ಡ್ರೋನ್ ಪ್ರತಾಪ್ (Drone Prathap) ಯಾರಿಗೆ ತಾನೇ ಗೊತ್ತಿಲ್ಲ ಹೇಳಿ?. ಹೌದು, ತಾನೇ ಡ್ರೋನ್ ತಯಾರಿಸಿದ್ದೇನೆ ಎಂದು ಹೇಳಿದಲ್ಲದೆ ಯುವ ವಿಜ್ಞಾನಿ ಎಂದು ಜನರನ್ನು ನಂಬಿಸಿದ್ದ ಇವರು, ಇದೀಗ ಬಿಗ್ ಬಾಸ್ ಸೀಸನ್ 10 (Biggboss Sisan 10) ರ ಸ್ಪರ್ಧಿಯಾಗಿ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ಬಿಗ್ ಬಾಸ್ ಮನೆಯಲ್ಲಿಯು ಇತರ ಸ್ಪರ್ಧಿಗಳು ಡ್ರೋನ್ ಪ್ರತಾಪ್ ಅವರನ್ನು ಕಾಲೆಳುತ್ತಿದ್ದಾರೆ. ಇತ್ತ ಡ್ರೋನ್ ಪ್ರತಾಪ್ ಅವರು ಸೈಲೆಂಟ್ ಆಗಿದ್ದು ಎಲ್ಲರಿಂದಲೂ ದೂರವಿದ್ದಾರೆ.
ಆದರೆ ಇದೀಗ ಬಿಗ್ ಬಾಸ್ ಮನೆಗೆ ನಟಿ ತಾರಾ (Actress Tara) ರವರು ಬಂದಿದ್ದು ಅವರ ಮುಂದೆ ಡ್ರೋನ್ ಪ್ರತಾಪ್ ಕಣ್ಣೀರು ಹಾಕಿದ್ದಾರೆ. ಹಬ್ಬದ (Festival) ಪ್ರಯುಕ್ತ ತಾರಾ ವಿಶೇಷ ಅತಿಥಿಯಾಗಿ ಆಗಮಿಸಿದ್ದರು. ಈ ವೇಳೆಯಲ್ಲಿ ಡ್ರೋನ್ ಪ್ರತಾಪ್ ಅವರ ಬಳಿಯಲ್ಲಿ ಮುಕ್ತವಾಗಿ ಮಾತನಾಡಿದ್ದಾರೆ. ‘ನಿನಗೆ ಒಳ್ಳೆಯ ಅವಕಾಶ ಸಿಕ್ಕಿದೆ. ಜನರು ನಿನ್ನನ್ನು ಪ್ರೀತಿ ಮಾಡುತ್ತಿದ್ದಾರೆ. ನೀನು ಮಾ-ನಸಿಕವಾಗಿ ಎಷ್ಟು ಟಾ-ರ್ಚರ್ ಅನುಭವಿಸಿದ್ದೀಯಾ ಅನ್ನೋದು ನನಗೆ ಗೊತ್ತು. ನೀನು ತ-ಪ್ಪು ಮಾಡಿರಬಹುದು. ಈಗ ಒಂದು ಅವಕಾಶ ಸಿಕ್ಕಿದೆ. ಅಮ್ಮ ಅಂದ್ಕೊಂಡು ನನ್ನ ಬಳಿ ಹೇಳು’ ಎಂದಿದ್ದಾರೆ.
ಹೀಗೆ ಹೇಳುತ್ತಿದ್ದಂತೆ ಪ್ರತಾಪ್ ಕಣ್ಣಲ್ಲಿ ನೀರು ತುಂಬಿಕೊಂಡಿದ್ದು, ವಾಶ್ರೂಂ ಹೋಗಿ ಬರುತ್ತೇನೆ ಎಂದರೂ ನಟಿ ತಾರಾರವರು ಡ್ರೋನ್ ಪ್ರತಾಪ್ ಅವರನ್ನು ಬಿಡದೇ ಕೈಯನ್ನು ಗಟ್ಟಿಯಾಗಿ ಹಿಡಿದುಕೊಂದಿದ್ದು, ‘ನಿನಗೇ ಇಷ್ಟು ನೋವಾಗಿದೆ ಎಂದರೆ ಹೆತ್ತವರಿಗೆ ಎಷ್ಟು ನೋವಾಗಿರಬೇಡ ಹೇಳು’ ಎಂದಿದ್ದಾರೆ. ಹೀಗೆ ಎನ್ನುತ್ತಿದ್ದಂತೆ ಡ್ರೋನ್ ಪ್ರತಾಪ್ ಅವರು ತನ್ನ ಮನಸ್ಸಿನ ಎಲ್ಲಾ ನೋವನ್ನು ತಾರಾರವರ ಮುಂದೆ ತೆರೆದಿಟ್ಟಿದ್ದು, ‘ಅವರು ಎಷ್ಟು ನೋವು ಅನುಭವಿಸಿದ್ದಾರೆ ಅನ್ನೋದು ಗೊತ್ತು. ನಿನ್ನ ಮಗನನನ್ನು ಯಾಕೆ ಉಳಿಸಿದ್ದಿಯಾ. ಏನಾದರೂ ಹಾಕಿ ಸಾ-ಯಿಸಿಬಿಡು ಎಂದು ಹೇಳಿದ್ದರು.
ನಾನು ದುಡ್ಡು ಮಾಡಿದೀನಿ ಎನ್ನುವ ಆ-ರೋಪ ಇದೆ. ನನ್ನ ಅಮ್ಮ ಮದುವೆ, ಮುಂಜಿಗೆ ಹೋಗಲ್ಲ. ಇದಕ್ಕೆ ನಾನೇ ಕಾರಣ. ಈಗ ಊರಲ್ಲಿ ಅವರು ಒಂದು ಮನೆ ಕಟ್ಟಿದ್ದಾರೆ. ಅದರ ಗೃಹ ಪ್ರವೇಶಕ್ಕೆ ಕರೆದರು. ಆದರೆ, ನಾನು ಹೋಗಿಲ್ಲ. ನನ್ನ ಹೆಸರನ್ನು ಎಲ್ಲೂ ಹೇಳಬೇಡಿ ಎಂದೆ. ನನ್ನ ಅಪ್ಪ, ಅಮ್ಮ, ತಂಗಿ ನಂಬರ್ ಬ್ಲಾಕ್ ಮಾಡಿದೀನಿ’ ಎಂದು ಜೋರಾಗಿ ಅತ್ತಿದ್ದಾರೆ.
ಮದುವೆ ಆಗಬೇಕಿರುವ ತಂಗಿ ಇದ್ದಾಳೆ. ಅದಕ್ಕಾಗಿ ನಾನು ಕಂಪನಿ ಮಾಡಿದ್ದೀನಿ. ಕಂಪನಿಯನ್ನು ಬೆಳೆಸಬೇಕಿದೆ. ಡ್ರೋನ್ ಮಾಡ್ತಾ ಇದೀಯಾ ಅದನ್ನೇ ಮಾಡ್ಕೊಂಡು ಇರು ಬಿಗ್ ಬಾಸ್ಗೆ ಹೋಗಬೇಡ ಎಂದು ಮಾವನ ಮೂಲಕ ಮನೆಯವರು ಹೇಳಿಸಿದರು. ಆದರೆ, ನಾನು ಕೇಳಲಿಲ್ಲ. ಅಪ್ಪನ ನೋಡಬೇಕು ಎನಿಸುತ್ತಿದೆ’ ಎಂದಿದ್ದಾರೆ. ಈ ವೇಳೆಯಲ್ಲಿ ತನ್ನ ಮನೆಯವರನ್ನು ನೋಡಬೇಕು ಎನ್ನುವ ಇಂಗಿತವನ್ನು ಹೊರ ಹಾಕಿದ್ದು, ಅಪ್ಪ, ಅಮ್ಮ, ತಂಗಿನ ನೋಡುವುದಕ್ಕೆ ಒಂದು ಅವಕಾಶ ಮಾಡಿಕೊಡಿ’ ಎಂದು ತಾರಾ ಬಿಗ್ ಬಾಸ್ ಬಳಿ ಮನವಿ ಮಾಡಿಕೊಂಡಿದ್ದಾರೆ.
ಮತ್ತೆ ಪ್ರತಾಪ್ ಅವರ ಬಳಿಯಲ್ಲಿ ಬಂದರೆ ಭೇಟಿ ಮಾಡ್ತೀಯಾ ಎಂದು ತಾರಾ ಕೇಳಿದ್ದಕ್ಕೆ ಪ್ರತಾಪ್ ಇದಕ್ಕೆ ತಲೆ ಆಡಿಸಿದ್ದಾರೆ ‘ತಂಗಿ ಮದುವೆ, ನಿನ್ನ ಮದುವೆಗೆ ಆಮಂತ್ರಣ ನೀಡಬೇಕು’ ಎಂದು ಡ್ರೋನ್ ಪ್ರತಾಪ್ ಅವರ ಮನಸ್ಸಿನ ನೋವಿಗೆ ಸಾಂತ್ವಾನ ಹೇಳುವ ಪ್ರಯತ್ನವನ್ನು ನಟಿ ತಾರಾರವರು ಮಾಡಿದ್ದಾರೆ. ಡ್ರೋನ್ ಪ್ರತಾಪ್ ಹಾಗೂ ತಾರಾರವರ ಈ ಮಾತುಕತೆಯ ತುಣುಕು ಸೋಶಿಯಲ್ ಮೀಡಿಯಾಡಲ್ಲಿ ವೈರಲ್ ಆಗುತ್ತಿವೆ.