ಸ್ಯಾಂಡಲ್ ವುಡ್ ನಲ್ಲಿ ಕರಿ ಚಿರತೆ ಎಂದೇ ಖ್ಯಾತಿ ಗಳಿಸಿರುವ ದುನಿಯಾ ವಿಜಯ್ ಅವರು ಕಷ್ಟ ಪಟ್ಟು ಸಿನಿಮಾರಂಗದಲ್ಲಿ ಬದುಕು ಕಟ್ಟಿಕೊಂಡವರು. ನಟ ದುನಿಯಾ ವಿಜಯ್ ನೋಡುವುದಕ್ಕೆ ತುಂಬಾ ಒರಟು. Duniya Vijay ಆದರೆ ಮನಸ್ಸು ಮಾತ್ರ ತುಂಬಾ ಮೃದು. ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟು ಒಂದು ನೆಲೆ ಕಂಡು ಕೊಳ್ಳುವ ಮೊದಲು ಸಾಕಷ್ಟು ಕಷ್ಟವನ್ನು ಉಂಡಿದ್ದಾರೆ.
ಸಿನಿಮಾರಂಗದಲ್ಲಿ ದುನಿಯಾ ವಿಜಯ್ ಎಂದು ಗುರುತಿಸಿಕೊಂಡಿರುವ ಇವರ ರಿಯಲ್ ಲೈಫ್ ಹೆಸರು ಬಿ. ಆರ್ ವಿಜಯ್ ಕುಮಾರ್. ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟ ಮೇಲೆ ದುನಿಯಾ ವಿಜಯ್ ಎಂದೇ ಪರಿಚಿತರಾಗಿದ್ದಾರೆ. ಸಿನಿಮಾವೆಂದರೆ ಚಿಕ್ಕ ವಯಸ್ಸಿನಲ್ಲಿಯೇ ಅತೀವ ಆಸಕ್ತಿ. ಆದರೆ, ಅಪ್ಪನನ್ನು ಕಂಡರೆ ಭಯ ಹೆಚ್ಚು, ಅಪ್ಪನ ಕಣ್ಣು ತಪ್ಪಿಸಿ ಸಿನಿಮಾ ನೋಡುತ್ತಿದ್ದರು.

ಸಿನಿಮಾದಲ್ಲಿ ಆಸಕ್ತಿ ಬೆಳೆಸಿಕೊಂಡ ದುನಿಯಾ ವಿಜಯ್ ಅವರು, ಬಾಡಿ ಬಿಲ್ಡಿಂಗ್ ಮೂಲಕ ಫೈಟ್ ಅಸಿಸ್ಟೆಂಟ್ ಆಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ಆದರೆ ಇಂದು ನಟರಾಗಿ ಮಾತ್ರವಲ್ಲದೇ ನಿರ್ದೇಶಕರಾಗಿ ಗುರುತಿಸಿಕೊಂಡಿದ್ದಾರೆ. ಚಂದನವನದಲ್ಲಿ ದುನಿಯಾ ವಿಜಯ್ ಎಂದೇ ಖ್ಯಾತಿ ಗಳಿಸಿರುವ ಇವರ ಸಿನಿ ಜರ್ನಿ ಕಡೆಗೆ ಕಣ್ಣು ಹಾಯಿಸಿದರೆ.
ಚಿಕ್ಕ ವಯಸ್ಸಿನಲ್ಲಿಯೇ ಚಿತ್ರರಂಗಕ್ಕೆ ಪ್ರವೇಶ ಮಾಡಿದರು. ಹೌದು, ಜೋಗಿ, ರಂಗ ಎಸ್ಎಸ್ಎಲ್ ಸಿ, ಹೀಗೆ ಅನೇಕ ಚಿತ್ರಗಳಲ್ಲಿ ಚಿಕ್ಕ ಪಾತ್ರಗಳಲ್ಲಿ ನಟಿಸುವ ಮೂಲಕ ಸಿನಿ ಪರದೆಯ ಮೇಲೆ ಕಾಣಿಸಿಕೊಳ್ಳುತ್ತಿದ್ದರು. ಆದರೆ, 2007 ರಲ್ಲಿ ಸೂರಿ ಅವರ ನಿರ್ದೇಶನದಲ್ಲಿ ತೆರೆ ಕಂಡ, ದುನಿಯಾ ಚಿತ್ರದಲ್ಲಿ ನಾಯಕನಾಗಿ ಕಾಣಿಸಿಕೊಂಡರು.
ದುನಿಯಾ ಸಿನಿಮಾ ಇವರ ಸಿನಿ ಬದುಕಿಗೆ ಬಹುದೊಡ್ಡ ಬ್ರೇಕ್ ನೀಡಿತ್ತು. ಅಂದು ದುನಿಯಾ ಸಿನಿಮಾದಲ್ಲಿ ಸಿಕ್ಕ ಅವಕಾಶವನ್ನು ಬಳಸಿಕೊಂಡು ಇಂದು ಬಹು ಎತ್ತರಕ್ಕೆ ಬೆಳೆದಿದ್ದಾರೆ. ದುನಿಯಾ ಸಿನಿಮಾದ ನಂತರ ಅನೇಕ ಸಿನಿಮಾಗಳಲ್ಲಿ ನಟಿಸುವ ಅವಕಾಶವು ಒದಗಿ ಬಂತು. ಜರಾಸಂಧ, ಜಾನಿ ಮೇರಾ ನಾಮ್ ಪ್ರೀತಿ ಮೇರಾ ಕಾಮ್ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ನಾಯಕ ನಟನಾಗಿ ಕಾಣಿಸಿಕೊಂಡಿದ್ದಾರೆ.

ನಟನೆ ಮಾತ್ರವಲ್ಲದೇ ನಿರ್ದೇಶನದತ್ತ ಮುಖ ಮಾಡಿದ್ದು ಮೊದಲ ಬಾರಿಗೆ ಸಲಗ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ಅದಲ್ಲದೇ, ಸಂಸಾರದಲ್ಲಿನ ಕಲಹಗಳಿಂದಾಗಿ ಸುದ್ದಿಯಾದ ದುನಿಯಾ ವಿಜಯ್. ಹೌದು ಮೊದಲ ಪತ್ನಿ ನಾಗರತ್ನ ಡೈವೋರ್ಸ್ ನೀಡಿದರು. ಇದಾದ ಬಳಿಕ ಕೀರ್ತಿಯವರನ್ನು ಮದುವೆಯಾಗುವ ಮೂಲಕ ಸುಖವಾಗಿ ಸಂಸಾರ ನಡೆಸುತ್ತಿದ್ದಾರೆ. Duniya Vijay
ಈ ದಂಪತಿಗಳಿಗೆ ಇಬ್ಬರೂ ಮುದ್ದಾದ ಮಕ್ಕಳಿದ್ದು, ಅವರ ಹೆಸರು ಸಾಮ್ರಾಟ್ ವಿಜಯ್ ಹಾಗೂ ಮೊನಿಕಾ ವಿಜಯ್. ಸಿನಿಮಾರಂಗದಲ್ಲಿ ಬಹುಬೇಡಿಕೆಯ ನಟರಲ್ಲಿ ಒಬ್ಬರಾಗಿರುವ ದುನಿಯಾ ವಿಜಯ್ ಹಾಗೂ ಕೀರ್ತಿಯವರ ವಯಸ್ಸಿನ ಅಂತರ ಎಂಟು ವರ್ಷಗಳು. ಸಿನಿಮಾರಂಗದಲ್ಲಿ ಸಕ್ರಿಯರಾಗಿರುವ ದುನಿಯಾ ವಿಜಯ್ ಅವರಿಗೆ ಪತ್ನಿ ಕೀರ್ತಿಯವರು ಸಾಥ್ ನೀಡುತ್ತಿದ್ದಾರೆ.