ಖ್ಯಾತ ಖಳ ನಟ ರವಿಶಂಕರ್ ಅವರ ಮುದ್ದಾದ ಫ್ಯಾಮಿಲಿ ಹೇಗಿದೆ ಗೊತ್ತಾ? ಇಲ್ಲಿದೆ ನೋಡಿ ಅಪರೂಪದ ಫೋಟೋ

ಸಿನಿಮಾರಂಗದಲ್ಲಿ ಖಳ ನಟರಿಗೆ ಎಲ್ಲಿಲ್ಲದ ಬೇಡಿಕೆಯಿದೆ. ಸ್ಟಾರ್ ನಟ ನಟಿಯರಷ್ಟೇ ಹೆಚ್ಚಿನ ಸಂಭಾವನೆಯನ್ನು ಖಳ ನಟರು ಪಡೆಯುತ್ತಿದ್ದಾರೆ. ಹೀಗಾಗಿ ಸಿನಿಮಾದಲ್ಲಿ ನಾಯಕ ನಟರಷ್ಟೇ ಹುಡುಕಾಟವು ವಿಲನ್ (Vilan) ಪಾತ್ರಕ್ಕೂ ನಡೆಯುತ್ತದೆ.

ಯಾವ ಸಿನಿಮಾಗಳಿಗೆ ಖಳ ನಾಯಕನ ಪಾತ್ರಕ್ಕೆ ಯಾರು ಸೂಕ್ತ ಎಂದು ಖಳ ನಟರ ಹುಡುಕಾಟ ಜೋರಾಗಿಯೇ ಇರುತ್ತದೆ. ವಿಲನ್ ಪಾತ್ರಗಳು ಕೂಡ ಸಿನಿಮಾಗಳಲ್ಲಿ ಸ್ಟಾರ್ ನಟರ ಪಾತ್ರಗಳಂತೆ ಅಬ್ಬರಿಸುತ್ತಿದೆ. ಈಗಾಗಲೇ ಅನೇಕ ನಟ ನಟಿಯರು ಪೋಷಕ ನಟರು ಹಾಗೂ ಖಳ ನಟರು ತಮ್ಮ ನಟನೆಯ ಮೂಲಕವೇ ಎಲ್ಲರ ಮನಸ್ಸು ಗೆದ್ದಿದ್ದಾರೆ.

ಕನ್ನಡ ಸಿನಿಮಾರಂಗ ಸೇರಿದಂತೆ ಇತರ ಭಾಷೆಯ ಸಿನಿಮಾರಂಗದಲ್ಲಿ ಖ್ಯಾತ ಖಳ ನಟರಾಗಿ ಗುರುತಿಸಿಕೊಂಡವರು ಈ ನಟ ರವಿಶಂಕರ್ (Ravishankar). ಇದೀಗ ಖ್ಯಾತ ಖಳ ನಟ ಮುದ್ದಾದ ಫ್ಯಾಮಿಲಿ ಫೋಟೋವೊಂದು ವೈರಲ್ ಆಗಿದ್ದು, ಈ ಫೋಟೋದಲ್ಲಿ ನಟನ ಪತ್ನಿಯನ್ನು ಕಾಣಬಹುದು. ಈ ಫೋಟೋಗೆ ನೂರಕ್ಕೂ ಅಧಿಕ ಲೈಕ್ಸ್ ಗಳು ಬಂದಿವೆ.

ರವಿಶಂಕರ್ ಎಂದ ಕೂಡಲೇ ಖಡಕ್ ಲುಕ್, ತನ್ನ ಖಡಕ್ ಡೈಲಾಗ್ ಮೂಲಕ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಹೊಂದಿದ್ದಾರೆ. ಪಿ. ರವಿಶಂಕರ್ ( P Ravishankar) ಅವರು ಪ್ರತಿಭಾವಂತ ನಟರಾಗಿದ್ದು, ಅವರ ಹಿನ್ನಲೆಯನ್ನು ಗಮನಿಸಿದರೆ, ಡಬ್ಬಿಂಗ್ ಆರ್ಟಿಸ್ಟ್ (Dabbing Artist) ಆಗಿ ಗುರುತಿಸಿಕೊಂಡಿದ್ದಾರೆ. ಈಗಾಗಲೇ ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲ ತೆಲುಗು, ತಮಿಳು ಚಿತ್ರರಂಗದಲ್ಲಿ ಡಬ್ಬಿಂಗ್ ಆರ್ಟಿಸ್ಟ್ ಆಗಿ ಗುರುತಿಸಿಕೊಂಡಿದ್ದಾರೆ.

ಪಿ.ರವಿಶಂಕರ್ ನಟ ಮಾತ್ರವಾಗಿರದೇ, ಡಬ್ಬಿಂಗ್ ಆರ್ಟಿಸ್ಟ್, ಅದರ ಜೊತೆಗೆ ನಿರ್ದೇಶಕ ಕೂಡ. ಹಳ್ಳಿ ಕೃಷ್ಣ ಡೆಲ್ಲಿ ರಾಧೆ ಚಿತ್ರದ ಮೂಲಕ ಚಂದನ ವನಕ್ಕೆ ಎಂಟ್ರಿ ಕೊಟ್ಟರು. ಮನಮೆಚ್ಚಿದ ಸೊಸೆ, ಕೋಟೆ ಚಿತ್ರದಲ್ಲಿ ಫೇಮಸ್ ಆಗಿ ವಾಯ್ಸ್ ಆರ್ಟಿಸ್ಟ್ ಆಗಿ ಜನಪ್ರಿಯತೆಯನ್ನು ಗಳಿಸಿಕೊಂಡರು. 2009 ರಲ್ಲಿ ತೆರೆ ಕಂಡ ಅರುಂಧತಿ ಚಿತ್ರವನ್ನು ಡಬ್ಬಿಂಗ್ ಮಾಡಿದ್ದು ರವಿಶಂಕರ್.

ಸುದೀಪ್ ಅವರ ಜೊತೆ ‘ಕೆಂಪೇಗೌಡ’ ಆದರೆ ಇವರ ಬದುಕಿಗೆ ತಿರುವು ಕೊಟ್ಟಿತು. ಈ ಚಿತ್ರದಲ್ಲಿ ‘ಆರ್ಮುಗಂ’ ನಾಗಿ ಅಬ್ಬರಿಸಿ ಸಾಲು ಸಾಲು ಅವಕಾಶಗಳನ್ನು ಗಿಟ್ಟಿಸಿಕೊಂಡರು. ಈಗಾಗಲೇ ಐವತ್ತಕ್ಕೂ ಹೆಚ್ಚು ಸಿನಿಮಾಗಳಲ್ಲಿ ತಮ್ಮ ಅತ್ಯುತ್ತಮ ನಟನೆಯ ಮೂಲಕ ಪ್ರೇಕ್ಷಕರನ್ನು ಸೆಳೆದಿದ್ದಾರೆ. ಕನ್ನಡ ಸೇರಿದಂತೆ ಪರಭಾಷೆಯ ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ನಟ ರವಿಶಂಕರ್ ಅವರು ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.

Leave a Reply

Your email address will not be published. Required fields are marked *