ಗಿಚ್ಚಿ ಗಿಲಿ ಗಿಲಿ ಕಾರ್ಯಕ್ರಮಕ್ಕೆ ಡ್ರೋನ್ ಪ್ರತಾಪ್ ಒಂದು ಎಪಿಸೋಡಿಗೆ ಎಷ್ಟು ಹಣ ಪಡಿತಾರೆ ಗೊತ್ತಾ?

ಇಲ್ಲೂ ದುಡ್ಡು ಬಿಡಲ್ಲ.ಡ್ರೋನ್ ಪ್ರತಾಪ್ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಬಿಗ್ ಬಾಸ್ ಮನೆಗೆ ಕಾಲಿಡುವುದಕ್ಕಿಂತ ಮುಂಚೇನೆ ತಮ್ಮ ಕೆಲವೊಂದು ತಪ್ಪು ಕೆಲಸಗಳಿಂದಾಗಿ ಸೋಶಿಯಲ್ ಮೀಡಿಯಾ ಹಾಗೂ ಸುದ್ದಿ ಮಾಧ್ಯಮಗಳಲ್ಲಿ ಸುದ್ದಿಯಾದವರು. ಒಂದು ಕಾಲದಲ್ಲಿ ಡ್ರೋನ್ ಪ್ರತಾಪ್ ರವರಿಗೆ ಇದ್ದಂತಹ ಮರ್ಯಾದೆ ಅವರ ಬಣ್ಣ ಬದಲಾಗುತ್ತಿದ್ದ ಹಾಗೆ ಯಾವ ರೀತಿಯಲ್ಲಿ ಜನರು ಅವರನ್ನು ಹೇಟ್ ಮಾಡುವುದಕ್ಕೆ ಪ್ರಾರಂಭಿಸಿದ್ರು ಅನ್ನೋದನ್ನ ನಾವು ನಿಮಗೆ ವಿಶೇಷವಾಗಿ ವಿವರಿಸಿ ಹೇಳಬೇಕಾದ ಅಗತ್ಯ ಇಲ್ಲ ಎನ್ನುವುದಾಗಿ ಭಾವಿಸುತ್ತೇವೆ.

ಇನ್ನು ಬಿಗ್ ಬಾಸ್ ಮನೆಗೆ ಹೋಗಿದ್ದೆ ಸಂದರ್ಭದಲ್ಲಿ ಕೂಡ ಆರಂಭಿಕ ದಿನಗಳಲ್ಲಿ ಬೇರೆ ಅಭ್ಯರ್ಥಿಗಳು ಡ್ರೋನ್ ಪ್ರತಾಪ್ ರವರನ್ನು ಟೀಕಿಸುತ್ತಿದ್ದ ಸಂದರ್ಭದಲ್ಲಿ ತಮ್ಮ ಸಂಪೂರ್ಣ ಬೆಂಬಲವನ್ನು ವ್ಯಕ್ತಪಡಿಸಿದ್ದರು. ಆದರೆ ದಿನ ಕಳೆದಂತೆ ಡ್ರೋನ್ ಪ್ರತಾಪ್ ರವರ ವಿರುದ್ಧವೂ ಕೂಡ ಜನರು ನೆಗೆಟಿವ್ ಆಗಿ ಯೋಚನೆ ಮಾಡುವುದಕ್ಕೆ ಪ್ರಾರಂಭಿಸುತ್ತಾರೆ.

ಬಿಗ್ ಬಾಸ್ ನ ಮಧ್ಯದವರೆಗೂ ಕೂಡ ಪ್ರತಿಯೊಬ್ಬರೂ ಡ್ರೋನ್ ಪ್ರತಾಪ್ ರವರು ಈ ಬಾರಿ ಗೆಲ್ಲುತ್ತಾರೆ ಎಂಬುದಾಗಿ ಭಾವಿಸಿದ್ದರು ಆದರೆ ಈಗ ಬಿಗ್ ಬಾಸ್ ಮುಗಿಯುತ್ತಿದ್ದಂತೆ ಡ್ರೋನ್ ಪ್ರತಾಪ್ ರವರು ಎರಡನೇ ಸ್ಥಾನವನ್ನು ಪಡೆದುಕೊಂಡಿರುವುದು ನಿಮಗೆಲ್ಲರಿಗೂ ಗೊತ್ತಿರುವ ವಿಚಾರವಾಗಿದೆ. ಇನ್ನು ಬಿಗ್ ಬಾಸ್ ಮುಗಿಯುತ್ತಿದ್ದಂತೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಾರಂಭ ಆಗಿರುವಂತಹ ಮತ್ತೊಂದು ಕಾರ್ಯಕ್ರಮ ಆಗಿರುವ ಗಿಚ್ಚಿ ಗಿಲಿ ಗಿಲಿ ಕಾರ್ಯಕ್ರಮದಲ್ಲಿ ಕೂಡ ಡ್ರೋನ್ ಪ್ರತಾಪ್ ರವರು ಕಾಣಿಸಿಕೊಳ್ಳುತ್ತಿದ್ದಾರೆ.

ಈ ಕಾರ್ಯಕ್ರಮದಲ್ಲಿ ಕಾಣಿಸಿಕೊಳ್ಳುವುದಕ್ಕಾಗಿ ಡ್ರೋನ್ ಪ್ರತಾಪ್ ರವರು ಪಡೆಯುವ ಸಂಭಾವನೆ ಬಗ್ಗೆ ಇವತ್ತಿನ ಈ ಲೇಖನಿಯಲ್ಲಿ ತಿಳಿದುಕೊಳ್ಳೋಣ ಬನ್ನಿ. ತಿಳಿದು ಬಂದಿರುವ ಮಾಹಿತಿಯ ಪ್ರಕಾರ ಪ್ರತಿ ಎಪಿಸೋಡಿಗೆ ಡ್ರೋನ್ ಪ್ರತಾಪ್ ರವರು 35 ರಿಂದ 40 ಸಾವಿರ ರೂಪಾಯಿಗಳ ಸಂಭಾವನೆಯನ್ನು ಪಡೆದುಕೊಳ್ಳುತ್ತಿದ್ದಾರೆ ಎಂಬುದಾಗಿ ತಿಳಿದು ಬಂದಿದೆ.

Leave a Reply

Your email address will not be published. Required fields are marked *