ಈ ಒಂದು ಕಾರಣಕ್ಕೆ ರಚಿತಾ ಇನ್ನೂ ಚಿತ್ರರಂಗದಲ್ಲಿದ್ದಾರೆ ಎಂದ ದುನಿಯಾ ವಿಜಯ್.. ಚಿತ್ರರಂಗದ ಕರಾಳ ಮುಖ ಬಿಚ್ಚಿಟ್ಟ ದುನಿಯಾ ವಿಜಯ್

ಇತ್ತೀಚಿಗೆ ರಚಿತಾ ರಾಮ್ ಹಾಗೂ ಡಾಲಿ ಧನಂಜಯ್ ಅಭಿನಯದ ‘ಮನ್ಸೂನ್ ರಾಗ’ ಸಿನಿಮಾ ಅದ್ದೂರಿಯಾಗಿ ಬಿಡುಗಡೆಯಾಗಿದ್ದು ಚಿತ್ರ ರಾಜ್ಯದ್ಯಂತ ಯಶಸ್ವಿ ಪ್ರದರ್ಶನ ಕಂಡಿತ್ತು. ಚಿತ್ರದ ಪ್ರೀ ರಿಲೀಸ್ ಈವೆಂಟ್‌ನಲ್ಲಿ ಸಿನಿಮಾತಂಡ ಅನೇಕ ಇಂಟ್ರಸ್ಟಿಂಗ್ ವಿಚಾರಗಳನ್ನು ರಿವೀಲ್ ಮಾಡಿದ್ದಾರೆ. ಅಂದಹಾಗೆ ದುನಿಯಾ ವಿಜಯ್ ಈ ಪ್ರೀ ರಿಲೀಸ್ ಈವೆಂಟ್‍‌ಗೆ ವಿಶೇಷ ಅತಿಥಿಯಾಗಿ ಭಾಗಿಯಾಗಿದ್ದರು. ಕಾರ್ಯಕ್ರಮದಲ್ಲಿ ದುನಿಯಾ ವಿಜಯ್ ರಚಿತಾ ರಾಮ್ ಅವರನ್ನು ಹಾಡಿಹೊಗಳಿದ್ದಾರೆ.

ರಚಿತಾ ರಾಮ್ ಇಷ್ಟು ವರ್ಷ ಸಿನಿಮಾರಂಗದಲ್ಲಿ ಇದ್ದಾರೆ ಅಂದರೆ ರಚಿತಾ ಎದೆಯಲ್ಲಿ ಮೋಸ ಇಲ್ಲ ಹಾಗಾಗಿ ಎಂದು ಹೇಳಿದ್ದಾರೆ. ಧನಂಜಯ್ ಮತ್ತು ದುನಿಯಾ ವಿಜಯ್ ಇಬ್ಬರೂ ವೇದಿಕೆಯಲ್ಲಿ ನಿಂತು ಮಾತನಾಡುವಾಗ ರಚಿತಾ ರಾಮ್ ಅವರನ್ನು ಹಾಡಿಹೊಗಳಿದರು. ರಚಿತಾ ಎದೆಯಲ್ಲಿ ಮೋಸ ಇಲ್ಲ. ಅದಕ್ಕೆ ಅವರು ಇನ್ನೂ ಚಿತ್ರರಂಗದಲ್ಲಿದ್ದಾರೆ’ ಎಂದು ಹೇಳಿದರು. ಅವರ ಕಣ್ಣುಗಳು ಪಳ ಪಳ ಅಂತ ಹೊಳೀತಾ ಇರುತ್ತೆ‌’ ಎಂದು ಹೇಳಿದ್ದಾರೆ.

ಇನ್ನು ನಟಿ ಸುಹಾಸಿನಿ ಬಗ್ಗೆಯು ದುನಿಯಾ ವಿಜಯ್ ಮಾತನಾಡಿದ್ದಾರೆ. ಅವರನ್ನು ಹಾಡಿ ಹೊಗಳಿದ್ದಾರೆ. ಭಗವಂತ ಮತ್ತೆ ನನಗೆ ಜನ್ಮ ಕೊಟ್ರೆ ಸುಹಾಸಿನಿ ಮೇಡಂ ಜೊತೆ ವಿಷ್ಣು ಸರ್ ಬಂಧನ ಪಾತ್ರ ಮಾಡ್ತೀನಿ. ಸುಹಾಸಿನಿ ಮೇಡಂ ಜೊತೆ ಒಂದ್ ಫೋಟೋ ತಗೋಬೇಕು’ ಅಂತ ದುನಿಯಾ‌ ವಿಜಯ್ ಹೇಳಿದರು. ಇನ್ನು ನಟ ಧನಂಜಯ್ ಕೂಡ ಮಾತನಾಡಿ ಮಾನ್ಸೂನ್ ರಾಗ ತುಂಬಾ ನೆನಪುಗಳನ್ನ ಕೊಟ್ಟಿದೆ.
ರಚಿತಾ ರಾಮ್ ಜೊತೆ ನಟಿಸಿದ್ದು ಖುಷಿಯಾಗಿದೆ. ರಚಿತಾ ಮನೆ ಮುಂದೆ ನಾವೆಲ್ಲಾ ಬೀಟ್ ಹಾಕ್ತಿದ್ವಿ ಅವಾಗ. ಕತ್ರಿ ಗುಪ್ಪೆಯಲ್ಲಿ ರಚಿತಾ ಇದ್ರು.

ಆಗ ಡಿಂಪಲ್ ಡಿಂಪಲ್‌ ಕಾಣುತ್ತಾ ಅಂತ ಮನೆ ಮುಂದೆ ಬೀಟ್ ಹಾಕ್ತಿದ್ವಿ’ ಎಂದು ಹೇಳಿದರು ಇನ್ನು ನಟ ಧನಂಜಯ್ ಸುಹಾಸಿನಿ ಅವರಿಗಾಗಿ ಹಾಡು ಹಾಡಿದರು. ಧನಂಜಯ್ ಅವರ ಕವಿತೆಗೆ ನೂರೊಂದು ನೆನಪು ಹಾಡನ್ನು ಸುಹಾಸಿನಿ ಹಾಡಿದ್ರು. ಧನಂಜಯ್ ಮತ್ತು ದುನಿಯಾ ವಿಜಯ್ ಹೊಗಳಿಗೆ ನಟಿ ರಚಿತಾ ರಾಮ್ ಎದ್ದು ಕೈ ಮುಗಿದರು. ಇನ್ನು ಮಾನ್ಸೂನ್ ರಾಗ ಮೂಲಕ ನಟಿ ಸುಹಾಸಿನಿ ಮತ್ತೆ ಅಭಿಮಾನಿಗಳ ಮುಂದೆ ಬಂದಿದ್ದಾರೆ. ಈ ಚಿತ್ರ ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನ ಕೂಡ ಕಂಡಿತ್ತು.

Leave a Reply

Your email address will not be published. Required fields are marked *