ಕನ್ನಡದ ಖ್ಯಾತ ನಿರ್ದೇಶಕ ಮಂಸೋರೆ ವೈವಾಹಿಕ ಜೀವನದಲ್ಲಿ ಬಿರುಕು , ಅಷ್ಟಕ್ಕೂ ಆಗಿದ್ದೇನು.. ಗಂಡ ಹೆಂಡತಿ ನಡುವೆ ಮಹಾ ಯುದ್ಧ ?

ಸೆಲೆಬ್ರಿಟಿಗಳ ಜೀವನದಲ್ಲಿ ಒಂದಲ್ಲ ಒಂದು ಬಿ-ರುಕುಗಳು ಕಾಣಿಸಿಕೊಳ್ಳುತ್ತಲೇ ಇರುತ್ತದೆ. ಈಗಾಗಲೇ ಸಣ್ಣ ಪುಟ್ಟ ಬಿರುಕುಗಳು ಮೂಡಿ ವೈವಾಹಿಕ ಜೀವನದಲ್ಲಿ ಬೆರ್ಪಟ್ಟ ಅದೆಷ್ಟೋ ಜೋಡಿಗಳು ಸ್ಯಾಂಡಲ್ ವುಡ್ ಸೇರಿದಂತೆ ಪರಭಾಷೆಯ ಸಿನಿಮಾರಂಗದಲ್ಲಿದ್ದಾರೆ. ಇದೀಗ ಚಂದನವನದ ನಿರ್ದೇಶಕ ಮಂಸೋರೆ ಅವರ ಜೀವನದಲ್ಲಿಯೂ ಬಿ-ರುಕು ಮೂಡಿದೆ ಎನ್ನಲಾಗುತ್ತಿದೆ.

ಕಳೆದ ಕೆಲವು ವರ್ಷಗಳ ಹಿಂದೆಯಷ್ಟೇ ನಿರ್ದೇಶಕ ಮಂಸೋರೆ (Mansore) ಹಾಗೂ ಅವರ ಪತ್ನಿ ಅಖಿಲಾ (Akhilaa) ಪ್ರೀತಿಸಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಆದರೆ ಮಂಸೋರೆ ಅವರ ವಿರುದ್ಧ ಅವರ ಪತ್ನಿಯೂ ತನ್ನ ಪತಿಯವರು ತನ್ನ ಮೇಲೆ ಮಾನಸಿಕ, ದೈ-ಹಿಕ ಹಿಂ-ಸೆ, ವ-ರದಕ್ಷಿಣೆ ಹಾಗೂ ಕೊ-ಲೆ ಬೆ-ದರಿಕೆ ಹಾಕಿದ್ದಾರೆ ಎಂದು ದೂರು ದಾಖಲು ಮಾಡಿದ್ದಾರೆ.

ಪತ್ನಿ ದೂರು ದಾಖಲು ಮಾಡುತ್ತಿದ್ದಂತೆ ಮಂಸೋರೆಯವರು ಪೊಲೀಸರಿಗೆ ಪತ್ರ ಬರೆದಿದ್ದಾರೆ ಎನ್ನಲಾಗಿದೆ. ಮಂಸೋರೆ ಪತ್ನಿ ಅಖಿಲಾ (Akhilaa) ಸುಬ್ರಹ್ಮಣ್ಯಪುರ ಪೊಲೀಸ್ ಠಾಣೆ (Subramanya Police Station) ಗೆ ದೂರು ನೀಡಿದ್ದು, ಕೋವಿಡ್ ವೇಳೆ ಸಿನಿಮಾ ನಿರ್ಮಾಣ ಮಾಡುವುದಕ್ಕಾಗಿ ತಮ್ಮ ಮನೆಯವರಿಂದ 10 ಲಕ್ಷ ರೂಪಾಯಿ ಹಣ ಪಡೆದಿದ್ದಾರೆ.

ಮಂಸೋರೆ ತಾಯಿ ವೆಂಕಟಲಕ್ಷ್ಮಮ್ಮ, ಸಹೋದರಿ ಹೇಮಲತಾ ಇಬ್ಬರೂ ತಮಗೆ 30 ಲಕ್ಷ ರೂಪಾಯಿತ ಎಸ್ ಯುವಿ ಕಾರನ್ನು ಕೊಡಿಸಿಕೊಡುವಂತೆ ಪೀ-ಡಿಸಿದ್ದಾರೆ. ಈ ವಿಷಯ ಬಾಯಿಬಿಟ್ಟರೆ ಕೊಂ-ದು ಬಿಡುವುದಾಗಿ ಬೆ-ದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಈ ದೂರಿನ ಬಳಿಕ ಪೊಲೀಸರಿಗೆ ಪತ್ರ ಬರೆದ ಮಂಸೋರೆಯವರು, ” ನಾನು ಸದ್ಯ ನನ್ನ ಸಾಂಸಾರಿಕ ಜೀವನದಲ್ಲಿ ಜೀವನದಲ್ಲಿ ಬಿಕ್ಕಟ್ಟನ್ನು ಎದುರಿಸುತ್ತಿದ್ದೇನೆ.

ನನ್ನ ಪತ್ನಿ ಅಖಿಲಾ ಸಿ ಅವರ ಮಾನಸಿಕ ಸಮಸ್ಯೆಯೇ ನನ್ನ ವೈಯಕ್ತಿಕ ಜೀವನದ ಸಮಸ್ಯೆಗಳಿಗೆ ಕಾರಣವಾಗಿದೆ. ಈ ಬಗ್ಗೆ ಮುತುವರ್ಜಿ ವಹಿಸಿರುವ ನಾನು, ನನ್ನ ಪತ್ನಿ ಅಖಿಲಾ ಸಿ.ಯವರ ಮಾನಸಿಕ ಸಮಸ್ಯೆಯನ್ನು ಹೋಗಲಾಡಿಸಬೇಕು ಎಂಬ ಕಾಳಜಿಯಿಂದ ಬೆಂಗಳೂರಿನ ದುಬಾಸಿ ಪಾಳ್ಯದಲ್ಲಿರುವ ಸಂಪೂರ್ಣ ಕೌನ್ಸಿಲಿಂಗ್ ಸೆಂಟರ್‌ಗೆ ಕರೆದುಕೊಂಡು ಹೋಗಿರುತ್ತೇನೆ.

ಕೌನ್ಸಿಲಿಂಗ್ ಮಾಡಿದ ಕಾರ್ಮೆಲಿಟಾ ಅವರು ಅಖಿಲಾ ಸಿ ಅವರಿಗೆ ಮಾನಸಿಕ ಚಿಕಿತ್ಸೆಯ ಅಗತ್ಯವಿದೆ ಎಂದು ಹೇಳಿದ್ದರು. ಮಾತ್ರವಲ್ಲದೆ ನಿರಂತರ ಕೌನ್ಸಿಲಿಂಗ್‌ ಮಾಡುತ್ತಲೇ ಚಿಕಿತ್ಸೆ ಆರಂಭಿಸೋಣ ಎಂದು ಸಲಹೆ ನೀಡಿದ್ದರು.” ಎಂದಿದ್ದಾರೆ. ‘ನಾನು ಮದುವೆಯಾದ ಸಂದರ್ಭದಲ್ಲಾಗಲಿ, ಮದುವೆ ಬಳಿಕವಾಗಲಿ,ಯಾವುದೇ ರೀತಿಯ ವರದಕ್ಷಿಣೆಯನ್ನು ಪಡೆದುಕೊಂಡಿಲ್ಲ.

ಪತ್ನಿ ಮನೆಯವರಿಂದ ಈವರೆಗೆ ಹಣಕಾಸು, ಆಭರಣ, ವಾಹನ, ವಸ್ತುಗಳ ಯಾವ ಸಹಾಯವನ್ನೂ ಯಾವುದೇ ರೂಪದಲ್ಲೂ ಪಡೆದಿಲ್ಲ.ಈ ಬಗೆಗೆಗ ನನ್ನ ಅಕೌಂಟ್ ಡಿಟೈಲ್ಸ್‌ ಬಗ್ಗೆಯಾಗಲಿ, ಯಾವುದೇ ವ್ಯವಹಾರದ ಬಗ್ಗೆಯಾಗಲಿ ಮುಕ್ತ ತನಿಖೆ ನಡೆಸಬಹುದು” ಎಂದಿದ್ದಾರೆ. ನನ್ನ ಮಡದಿಯು ಮನೆಯಿಂದ ಹೊರ ಹೋಗುವಾಗ ಆಕೆಯ ಚಿನ್ನಾಭರಣದ ಜೊತೆಗೆ ನನಗೆ ಬಂದಿದ್ದ ರಾಷ್ಟ್ರ ಪ್ರಶಸ್ತಿ ಜೊತೆ ಇತರೆ ಪದಕಗಳನ್ನು ತೆಗೆದುಕೊಂಡಿದ್ದಾಳೆ.

ಅದಲ್ಲದೇ ಈಗಾಗಲೇ ಆಕೆಯು ನೀಡಿದ ದೂರನ್ನು ಗಂಭೀರವಾಗಿ ತೆಗೆದುಕೊಳ್ಳಬಾರದೆಂದು ತಿಳಿಸಿದ್ದಾರೆ. ಒಟ್ಟಿನಲ್ಲಿ ಕನ್ನಡದ ಖ್ಯಾತ ನಿರ್ದೇಶಕ ಮಂಸೋರೆಯವರ ವೈವಾಹಿಕ ಜೀವನದ ವಿಚಾರವು ಮುನ್ನಲೆಗೆ ಬಂದಿದ್ದು ಯಾವ ಹಂತಕ್ಕೆ ಹೋಗಿ ತಲುಪುತ್ತದೆ ಎನ್ನುವುದನ್ನು ಕಾದು ನೋಡಬೇಕು.

Leave a Reply

Your email address will not be published. Required fields are marked *