ಸ್ಯಾಂಡಲ್ ವುಡ್ ನನ್ನು ಆಳುತ್ತಿರುವ ಕರಾವಳಿಯ ಪ್ರತಿಭೆಗಳಲ್ಲಿ ರಾಜ್ ಬಿ ಶೆಟ್ಟಿ (Raj B Shetty) ಕೂಡ ಒಬ್ಬರಾಗಿದ್ದಾರೆ. ಒಂದು ಮೊಟ್ಟೆಯ ಕತೆ (Ondu Motte Kathe) ಸಿನಿಮಾದ ಮೂಲಕ ಎಲ್ಲರಿಗೂ ಇಷ್ಟವಾದ ರಾಜ್ ಬಿ ಶೆಟ್ಟಿ (Raj B Shetty) ಇದೀಗ ಬೇಡಿಕೆಯನ್ನು ಸೃಷ್ಟಿಸಿಕೊಂಡಿದ್ದಾರೆ. ಸದ್ಯಕ್ಕೆ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದು, ಟೋಬಿ (Tobi) ಮೂಲಕ ಸಿನಿಮಾದ ಮೂಲಕ ಮತ್ತೆ ದಕ್ಷಿಣ ಭಾರತ ಸಿನಿಮಾರಂಗದಲ್ಲಿ ಬಾರಿ ನಿರೀಕ್ಷೆಯನ್ನು ಹುಟ್ಟಿಸಿದ್ದಾರೆ.
ನಿರ್ದೇಶಕ ರಾಜ್ ಬಿ ಶೆಟ್ಟಿ ಯವರ ಟೋಬಿ ಚಿತ್ರದ ಟ್ರೇಲರ್ (Trailer) ಬಿಡುಗಡೆಯಾಗಿದೆ. ಆದರೆ ರಾಜ್ ಬಿ ಶೆಟ್ಟಿಯ ಲವ್ ಲೈಫ್ ಬಗ್ಗೆಯೂ ಮಾತನಾಡಿದ್ದು, ಆ ವಿಚಾರವನ್ನು ರಿವೀಲ್ ಮಾಡಿದ್ದಾರೆ. ಅದಲ್ಲದೇ ನಟ ರಾಜ್ ಬಿ ಶೆಟ್ಟಿಗೂ ಲವ್ ಆಗಿತ್ತು ಎನ್ನುವುದು ಪಕ್ಕಾ ಆಗಿದೆ. ತನ್ನ ಲವ್ ಲೈಫ್ ಬಗ್ಗೆ ಮಾತನಾಡಿರುವ ರಾಜ್ ಬಿ ಶೆಟ್ಟಿ ಆ ದಿನಗಳನ್ನು ನೆನಪಿಸಿಕೊಂಡಿದ್ದಾರೆ.
ಲವ್ ಸ್ಟೋರಿ ಬಗ್ಗೆ ಮಾತನಾಡುತ್ತಾ ರಾಜ್ ಬಿ ಶೆಟ್ಟಿ , “ಡಿಗ್ರಿಯಲ್ಲಿ ಒಬ್ಬಳು ಹುಡುಗಿ ಇದ್ದಳು. ನನ್ನ ಮತ್ತು ಅವಳ ನಡುವೆ ಆರು ವರ್ಷದ ರಿಲೇಷನ್ ಇತ್ತು. ಆವತ್ತೆ ನಾನು ಅವಳಿಗೆ ಹೇಳಿದ್ದೆ, ಒಂದು ವೇಳೆ ನೀನು ಬಿಟ್ಟು ಹೋಗುತ್ತಿಯಾ ಎಂದರೆ ನಾನು ಯಾವುದೇ ಕಾರಣಕ್ಕೂ ಕಾರಣ ಕೇಳಲ್ಲ ಎಂದಿದ್ದೆ. ಆದರೆ, ಯಾಕೋ ಗೊತ್ತಿಲ್ಲ, ಆರು ವರ್ಷದ ಬಳಿಕ ಹಾಗೇ ಆಯ್ತು. ಆಗ ಒಂದು ವಿಷಯ ನನಗೆ ಗೊತ್ತಾಯ್ತು. ಅವಳು ನನ್ನನ್ನು ಬಿಟ್ಟು ಹೋಗದಿದ್ದರೆ, ನಾನು ಇನ್ನೂ ಕೆಟ್ಟ ಮನುಷ್ಯನಾಗಿಯೇ ಉಳಿಯುತ್ತಿದ್ದೆ ಎಂದು ಹೇಳಿದ್ದಾರೆ.
ಅಷ್ಟೇ ಅಲ್ಲದೇ, “ಹಾಗಂತ ಈಗ ನಾನೇನೂ ತುಂಬ ಒಳ್ಳೆಯವನಲ್ಲ. ಆಗ ನನಗೆ ಗೊತ್ತಾಯ್ತು. ಬ್ರೇಕಪ್ ಆಗಿ ಮುಂದೆ ಹೋಗ್ತಾ ಹೋಗ್ತಾ ನನಗೇ ಗೊತ್ತಾಗುತ್ತ ಹೋಯಿತು. ನಿಧಾನಕ್ಕೆ ಅರ್ಥ ಆಗೋಕೆ ಶುರುವಾಯ್ತು. ಅವಳಿಗೆ ನಾನು ಪ್ರೀತಿ ಕೊಡೋಕೇ ಬರಲಿಲ್ಲ ಅಂತ. ಅವಳು ಬ್ರೇಕಪ್ ಮಾಡಿದ್ರಿಂದ ನಾನು ಬೆಳೆದೆ. ಆ ಬ್ರೇಕಪ್‌ನಿಂದ ನಾನು ಅವಳನ್ನು ದ್ವೇಷಿಸುವುದಿಲ್ಲ. ಬದಲಿಗೆ ಗೌರವಿಸುತ್ತೇನೆ. ನೀನು ಯೋಗ್ಯ ಅಲ್ಲ ಎಂದು ಅವಳು ತೋರಿಸಿದಳು”.
“ಆ ಬ್ರೇಕಪ್ ಬಳಿಕ, ಮತ್ತೊಂದು ರಿಲೇಷನ್ ಇತ್ತು. ಅದೂ ಅಷ್ಟೇ ಬೇಗ ಹೋಯ್ತು. ಈಗ ಒಂದು ರಿಲೇಷನ್ ಚಾಪ್ತಿಯಲ್ಲಿದೆ. ನಾವೀಗ ಇಬ್ಬರೂ ಸೇರಿ ಜೀವನವನ್ನು ಹುಡುಕುತ್ತಿದ್ದೇವೆ. ಅವಳಿಗೂ ಸಾಕಷ್ಟು ಹುಡುಕಾಟಗಳಿವೆ. ನನಗೂ ಹುಡುಕಾಟಗಳಿವೆ. ನಂದೆನೂ ರೂಲ್ಸ್ ಇಲ್ಲ, ಅವಳದ್ದೂ ಏನೂ ರೂಲ್ಸ್ ಇಲ್ಲ. ಇಬ್ಬರು ಹ್ಯಾಪಿಯಾಗಿರಬೇಕು ಅಷ್ಟೇ. ನೀನು ಬದುಕು ಕಲಿ, ನಾನೂ ಕಲಿಯುತ್ತೇನೆ. ನೋಡೋಣ ಎಂದಿದ್ದಾರೆ. ಒಟ್ನಲ್ಲಿ ನಡೆಯುತ್ತಿದೆ” ಎಂದು ತನ್ನ ಪ್ರೇಮ್ ಕಹಾನಿಯನ್ನು ರಿವೀಲ್ ಮಾಡಿದ್ದಾರೆ.