ಬಿಗ್ ಬಾಸ್ ಮುಗಿಯುತ್ತಿದಂತೆ ಮತ್ತೊಂದು ರಿಯಾಲಿಟಿ ಶೋನಲ್ಲಿ ಶುರುವಾಯಿತು ಡ್ರೋನ್ ಪ್ರತಾಪ್ ” ಪ್ರತಾಪ”.

ಈಗಾಗಲೇ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಕನ್ನಡ ಕಿರುತೆರೆ ಅತ್ಯಂತ ಶ್ರೀಮಂತ ಹಾಗೂ ದೊಡ್ಡ ರಿಯಾಲಿಟಿ ಶೋ ಕಾರ್ಯಕ್ರಮ ಆಗಿರುವಂತಹ ಬಿಗ್ ಬಾಸ್ ಕನ್ನಡ ಸೀಸನ್ 10 ನಲ್ಲಿ ಕಾರ್ತಿಕ್ ಮಹೇಶ್ ಅವರು ವಿನ್ನರ್ ಹಾಗೂ ಡ್ರೋನ್ ಪ್ರತಾಪ್ ರವರು ಎರಡನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಈ ಫಲಿತಾಂಶದ ಬಗ್ಗೆ ಸಾಕಷ್ಟು ಜನರಲ್ಲಿ ವಾದ ಪ್ರತ್ಯಾರೋಪಗಳು ಈಗಲೂ ಕೂಡ ನಡೆಯುತ್ತಿವೆ.

ತಮ್ಮ ಡ್ರೋನ್ ವಿವಾದದಿಂದಾಗಿ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿ ಬಿಗ್ ಬಾಸ್ ಮನೆಗೆ ಆಯ್ಕೆಯಾಗಿದ್ದ ಪ್ರತಾಪ್ ರವರು ಕೊನೆಗೂ ಕೂಡ ಎರಡನೇ ಸ್ಥಾನ ಯಾಗಿ ಮನೆಯಿಂದ ಹೊರ ಬಂದಿರುವುದು ಅವರ ಅಭಿಮಾನಿಗಳಿಗೆ ಖುಷಿ ಕೊಟ್ಟಿದೆ. ಇನ್ನು ಕಿರುತೆರೆಯ ಕಾರ್ಯಕ್ರಮಗಳ ವಿಚಾರಕ್ಕೆ ಬಂದ್ರೆ ಕೇವಲ ಬಿಗ್ ಬಾಸ್ ಗೆ ಮಾತ್ರ ಸೀಮಿತವಾಗಿರದೆ ಮತ್ತೊಂದು ಕಾರ್ಯಕ್ರಮಕ್ಕೆ ಕೂಡ ಡ್ರೋನ್ ಪ್ರತಾಪ್ ರವರು ಆಯ್ಕೆಯಾಗಿದ್ದಾರೆ ಎಂಬುದಾಗಿ ತಿಳಿದು ಬಂದಿದ್ದು ಕಿರುತೆರೆಯ ಮೇಲೆ ಮತ್ತೆ ಹೆಚ್ಚಿನ ಸಮಯದವರೆಗೆ ಪ್ರತಾಪ್ ಅವರನ್ನು ಅವರ ಅಭಿಮಾನಿಗಳು ನೋಡಬಹುದಾಗಿದೆ.

ಕಲರ್ಸ್ ಕನ್ನಡ ವಾಹಿನಿಯ ಮತ್ತೊಂದು ಜನಪ್ರಿಯ ರಿಯಾಲಿಟಿ ಶೋ ಕಾರ್ಯಕ್ರಮ ಆಗಿರುವಂತಹ ಗಿಚ್ಚಿ ಗಿಲಿ ಗಿಲಿ ಕಾರ್ಯಕ್ರಮದಲ್ಲಿ ಡ್ರೋನ್ ಪ್ರತಾಪ್ ರವರು ಭಾಗವಹಿಸಲಿದ್ದಾರೆ ಹಾಗೂ ಈಗಾಗಲೇ ಇದರ ಚಿತ್ರಿಕರಣ ಇಂದಿನಿಂದ ಪ್ರಾರಂಭವಾಗಿದೆ ಎನ್ನುವುದಾಗಿ ಕೂಡ ವಾಹಿನಿಯ ಮೂಲಗಳಿಂದ ತಿಳಿದು ಬಂದಿದ್ದು ಡ್ರೋನ್ ಪ್ರತಾಪ್ ರವರನ್ನು ಇನ್ನಷ್ಟು ಮನೋರಂಜನಾತ್ಮಕವಾಗಿ ನೋಡಬಹುದು ಎನ್ನುವುದಾಗಿ ಅವರ ಅಭಿಮಾನಿಗಳು ಖುಷಿಯಾಗಿದ್ದಾರೆ.

ಡ್ರೋನ್ ಪ್ರತಾಪ್ ರವರ ಜೊತೆಗೆ ಗಿಚ್ಚಿ ಗಿಲಿ ಗಿಲಿ ಕಾರ್ಯಕ್ರಮದಲ್ಲಿ ಬಿಗ್ ಬಾಸ್ ಸ್ಪರ್ಧಿಗಳಾಗಿರುವಂತಹ ಇಶಾನಿ ಮೈಕಲ್ ಸೇರಿದಂತೆ ಇನ್ನೂ ಸಾಕಷ್ಟು ಜನರು ಭಾಗವಹಿಸಬಹುದು ಎಂಬುದಾಗಿ ಕಲರ್ಸ್ ಕನ್ನಡ ವಾಹಿನಿಯ ಮೂಲಗಳು ಸ್ಪಷ್ಟಪಡಿಸಿವೆ. ನೀವು ಕೂಡ ಡ್ರೋನ್ ಪ್ರತಾಪ್ ರವರಿಗಾಗಿ ಈ ಕಾರ್ಯಕ್ರಮವನ್ನು ವೀಕ್ಷಿಸುತ್ತಿರಾ ಎಂಬುದನ್ನು ಕಾಮೆಂಟ್ ಮಾಡುವ ಮೂಲಕ ತಿಳಿಸಬಹುದಾಗಿದೆ.

Leave a Reply

Your email address will not be published. Required fields are marked *