ನುಗ್ಗೆಕಾಯಿ ಶಕ್ತಿ ಬಗ್ಗೆ ನಿಮಗೆ ಗೊತ್ತಿದೆ, ಆದರೆ ಇದರ ಸೊಪ್ಪಿನಲ್ಲಿ ಅಡಗಿರುವ ಲಾಭಗಳು ಒಂದೆರಡಲ್ಲ ಒಮ್ಮೆ ಉಪಯೋಗಿಸಿ ನೋಡಿ ಆರೋಗ್ಯ ಸಂಜೀವಿನಿ ಇದು!!

Drumstick-leaves Benefits; ನಾವು ನಮ್ಮ ಕೆಟ್ಟದಾಗಿರುವಂತಹ ಜೀವನ ಶೈಲಿ (Life style) ಹಾಗೂ ಆಹಾರ ಪದ್ಧತಿ (Food Style) ಯಿಂದಾಗಿ ಸಾಕಷ್ಟು ಅನಾರೋಗ್ಯವನ್ನು ತಂದುಕೊಳ್ಳುತ್ತೇವೆ. ಒಮ್ಮೆ ದೇಹದಲ್ಲಿ ಏನಾದರೂ ಆರೋಗ್ಯದಲ್ಲಿ ವ್ಯತ್ಯಾಸವಾದರೆ ಕೂಡಲೇ ವೈದ್ಯರ ಮೊರೆ ಹೋಗುತ್ತೇವೆ.

ಆದರೆ ಅದರ ಬದಲು ನಮ್ಮ ಸುತ್ತಮುತ್ತ ಇರುವಂತಹ ಸೊಪ್ಪು, ಗಿಡ, ಹೂವು, ಬಳ್ಳಿ ಮೊದಲಾದವುಗಳಲ್ಲಿ ಇರುವ ಔಷಧಿಯ ಗುಣಗಳ ಬಗ್ಗೆ ತಿಳಿದುಕೊಂಡು ಅವುಗಳನ್ನು ಹೆಚ್ಚಾಗಿ ಬಳಸಬೇಕು. ಇದರಿಂದ ಸಾಕಷ್ಟು ಸಮಸ್ಯೆಗಳನ್ನು ಒಂದು ರೂಪಾಯಿ ಖರ್ಚಿಲ್ಲದೆ ಕಡಿಮೆ ಮಾಡಿಕೊಳ್ಳಬಹುದು.. ಅಂತಹ ಒಂದು ಅತ್ಯದ್ಭುತವಾದಂತಹ ಸೊಪ್ಪು ಅಂದ್ರೆ ಅದು ನುಗ್ಗೆ ಸೊಪ್ಪು.

ಹೌದು ತೆಂಗಿನ ಮರದಂತೆ ನುಗ್ಗೆ ಮರದ ಪ್ರತಿಯೊಂದು ವಿಷಯಗಳು ಕೂಡ ಆರೋಗ್ಯಕರ ಪ್ರಯೋಜನಗಳನ್ನು ಹೊಂದಿವೆ, ನುಗ್ಗೆಸೊಪ್ಪು ನುಗ್ಗೆಕಾಯಿ, ನುಗ್ಗೆ ಕಾಂಡ, ಅಷ್ಟೇ ಯಾಕೆ ಅದರಿಂದ ಹೊರಬರುವ ಗೊದ್ದು ಅಥವಾ ಆರೋಗ್ಯಕ್ಕೆ ಬಹಳ ಪ್ರಯೋಜನವನ್ನು ನೀಡುತ್ತದೆ. ಹಾಗಾದರೆ ನುಗ್ಗೆ ಸೊಪ್ಪಿನಲ್ಲಿ ಇರುವಂತಹ ಆರೋಗ್ಯಕರ ಪಯೋಜನಗಳು ಯಾವವು ನೋಡೋಣ ಬನ್ನಿ.

ಮೊದಲನೆಯದಾಗಿ ನುಗ್ಗೆಕಾಯಿ ಪುರುಷರಿಗೆ ಹಾಗೂ ಮಹಿಳೆಯರಿಗೆ ಇಬ್ಬರಿಗೂ ಕೂಡ ಒಂದಲ್ಲ ಒಂದು ರೀತಿಯಲ್ಲಿ ಆರೋಗ್ಯಕರ ಪ್ರಯೋಜನಗಳನ್ನು ನೀಡುತ್ತದೆ ಪುರುಷರಲ್ಲಿ ಕಾಮೋದ್ರೇಕ (aphrodisiac) ಅಂಶ ಹೆಚ್ಚಿಸುವಲ್ಲಿ ನುಗ್ಗೆಕಾಯಿ ಸಹಾಯಮಾಡುತ್ತದೆ ಪುರುಷರಲ್ಲಿ ಇರುವಂತಹ ನೈಸರ್ಗಿಕ ನಪುಂಸಕತ್ವವನ್ನು ಇದು ನಿವಾರಣೆ ಮಾಡುತ್ತದೆ.

Drumstick leaves benefits
Drumstick leaves benefits

Drumstick-leaves Benefits; ದೇಹದಲ್ಲಿ ಇರುವ ಹಲವು ರೋಗಗಳನ್ನು ನಿವಾರಣೆ ಮಾಡುವುದಕ್ಕೆ ಇದೊಂದು ಸೊಪ್ಪು ಇದ್ರೆ ಸಾಕು ಎಲ್ಲಿ ಸಿಕ್ಕರು ತಪ್ಪದೆ ಮನೆಗೆ ತೆಗೆದುಕೊಂಡು ಬನ್ನಿ!?

ಇನ್ನು ಮಹಿಳೆಯರಿಗೂ ಕೂಡ ನುಗ್ಗೆಸೊಪ್ಪು ಬಹಳ ಉಪಯೋಗಕಾರಿ ಆಗಿದೆ ಹಾಗೂ ಮಗು ಹುಟ್ಟಿದ ನಂತರ ಬಾಣಂತಿಯಾಗಿದ್ದಾಗ ಎದೆಯ ಹಾಲನ್ನು ಹೆಚ್ಚಿಸಿಕೊಳ್ಳುವುದಕ್ಕೆ ನುಗ್ಗೆ ಸೊಪ್ಪನ್ನು ಆಹಾರ ಪದಾರ್ಥಗಳಲ್ಲಿ ಸೇರಿಸಿಕೊಳ್ಳುವುದು ಬಹಳ ಒಳ್ಳೆಯದು. ಬಾಣಂತಿಯರು ನುಗ್ಗೆ ಸೊಪ್ಪಿನ ಪಲ್ಯ ಮಾಡಿಕೊಂಡು ತಿಂದರೆ ಎದೆಯಲ್ಲಿ ಹಾಲು ಹೆಚ್ಚಾಗುತ್ತದೆ.

ಇನ್ನೂ ನುಗ್ಗೆ ಸೊಪ್ಪು ಅತ್ಯುತ್ತಮ ಜೀರ್ಣಕ್ರಿಯೆಯನ್ನು ಹೆಚ್ಚಿಸುವಂತಹ ಅಥವಾ ಉತ್ತಮಗೊಳಿಸುವಂತಹ ವಸ್ತು ಕೂಡ ಹೌದು. ನುಗ್ಗೆಕಾಯಿ ಹಾಗೂ ನುಗ್ಗೆ ಸೊಪ್ಪನ್ನು ಆಗಾಗ ಆಹಾರ ಪದಾರ್ಥಗಳಲ್ಲಿ ಸೇರಿಸಿದರೆ ಅದರಲ್ಲಿ ಇರುವಂತಹ ಕಬ್ಬಿಣದ ಅಂಶಗಳು ಹಾಗೂ ಇತರ ಸತ್ವಗಳು ಜೀರ್ಣಕ್ರಿಯೆಯನ್ನು ಸುಧಾರಿಸುತ್ತವೆ.

ಇನ್ನು ಮಹಿಳೆಯರಿಗೆ ಮುಟ್ಟಿನ ಸಮಯದಲ್ಲಿ ಕಾಣಿಸಿಕೊಳ್ಳುವಂತಹ ಕೆಳ ಹೊಟ್ಟೆ ನೋವನ್ನು ನಿವಾರಣೆ ಮಾಡುವ ಶಕ್ತಿ ಕೂಡ ನುಗ್ಗೆ ಸೊಪ್ಪಿನಲ್ಲಿ ಇದೆ. ನುಗ್ಗೆ ಸೊಪ್ಪಿನಲ್ಲಿ ಇರುವ ಆಂಟಿ ಆಕ್ಸಿಡೆಂಟ್ ಹಾಗೂ ಪ್ಲೇಮನೈಡ್ ಗಳು ಉರಿಯುತದ ಪ್ರಮಾಣವನ್ನು ಕಡಿಮೆ ಮಾಡುತ್ತದೆ ಇದರಿಂದ ಮಹಿಳೆಯರಲ್ಲಿ ಕಾಣಿಸಿಕೊಳ್ಳುವಂತಹ ಋತುಚಕ್ರದ ನೋವು ಕಡಿಮೆ ಆಗುತ್ತದೆ.

ಇನ್ನು ನುಗ್ಗೆ ಸೊಪ್ಪು ಕೂದಲಿನ ಆರೋಗ್ಯಕ್ಕೂ ಒಳ್ಳೆಯದು ಅಷ್ಟೇ ಅಲ್ಲದೆ ಮುಖದಲ್ಲಿ ಮೊಡವೆಗಳನ್ನು ನಿವಾರಿಸಿ, ಆರೋಗ್ಯಕರವಾಗಿಸುವಲ್ಲಿಯೂ ಕೂಡ ಬಹಳ ಮುಖ್ಯ ಪಾತ್ರ ವಹಿಸುತ್ತದೆ. ಚರ್ಮದ ಒಳಗೆ ಇರುವ ಜೀವನ ಕಡಿಮೆ ಮಾಡಿ ಮುಖದ ಮೇಲೆ ಮೊಡವೆ ಆಗದಂತೆ ನೋಡಿಕೊಳ್ಳುತ್ತದೆ. ಇನ್ನು ನುಗ್ಗೆ ಸೊಪ್ಪಿನ ಸೇವನೆಯಿಂದ ದೇಹದಲ್ಲಿ ಆಗುವ ಹಲವಾರು ಹಾರ್ಮೋನ್ ಬದಲಾವಣೆಗಳಿಂದ ಉಂಟಾಗುವ ಅನಾರೋಗ್ಯ ಸಮಸ್ಯೆಗಳನ್ನು ಕೂಡ ತಡೆಗಟ್ಟಬಹುದು.

Leave a Reply

Your email address will not be published. Required fields are marked *