ರಾಶಿ ಚಕ್ರದಲ್ಲಿನ ಬದಲಾವಣೆಗಳಿಂದ ಕೆಲವು ರಾಶಿಗಳಿಗೆ ಧನಾತ್ಮಕ ಪರಿಣಾಮ (Positive Effect)ವನ್ನು ತಂದರೆ ಇನ್ನು ಕೆಲವು ರಾಶಿಗೆ ಋಣಾತ್ಮಕ ಪರಿಣಾಮ (Negative Effect) ವು ಬೀರುತ್ತವೆ. 2023 ಅಕ್ಟೋಬರ್ 5ರ ಗುರುವಾರವಾದ ಇಂದು, ಚಂದ್ರನ ಸಂಚಾರವು ಆಗಲಿದೆ. ವೈದಿಕ ಜ್ಯೋತಿಷ್ಯದ ಪ್ರಕಾರವಾಗಿ ಮಂಗಳ ಯೋಗದ ಪ್ರಭಾವದಿಂದ ಕೆಲವು ರಾಶಿಯವರಿಗೆ ಅದೃಷ್ಟಕಾರಿ ದಿನವಾಗಲಿದೆ. ಹಾಗಾದ್ರೆ ಇಂದಿನ ಹನ್ನೆರಡು ರಾಶಿಗಳಲ್ಲಿ ಯಾವ ರಾಶಿಗೆ ಅದೃಷ್ಟ (Luck) ವು ಕೈ ಹಿಡಿಯಲಿದೆ ಎನ್ನುವುದನ್ನು ನೀವಿಲ್ಲಿ ತಿಳಿದುಕೊಳ್ಳಿ.
ಮೇಷ ರಾಶಿ : ಈ ರಾಶಿಯವರಿಗೆ ವ್ಯವಹಾರದಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳಲು ಒಳ್ಳೆಯ ಕಾಲವಾಗಿದೆ. ಕೆಲವೊಮ್ಮೆ ಈ ರಾಶಿಯವರು ಉದ್ಯೋಗದಲ್ಲಿ ಮಾಡುವ ಬದಲಾವಣೆಗಳು ಸಹ ಉದ್ಯೋಗಿಗಳಿಗೆ ಇಷ್ಟವಾಗದು. ಹೀಗಾಗಿ ಎಲ್ಲವನ್ನು ಸರಿದೂಗಿಸಿಕೊಂಡು ನಡೆಯುವುದು ಉತ್ತಮ. ಅರ್ಧಕ್ಕೆ ನಿಂತಿರುವ ಕೆಲಸ ಕಾರ್ಯಗಳಿಗೆ ಸಮಯವನ್ನು ನೀಡುವತ್ತ ಗಮನ ಹರಿಸುವಿರಿ. ವಿದ್ಯಾರ್ಥಿಗಳಿಗೆ ಶುಭದಿನವಾಗಿದ್ದು, ಈ ರಾಶಿಯವರಿಗೆ ಒತ್ತಡದ ದಿನವಾಗಿರಲಿದೆ.

ವೃಷಭ ರಾಶಿ : ಈ ರಾಶಿಯವರಿಗೆ ಶತ್ರು ಕಾಟವು ಕಂಡು ಬರಬಹುದು. ಆದರೆ ಕೆಲಸ ಕಾರ್ಯಗಳಲ್ಲಿ ಆತ್ಮವಿಶ್ವಾಸದಿಂದ ಮುಂದುವರೆದರೆ ಲಾಭದಾಯಕವಾಗಿರಲಿದೆ. ಈ ದಿನ ಸ್ವಲ್ಪ ಹಣವೂ ಖರ್ಚಾಗುತ್ತದೆ. ಖರ್ಚು ವೆಚ್ಚಗಳ ಮೇಲೆ ಇತಿಮಿತಿಯಿರಲಿ. ಆರೋಗ್ಯದ ಬಗ್ಗೆ ಹೆಚ್ಚು ಜಾಗರೂಕರಾಗಿರುವುದು ಒಳ್ಳೆಯದು. ಸಂಗಾತಿಯ ಜೊತೆಗೆ ಹೆಚ್ಚು ಸಮಯ ಕಳೆಯಲಿದ್ದಾರೆ.
ಮಿಥುನ ರಾಶಿ : ವಿದ್ಯಾರ್ಥಿಗಳು ಇಂದು ಶಿಕ್ಷಣ ಕ್ಷೇತ್ರದಲ್ಲಿ ಯಶಸ್ಸನ್ನು ಪಡೆಯುವ ಶುಭ ದಿನವಾಗಲಿದೆ. ಕುಟುಂಬದ ಸದಸ್ಯರೊಂದಿಗೆ ಯಾವುದೇ ವಾದವಿದ್ದರೆ ಇಂದು ಅದಕ್ಕೆ ಪರಿಹಾರ ಸಿಗುತ್ತದೆ. ಈ ರಾಶಿಯವರಿಗೆ ಆರ್ಥಿಕವಾಗಿ ಲಾಭ ಸಿಗುವ ದಿನವಾಗಲಿದೆ. ರಾಜಕೀಯ ಚಟುವಟಿಕೆಗಳಲ್ಲಿ ಗುರುತಿಸಿಕೊಳ್ಳುವವರಿಗೆ ಸಾರ್ವಜನಿಕ ಬೆಂಬಲವೂ ಹೆಚ್ಚಾಗಲಿದ್ದು ಶುಭದಿನವಾಗಿರಲಿದೆ.
ಕರ್ಕಾಟಕ ರಾಶಿ : ಇಂದು ಯಾವುದೇ ಕೆಲಸಕಾರ್ಯಗಳಿಗೆ ಕೈ ಹಾಕಿದರೆ ಅದು ಖಂಡಿತವಾಗಿಯೂ ಪೂರ್ಣಗೊಳ್ಳುತ್ತದೆ. ಈ ದಿನ ತಂದೆಯೊಂದಿಗೆ ವೈಮನಸ್ಸು ಮೂಡಬಹುದು. ಹೀಗಾಗಿ ಆದಷ್ಟು ಮಾತಿನ ಮೇಲೆ ನಿಗ ಇಡುವುದು ಉತ್ತಮ. ಹಿರಿಯರ ಮಾತಿಗೆ ಗೌರವ ನೀಡುವ ಸ್ವಭಾವವನ್ನು ಬೆಳೆಸಿಕೊಳ್ಳುವುದು ಎಲ್ಲಾ ಸಮಸ್ಯೆಗಳಿಗೂ ಪರಿಹಾರ.ಪ್ರೇಮಿಗಳ ನಡುವೆ ಸ್ವಲ್ಪ ಮಟ್ಟಿಗಿನ ಬಿನ್ನಾಭಿಪ್ರಾಯಗಳು ಬರುವ ಸಾಧ್ಯತೆಯೂ ಇದೆ.
ಸಿಂಹ ರಾಶಿ : ಈ ರಾಶಿಯವರಿಗೆ ವ್ಯವಹಾರಗಳು ಪೂರ್ಣಗೊಳ್ಳಲಿದೆ. ಸ್ವಇಚ್ಛೆಯಿಂದ ನಿರ್ಧಾರವನ್ನು ತೆಗೆದುಕೊಳ್ಳುವುದು ಉತ್ತಮ. ಬೇರೆಯವರ ಮಾತು ಕೇಳಿದರೆ ನಿಮ್ಮ ಕೆಲಸ ಕಾರ್ಯಕ್ಕೆ ಅಡ್ಡಿ ಆತಂಕಗಳು ಬರಬಹುದು. ಅದಲ್ಲದೇ ನಷ್ಟಗಳನ್ನು ಅನುಭವಿಸುವ ಸಂಭವ ಹೆಚ್ಚು. ಕುಟುಂಬದಲ್ಲಿಯು ಮಾನಸಿಕ ಕಿರಿಕಿರಿಯನ್ನು ಅನುಭವಿಸುವ ಕಾರಣ ಅಶಾಂತಿಯ ವಾತಾವರಣವು ಇರುತ್ತದೆ. ಎಲ್ಲವನ್ನು ಶಾಂತ ಚಿತ್ತದಿಂದ ಸ್ವೀಕರಿಸುವ ಮನೋಭಾವವನ್ನು ಬೆಳೆಸಿಕೊಂಡರೆ ಉತ್ತಮ.
ಕನ್ಯಾ ರಾಶಿ: ಇಂದು ಈ ರಾಶಿಯವರಿಗೆ ಶುಭದಾಯಕ ದಿನವಾಗಿದ್ದು, ಆಸ್ತಿಯ ಒಪ್ಪಂದಗಳು ಪೂರ್ಣಗೊಂಡು ಆಸ್ತಿಯನ್ನು ಹೊಂದುವ ದಿನವಾಗಲಿದೆ. ಕುಟುಂಬದವರ ಜೊತೆಗೆ ಹೆಚ್ಚು ಸಮಯವನ್ನು ಕಳೆಯುತ್ತಾರೆ. ಸಮಾಜದಲ್ಲಿ ಸ್ಥಾನಮಾನದ ಜೊತೆಗೆ ಆತ್ಮವಿಶ್ವಾಸವನ್ನು ಹೆಚ್ಚಾಗುತ್ತದೆ. ಉದ್ಯೋಗಿಗಳು ಇಂದು ವೇತನ ಹೆಚ್ಚಳವನ್ನು ಪಡೆಯುವ ಮೂಲಕ ಬಡ್ತಿ ಹೊಂದುವ ಸಾಧ್ಯತೆಯು ಇದೆ.
ತುಲಾ ರಾಶಿ : ಈ ರಾಶಿಯವರಿಗೆ ಉದ್ಯೋಗ ಕ್ಷೇತ್ರದಲ್ಲಿ ಸ್ವಲ್ಪ ಮಟ್ಟಿಗೆ ಕಿರಿಕಿರಿಯ ಭಾವvವು ಉಂಟಾಗಬಹುದು. ಆದರೆ ಕುಟುಂಬದಲ್ಲಿ ಸಂಗಾತಿಯಿಂದ ಸಾಕಷ್ಟು ಬೆಂಬಲ ಮತ್ತು ಒಡನಾಟವು ಹೆಚ್ಚಾಗುತ್ತದೆ. ಈ ದಿನ ಅರ್ಧಕ್ಕೆ ನಿಂತಿರುವ ಕೆಲಸ ಕಾರ್ಯಗಳು ಪೂರ್ಣಗೊಳ್ಳುವ ಸಾಧ್ಯತೆಯು ಇದೆ. ಆದರೆ ಮಕ್ಕಳಿಂದ ಕಹಿ ಸುದ್ದಿಯನ್ನು ಕೆಲವು ದಿನವಾಗಲಿದೆ. ಈ ರಾಶಿಯವರು ತಮ್ಮ ತಂದೆ ತಾಯಿಯ ಜೊತೆಗೆ ಹೆಚ್ಚು ಸಮಯ ಕಳೆಯುತ್ತಾರೆ.
ವೃಶ್ಚಿಕ ರಾಶಿ : ಇಂದು ನೀವು ಸಾಮಾಜಿಕ ಕಾರ್ಯಗಳಲ್ಲಿ ಸಕ್ರಿಯವಾಗಿ ಭಾಗವಹಿಸುವ ಕಾರಣ ಗೌರವಕ್ಕೆ ಪಾತ್ರರಾಗಲಿದ್ದಾರೆ. ಈ ದಿನ ಹೊಸ ಸ್ನೇಹಿತರ ಭೇಟಿಯಾಗಬಹುದು. ಕುಟುಂಬ ಸದಸ್ಯರ ಜೊತೆಗೆ ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡಲಿದ್ದಾರೆ. ಆದರೆ ಉದ್ಯೋಗಿಗಳ ಕೆಲಸದ ಸ್ಥಳದಲ್ಲಿ ಕೆಲವು ಬದಲಾವಣೆಗಳಾಗಬಹುದು. ಹೀಗಾಗಿ ಸಹೋದ್ಯೋಗಿಗಳ ಮನಸ್ಥಿತಿಯ ಮೇಲೆ ಪರಿಣಾಮವನ್ನು ಬೀಳಲಿದೆ.
ಧನು ರಾಶಿ: ಹೊಸ ಯೋಜನೆಗೆ ಕೈಹಾಕುತ್ತಿದ್ದರೆ ಅಂದುಕೊಂಡಷ್ಟು ಲಾಭವನ್ನು ಸಿಗುವುದಿಲ್ಲ. ವ್ಯವಹಾರಗಳಲ್ಲಿ ಸ್ವಲ್ಪ ನಿರಾಸೆಯು ಆಗಬಹುದು. ಖರ್ಚು ವೆಚ್ಚ ಗಳು ಅಧಿಕವಾಗುವ ಕಾರಣ ಸ್ವಲ್ಪ ನಿಯಂತ್ರಣವನ್ನು ಹೊಂದಿರುವುದು ಒಳ್ಳೆಯದು. ಉದ್ಯೋಗಿಗಳು ಮಹಿಳಾ ಸ್ನೇಹಿತೆಯ ಸಹಾಯದಿಂದ ಇಂದು ಬಡ್ತಿ ಪಡೆಯುವ ಸಂಭವ ಹೆಚ್ಚು. ಉದ್ಯೋಗ ಸ್ಥಳಗಳಲ್ಲಿ ಅಧಿಕಾರಿಗಳ ಪ್ರಶಂಸೆಗೆ ಪಾತ್ರರಾಗಲಿದ್ದಾರೆ.
ಮಕರ ರಾಶಿ : ಈ ರಾಶಿಯವರಿಗೆ ಈ ದಿನ ಮಾನಸಿಕ ಕಿರಿಕಿರಿಯನ್ನುಂಟು ಮಾಡಲಿದೆ. ಪ್ರವಾಸಕ್ಕೆ ಹೋಗುವ ಪ್ಲಾನ್ ಇದ್ದರೆ ಸದ್ಯಕ್ಕೆ ಬೇಡ. ಸಹೋದರನ ಆರೋಗ್ಯದ ಬಗ್ಗೆ ಜಾಗರೂಕರಾಗಿರಬೇಕು. ಏಕಾಏಕಿ ಖರ್ಚು ವೆಚ್ಚಗಳು ಹೆಚ್ಚಾಗಲಿದೆ. ವ್ಯವಹಾರದಲ್ಲಿ ಯಾವುದೇ ಸವಾಲನ್ನು ತೆಗೆದುಕೊಳ್ಳಲು ಮುನ್ನ ಯೋಚಿಸಿ. ಸದ್ಯಕ್ಕೆ ಅಂತಹ ಸಾಹಸಕ್ಕೆ ಕೈ ಹಾಕುವುದು ಬೇಡ. ಈ ದಿನ ಯಾವುದೇ ಕೆಲಸ ಕಾರ್ಯಗಳನ್ನು ಆರಂಭಿಸಿದರೂ ಕೂಡ ಪೂರ್ಣವಾಗುವುದಿಲ್ಲ.
ಕುಂಭ ರಾಶಿ : ಈ ರಾಶಿಯವರಿಗೆ ಈ ದಿನ ದೊಡ್ಡ ಪ್ರಮಾಣದ ಹಣವನ್ನು ಪಡೆಯಬಹುದು. ಹೀಗಾಗಿ ಆರ್ಥಿಕ ಸಮಸ್ಯೆಗಳು ದೂರವಾಗಬಹುದು. ಮನೆಯಲ್ಲಿ ಯಾವುದೇ ವಿವಾದ ನಡೆಯುತ್ತಿದ್ದರೆ ಅದಕ್ಕೆ ಇಂದು ತೆರೆ ಬೀಳಲಿದೆ. ಉದ್ಯೋಗವನ್ನು ಹುಡುಕುತ್ತಿರುವವರಿಗೆ ಒಳ್ಳೆಯ ಅವಕಾಶಗಳು ಬರಲಿದೆ.
ಮೀನ ರಾಶಿ : ಈ ರಾಶಿಯವರಿಗೆಗೆ ಮಕ್ಕಳ ಕಡೆಯಿಂದ ಕೆಲವು ಸಂತೋಷದ ಸುದ್ದಿಗಳು ಕೇಳಿ ಬರಲಿದೆ. ಈಗಾಗಲೇ ದೀರ್ಘಕಾಲದ ಬಾಕಿ ಇರುವ ಕಾರ್ಯಗಳನ್ನು ಪೂರ್ಣಗೊಳಿಸುವ ಬಗ್ಗೆ ಚಿಂತೆಗೆ ಒಳಗಾಗುತ್ತಾರೆ. ಹೀಗಾಗಿ ಹೆಚ್ಚು ಒತ್ತಡಕ್ಕೆ ಸಿಲುಕುವುದು ಬೇಡ. ಉದ್ಯೋಗಿಗಳಿಗೆ ಇಂದು ಕೆಲವು ಪ್ರಮುಖ ಕೆಲಸಗಳನ್ನು ಹೆಗಲ ಮ್ಮೆಲೆ ಬೀಳಬಹುದು. ಅದಲ್ಲದೇ ಕುಟುಂಬದ ಸದಸ್ಯರ ಬಗ್ಗೆ ಚಿಂತೆ ಮಾಡಲಿದ್ದಾರೆ.