ದಕ್ಷಿಣ ಭಾರತದ ಖ್ಯಾತ ನಟಿ ಸಾಯಿ ಪಲ್ಲವಿಯವರ ಮುದ್ದಿನ ತಂಗಿ ಹೇಗಿದ್ದಾರೆ ಗೊತ್ತಾ? ಅಪರೂಪದ ಫೋಟೋ ವೈರಲ್.. ಇಬ್ಬರು ನೋಡೋಕೆ ಸೇಮ್ ಟು ಸೇಮ್!!

ದಕ್ಷಿಣ ಭಾರತ ಸಿನಿಮಾರಂಗದ ಖ್ಯಾತ ನಟಿಯಾಗಿ ಫೇಮಸ್ ಆದವರು ನಟಿ ಸಾಯಿಪಲ್ಲವಿ (Sai Pallavi) ಯಾರಿಗೆ ತಾನೇ ಗೊತ್ತಿಲ್ಲ ಹೇಳಿ?. ಸಿಂಪಲ್ ಹುಡುಗಿಯಾಗಿ ತನ್ನ ಸೌಂದರ್ಯ ಹಾಗೂ ನಟನೆಯಿಂದ ಎಲ್ಲರ ಮನಸ್ಸು ಗೆದ್ದುಕೊಂಡಿದ್ದಾರೆ. ಟಾಲಿವುಡ್ ಹಾಗೂ ಮಾಲಿವುಡ್ ಸಿನಿಮಾಗಳಲ್ಲಿ ನಟಿಸಿರುವ ಸಾಯಿ ಪಲ್ಲವಿಯವರು ಬೇಡಿಕೆಯನ್ನು ಹೊಂದಿದ್ದು, ಸಿನಿ ಕೆರಿಯರ್ ನಲ್ಲಿ ಬ್ಯುಸಿಯಾಗಿದ್ದಾರೆ. ಇದೀಗ ನಟಿ ಸಾಯಿ ಪಲ್ಲವಿಯವರ ವಿಶೇಷ ಫೋಟೋವೊಂದು ವೈರಲ್ ಆಗಿವೆ.

ದಕ್ಷಿಣ ಭಾರತದ ಖ್ಯಾತ ನಟಿ ಸಾಯಿ ಪಲ್ಲವಿಯವರು ತನ್ನ ತಂಗಿ ಪೂಜಾ (Pooja) ಜೊತೆಗೆ ಇರುವ ಫೋಟೋ ವೈರಲ್ ಆಗಿದೆ. ಈ ಸಾಯಿ ಪಲ್ಲವಿಯವರ ತಂಗಿ ಕೂಡ ನೋಡಲು ಅವರಂತೆಯೇ ಇದ್ದಾರೆ. ತಕ್ಷಣಕ್ಕೆ ನೋಡಿದರೆ ಇವರಲ್ಲಿ ಸಾಯಿ ಪಲ್ಲವಿ ಯಾರು ಎಂದೆನಿಸಬಹುದು. ಸದ್ಯಕ್ಕೆ ವೈರಲ್ ಆಗಿರುವ ಫೋಟೋದಲ್ಲಿ ಅಕ್ಕ ತಂಗಿಯರಿಬ್ಬರೂ ಮುದ್ದು ಮುದ್ದಾಗಿ ಕ್ಯಾಮೆರಾಗೆ ಪೋಸ್ ನೀಡಿದ್ದಾರೆ.

ಹೆಚ್ಚಾಗಿ ಸೀರೆಯಲ್ಲಿಯೇ ಕಾಣಿಸಿಕೊಳ್ಳುವ ನಟಿ ಸಾಯಿ ಪಲ್ಲವಿ ಈ ಫೋಟೋದಲ್ಲೂ ಚೂಡಿದಾರ್ ಸೇರಿದಂತೆ ಡಿಸೆಂಟ್ ಉಡುಗೆಯಲ್ಲಿ ಕಾಣಿಸಿಕೊಂಡಿದ್ದಾರೆ. ಈ ಫೋಟೋಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದು ನೂರಕ್ಕೂ ಅಧಿಕ ಲೈಕ್ಸ್ ಬಂದಿವೆ. ನಟಿ ಸಾಯಿ ಪಲ್ಲವಿಯವರ ಹಿನ್ನಲೆಯನ್ನು ಗಮನಿಸಿದರೆ, 2005 ರ ತಮಿಳು ಚಿತ್ರ ಕಸ್ತೂರಿ ಮಾನ್( Kasturi Maan) ಮೂಲಕ ಬೆಳ್ಳಿತೆರೆಗೆ ಎಂಟ್ರಿ ಕೊಟ್ಟರು. 2015ರಲ್ಲಿ ತೆರೆಕಂಡ ಮಲಯಾಳಂ ಚಿತ್ರ ಪ್ರೇಮಂ (Premam) ಜನಪ್ರಿಯತೆಯನ್ನು ತಂದುಕೊಟ್ಟಿತು.

2017 ರಲ್ಲಿ ವರುಣ್ ತೇಜ್ ಅವರ ಫಿದಾ (Fida) ಚಿತ್ರದೊಂದಿಗೆ ಸಾಯಿ ಪಲ್ಲವಿ ತೆಲುಗು ಇಂಡಸ್ಟ್ರಿಗೂ ಎಂಟ್ರಿ ಕೊಟ್ಟರು. ಇತ್ತೀಚೆಗಷ್ಟೇ ತೆರೆ ಕಂಡ ‘ಶ್ಯಾಮ್ ಸಿಂಗ ರಾಯ್’ ( Shyam Sing Ray) ಎಲ್ಲರು ಮೆಚ್ಚಿಕೊಂಡರು. ತದನಂತರದಲ್ಲಿ ಗಾರ್ಗಿ ಸಿನಿಮಾದಲ್ಲಿ ನಟಿಸಿದ್ದರು. ಗಾರ್ಗಿ (Gargi) ಸಿನಿಮಾ ಬಳಿಕ ನಟಿ ಸಾಯಿ ಪಲ್ಲವಿಯ ಯಾವುದೇ ಸಿನಿಮಾ ಕೂಡ ರಿಲೀಸ್ ಆಗಿಲ್ಲ. ಸಾಯಿ ಪಲ್ಲವಿ ಸಿನಿಮಾ ಅಪ್ಡೇಟ್ ಬಗ್ಗೆ ಯಾವುದೇ ಸುದ್ದಿ ಹೊರಬಿದ್ದಿಲ್ಲ. ನಟಿ ಸಾಯಿ ಪಲ್ಲವಿ ಅದ್ಭುತ ಡಾನ್ಸರ್ ಹೇಗೋ ಅದೇ ರೀತಿ ಪೂಜಾ ಕಣ್ಣನ್ ಅವರು ಕೂಡ ಒಳ್ಳೆಯ ಡಾನ್ಸರ್.

ಅಕ್ಕನಂತೆ ತಂಗಿಯೂ ಕೂಡ ಬಣ್ಣದ ಲೋಕದಲ್ಲಿ ಸಕ್ರಿಯರಾಗಿದ್ದಾರೆ. ತಮಿಳಿನಲ್ಲಿ “ಚಿತ್ತಿರೈ ಸೆವ್ವಾನಂ” (Chittirai Sevvanam) ಸಿನಿಮಾ ಮೂಲಕ ಕಾಲಿವುಡ್‌ಗೆ ಪೂಜಾ ಎಂಟ್ರಿ ಕೊಟ್ಟರು. ಇದಕ್ಕೂ ಮುನ್ನ “ಕಾರಾ” (Karaa) ಕಿರುಚಿತ್ರ ಹಾಗೂ “ಆದಿ ಪೆನ್ನೆ” (Adi Penne) ಸೇರಿ ಹಲವು ಮ್ಯೂಸಿಕ್‌ ಆಲ್ಬಂನಲ್ಲಿಯೂ ಪೂಜಾ ಕಾಣಿಸಿಕೊಂಡಿದ್ದರು. ಹೀಗೆ ಅಕ್ಕ ತಂಗಿ ಇಬ್ಬರೂ ಕೂಡ ಸಿನಿಮಾರಂಗದಲ್ಲಿ ಗುರುತಿಸಿಕೊಂಡಿದ್ದು ಫ್ಯಾನ್ಸ್ ಬಳಗವನ್ನು ಹೊಂದಿದ್ದಾರೆ.

Leave a Reply

Your email address will not be published. Required fields are marked *