ಸಿಲ್ಕ್ ಸ್ಮಿತಾ ಕಚ್ಚಿ ತಿಂದಿದ್ದ ಆಪಲ್ ಮೇಲೆ ಹರಾಜು ಪ್ರಕ್ರಿಯೆ, ಈ ಆಪಲ್ ಗೆ ಬಾರಿ ಡಿಮ್ಯಾಂಡು!! ಈ ಆಪಲ್ ಬೆಲೆ ಎಷ್ಟು ಗೊತ್ತಾ!!

ದಕ್ಷಿಣ ಭಾರತದ ಚಿತ್ರರಂಗದಲ್ಲಿ 80ರ ದಶಕದಲ್ಲಿ ಮಿಂಚು ಹರಿಸಿದ್ದ ನಟಿ ಸಿಲ್ಕ್​ ಸ್ಮಿತಾ (Silk Smita) ಪರಿಚಯವಿರಬಹುದು. ಒಂದು ಕಾಲದಲ್ಲಿ ಪಡ್ಡೆ ಹೈಕಳ ನಿದ್ದೆ ಕದ್ದಿದ್ದ ಬೆಡಗಿ ಬದುಕನ್ನು ಅಂ-ತ್ಯಗೊಳಿಸಿಕೊಂಡಿದ್ದು ನಿಜಕ್ಕೂ ವಿಪರ್ಯಾಸ. ನಟಿ ಸಿಲ್ಕ್ ಸ್ಮಿತಾರವರ ಹಿನ್ನಲೆಯನ್ನು ಗಮನಿಸುವುದಾದರೆ ತೆಲುಗು ಕುಟುಂಬವೊಂದರಲ್ಲಿ ಹುಟ್ಟಿದ ಸಿಲ್ಕ್ ಸ್ಮಿತಾ ಪೋಷಕ ನಟಿಯಾಗಿ ಚಿತ್ರರಂಗ ಎಂಟ್ರಿ ಕೊಟ್ಟರು.

ಇವರ ನಿಜವಾದ ಹೆಸರು ವಿಜಯಲಕ್ಷ್ಮಿ (Vijaya Lakshmi). ಆದರೆ ನಟಿಗೆ ‘ವಂದಿಚಕ್ಕರಮ್’ ಸಿನಿಮಾ ನಂತರದಲ್ಲಿ ಅವರಿಗೆ ಸಿಲ್ಕ್ ಸ್ಮಿತಾ ಹೆಸರು ಬಂದಿತು. ಈ ಸಿನಿಮಾದಲ್ಲಿ ಸಿಲ್ಕ್ ಎಂದು ಹೆಸರಿದ್ದ ಕಾರಣ ಸಿಲ್ಕ್ ಸ್ಮಿತಾಳಾಗಿಯೇ ಖ್ಯಾತಿ ಗಳಿಸಿಕೊಂಡರು. ತಮಿಳು (Tamilu), ತೆಲುಗು Telugu), ಮಲಯಾಳಂ (Malayalam), ಕನ್ನಡ (Kannada), ಹಿಂದಿ (Hindi) ಭಾಷೆಯಲ್ಲಿ ಒಟ್ಟಾರೆ ಅವರು 450 ಸಿನಿಮಾ ಮಾಡಿದ್ದ ಸೈ ಎನಿಸಿಕೊಂಡಿದ್ದರು.

ಸಿಲ್ಕ್ ಸ್ಮಿತಾ ಐಟಂ ಸಾಂಗ್ಸ್ (Item Song) ಗಳಿಗೆ ಹೆಚ್ಚು ಹೆಜ್ಜೆ ಹಾಕುತ್ತಿದ್ದರು. ಕನ್ನಡದಲ್ಲಿ ರವಿಚಂದ್ರನ್‌ ನಟನೆಯ ‘ಹಳ್ಳಿಮೇಷ್ಟ್ರು’ (Hallimestru) ಸಿನಿಮಾದಲ್ಲಿ ಅವರ ಟೀಚರ್ ಪಾತ್ರವು ಸಿಕ್ಕಾಪಟ್ಟೆ ಫೇಮಸ್ ಆಗಿತ್ತು. ಕನ್ನಡದಲ್ಲಿಯು ಕೆಲವು ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದರು. ಆದರೆ ತನ್ನ ದು-ಡುಕಿನ ನಿರ್ಧಾರದಿಂದ ಬದುಕನ್ನೇ ಅಂ-ತ್ಯಗೊಳಿಸಿದ್ದ ನಟಿ ಸಿಲ್ಕ್ ಸ್ಮಿತಾ.

1996ರಲ್ಲಿ ಚೆನ್ನೈನ ಅವರ ಅಪಾರ್ಟ್‌ಮೆಂಟ್‌ನಲ್ಲಿ ಆ-ತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿತ್ತು. ಆದರೆ ನಟಿಗೆ ಅವಕಾಶಗಳು ಕಡಿಮೆಯಾಗುತ್ತಿದ್ದಂತೆ ಈ ನಿರ್ಧಾರ ತೆಗೆದುಕೊಂಡಿದ್ದರು ಎನ್ನಲಾಗಿತ್ತು. ಆದರೆ ಇದೀಗ ನಟಿ ಸಿಲ್ಕ್​ ಸ್ಮಿತಾ ಅವರ ಕುರಿತಾದ ಕುತೂಹಲಕಾರಿ ವಿಚಾರವೊಂದು ಹೊರಬಿದ್ದಿದೆ.

ಹಿರಿಯ ಪತ್ರಕರ್ತ ಸೆಯ್ಯರ್ ಬಾಲು (Senior Journalist Saiyar Balu) ಅವರು ಸಂದರ್ಶನವೊಂದರಲ್ಲಿ ಈ ಬಗ್ಗೆ ರಿವೀಲ್ ಮಾಡಿದ್ದಾರೆ. ಸಿನಿಮಾವೊಂದರ ಚಿತ್ರೀಕರಣದ ವೇಳೆ ಸಿಲ್ಕ್ ಸ್ಮಿತಾ ಸೇಬು ಹಣ್ಣನ್ನು ಕಚ್ಚಿ ತನ್ನ ಬಳಿ ಇಟ್ಟುಕೊಂಡಿದ್ದರಂತೆ. ಶೂಟಿಂಗ್ ಸ್ಥಳದಲ್ಲಿದ್ದ ವ್ಯಕ್ತಿಯೊಬ್ಬರು ಇದನ್ನು ಗಮನಿಸಿ ಸೇಬು ಹಣ್ಣು ಕದ್ದು ಓಡಿಹೋಗಿದ್ದರಂತೆ. ಆ ಬಳಿಕ ಸೇಬು ಹಣ್ಣನ್ನು ಸಿಲ್ಕ್​ ಸ್ಮಿತಾ ಅವರು ಕಚ್ಚಿದ ಹಣ್ಣು ಎಂದು ಹರಾಜು ಹಾಕಿದ್ದರಂತೆ.

ಎರಡು ರೂಪಾಯಿಗಿಂತಲೂ ಕಡಿಮೆ ಬೆಲೆಯಲ್ಲಿ ಮಾರಾಟವಾಗುತ್ತಿದ್ದ ಸೇಬು ಹಣ್ಣನ್ನು ಆ ಕಾಲದಲ್ಲೇ ಹರಾಜಿನಲ್ಲಿ 350 ರೂಪಾಯಿಗೆ ಖರೀದಿ ಮಾಡಿದ್ದರು ಎನ್ನಲಾಗಿದೆ. ಸಿಲ್ಕ್ ಸ್ಮಿತಾ ಅಭಿಮಾನಿಯೊಬ್ಬ ಖರೀದಿ ಈ ಸೇಬನ್ನು ಖರೀದಿ ಮಾಡಿದ್ದರು ಎನ್ನುವ ವಿಚಾರವನ್ನು . ಒಟ್ಟಿನಲ್ಲಿ ಸಿಲ್ಕ್ ಸ್ಮಿತಾರವರ ಮೇಲಿನ ಹುಚ್ಚು ಅಭಿಮಾನದಿಂದಾಗಿ ಅಭಿಮಾನಿಯೊಬ್ಬನು ಈ ರೀತಿಯ ಕೆಲಸಕ್ಕೂ ಕೈ ಹಾಕಿದ್ದನು ಎನ್ನುವುದಕ್ಕೂ ಅಚ್ಚರಿಯ ವಿಚಾರ.

Leave a Reply

Your email address will not be published. Required fields are marked *