತಾಯಿ ಮೂಲಕ ಇಲ್ಲವೇ ದತ್ತು ಪ್ರಕ್ರಿಯೆ ಮೂಲಕ ಮಗುವನ್ನು ಪಡೆಯುವ ಬಗ್ಗೆ ಉಲ್ಲೇಖ ಮಾಡಿದ್ದರು. 2017 ರಲ್ಲಿ ಆ ಕನಸನ್ನು ನನಸು ಮಾಡಿದ್ದರು. ಬಾಡಿಗೆ ತಾಯ್ತನದ ಮೂಲಕ ಪಡೆದಿರುವ ಈ ಎರಡು ಮಕ್ಕಳಿಗೆ ರೂಹಿ (Ruhi) ಮತ್ತು ಯಶ್‌ (Yash) ಎಂದು ಹೆಸರಿಟ್ಟಿದ್ದರು.

ಈ ಬಗ್ಗೆ ಸಂತಸ ಹೊರ ಹಾಕಿದ್ದ ಕರಣ್ ಜೋಹರ್, ‘ವೈದ್ಯಕೀಯ ವಿಸ್ಮಯದ ಸಹಾಯದಿಂದ ಈ ಜಗತ್ತಿಗೆ ಸ್ವಾಗತಿಸಲ್ಪಟ್ಟ ನನ್ನ ಹೃದಯದ ಎರಡು ತುಣುಕುಗಳಿಗೆ ತಂದೆಯಾಗುವುದು ನನ್ನ ಮಹಾ ಭಾಗ್ಯ ಎಂದು ಭಾವಿಸಿದ್ದೇನೆ’ ಎಂದಿದ್ದರು. ಒಂಬತ್ತು ತಿಂಗಳ ಕಾಲ ಮಕ್ಕಳನ್ನು ಗರ್ಭದಲ್ಲಿಟ್ಟು ಬೆಳೆಸಿದ ಬಾಡಿಗೆ ತಾಯಿಗೂ ಕರಣ್‌ ಕೃತಜ್ಞತೆಯನ್ನು ತಿಳಿಸಿದ್ದರು.

ಇತ್ತೀಚೆಗೆ ದಿ ವೀಕ್‌ (The Week) ಗೆ ನೀಡಿದ ಸಂದರ್ಶನದಲ್ಲಿ ಕರಣ್ ಜೋಹರ್ 10 ವರ್ಷಗಳ ಹಿಂದಿನ ಘಟನೆಯ ಬಗ್ಗೆ ಮಾತನಾಡಿದ್ದಾರೆ. ಕರಣ್ ತಾಯಿ ಹಿರೂ ಜೋಹರ್ (Hiroo Johar) ಅವರು ನನ್ನ ಭವಿಷ್ಯದ ಯೋಜನೆಗಳ ಬಗ್ಗೆ ಕೇಳಿದ್ದರಂತೆ. ಆ ಸಮಯದಲ್ಲಿ ಮದುವೆಯಾಗಲು ಸಿದ್ಧರಿಲ್ಲದ ಕರಣ್ ತನ್ನ ತಾಯಿಗೆ ತಾನು ತಂದೆಯಾಗಲು ಬಯಸುತ್ತೇನೆ.

ಬಾಡಿಗೆ ತಾಯ್ತನದ ಮೂಲಕ ಮಕ್ಕಳನ್ನು ಹೊಂದಲು ಯೋಜಿಸುತ್ತಿದ್ದೇನೆ ಎಂದು ಹೇಳಿದ್ದರಂತೆ ಕರಣ್. ಹೀಗೆನ್ನುತ್ತಿದ್ದಂತೆ ಕರಣ್ ಅವರ ತಾಯಿಯು ಸಂತಸದಿಂದ ಕುಣಿದಾಡಿದ್ದರಂತೆ. ಈ ಬಗ್ಗೆ ಕರಣ್ರಿ ಜೋಹರ್ ರಿವೀಲ್ ಮಾಡಿದ್ದಾರೆ. ತನ್ನ ತಾಯಿ ಹಾಗೂ ಇಬ್ಬರೂ ಮಕ್ಕಳ ಜೊತೆಗೆ ಕರಣ್ ಜೋಹರ್ ಅವರು ಸುಖವಾಗಿ ಬದುಕುತ್ತಿದ್ದಾರೆ.

Leave a Reply

Your email address will not be published. Required fields are marked *