ಪ್ಲಾಸ್ಟಿಕ್ ಆರೋಗ್ಯಕ್ಕೆ ಹಾನಿಕರ ಯಾರು ಕೂಡ ಬಳಸಬೇಡಿ. ಪ್ಲಾಸ್ಟಿಕ್ ಅನ್ನು ದೂರವಿಡಿ ಅದರಲ್ಲಿ ಏನನ್ನು ತಿನ್ನಬೇಡಿ ಕುಡಿಯಬೇಡಿ ಎಂದು ಹಲವು ವಿಜ್ಞಾನಿಗಳು ಅಧ್ಯಯನದ ಮೂಲಕ ಸಾಬೀತುಪಡಿಸಿದ್ದಾರೆ ಆದರೂ ಕೂಡ ನಮ್ಮ ಜನ ಕೇಳುತ್ತಿಲ್ಲ ಪ್ಲಾಸ್ಟಿಕ್ ಅನ್ನು ಬಿಡುವುದಿಲ್ಲ ಅಂತಾರೆ. ಯಾರ ಮಾತುಗಳನ್ನು ಕೂಡ ಕೇಳದೆ ಸ್ವ ಇಚ್ಛೆಯಿಂದ ಪ್ಲಾಸ್ಟಿಕ್ ನ ಬಳಸುತ್ತಿದ್ದಾರೆ.
ಇನ್ನೂ ಹಲವಾರು ಕಂಪನಿಗಳಿಂದ ಸಿಗುವ ಕುಡಿಯುವ ನೀರನ್ನು ದೊಡ್ಡ ದೊಡ್ಡ ಕ್ಯಾನ್ ಗಳಲ್ಲಿ ತಂದು ಇಟ್ಟುಕೊಳ್ಳುತ್ತಾರೆ ಹಾಗೂ ಅದೇ ನೀರನ್ನು ವರ್ಷವಿಡಿ ಕುಡಿಯುತ್ತಾರೆ ಈ ರೀತಿಯಾಗಿ ಪ್ಲಾಸ್ಟಿಕ್ ಕ್ಯಾನಿನಿಂದ ನೀರನ್ನು ಕುಡಿದರೆ ಅಪಾಯ ಕಟ್ಟಿಟ್ಟ ಬುತ್ತಿ. ಇದರಿಂದ ನೀರು ಕುಡಿಯಬಾರದು ಅಂತ ತಜ್ಞರು ಭಾರಿ ಭಾರಿ ಸಾಬೀತುಪಡಿಸಿದ್ದಾರೆ.
ಇದರಿಂದ ಮನುಷ್ಯನ ಆರೋಗ್ಯದ ಮೇಲೆ ಅಷ್ಟೇ ಅಲ್ಲ ಪರಿಸರಕ್ಕೂ ಕೂಡ ಹಾನಿಯಾಗುತ್ತದೆ. ನೀರು ಖಾಲಿಯಾದ ಮೇಲೆ ಕ್ಯಾನ್ ನ್ನು ನಾವು ಪರಿಸರಕ್ಕೆ ಒಗೆಯುತ್ತೇವೆ. ಇದರಿಂದ ಪರಿಸರವೂ ಕೂಡ ಕಲುಷಿತಗೊಳ್ಳುತ್ತದೆ . ಹೆಚ್ಚು ಸಮಯಗಳ ಕಾಲ ಪ್ಲಾಸ್ಟಿಕ್ ನಿಂದ ನೀವು ನೀರನ್ನು ಕುಡಿದರೆ ಹಲವಾರು ಅಡ್ಡ ಪರಿಣಾಮಗಳನ್ನು ಎದುರಿಸಬೇಕಾಗಿತ್ತು, ಎಚ್ಚರ! ಇದರಿಂದ ರೋಗ ನಿರೋಧಕ ಶಕ್ತಿ ಕುಂಠಿತವಾಗುತ್ತದೆ.
ಬಹುತೇಕ ನೀವು ಪ್ಲಾಸ್ಟಿಕ್ ಕ್ಯಾನುಗಳನ್ನ ನೀರು ಕುಡಿಯಲು ಬಳಸುವುದರಿಂದ ಪುರುಷರಿಗೆ ಪುರುಷತ್ವದ ತೊಂದರೆ ಉಂಟಾಗಬಹುದು. ಹಾಗೂ ಕೆಲವೊಂದು ರಾಸಾಯನಿಕಗಳು ನೀರಿನ ಮೂಲಕ ದೇಹಕ್ಕೆ ಸೇರುವುದರಿಂದ ಕ್ಯಾನ್ಸರ್ ನಂತಹ ಮಾರಣಾಂತಿಕ ಕಾಯಿಲೆಗಳು ಕೂಡ ಬರುವ ಸಾಧ್ಯತೆ ಇರುತ್ತದೆ.
ಅಷ್ಟೇ ಅಲ್ಲದೆ ಹುಡುಗಿಯರಲ್ಲಿಯೂ ಕೂಡ ಹುಡುಗಿಯರು ಪ್ರೌಢಾವಸ್ಥೆಗೆ ಬಂದ ಮೇಲೆ ಕೆಲವು ಗಂಭೀರವಾದ ಸಮಸ್ಯೆಗಳನ್ನ ಎದುರಿಸಬೇಕಾಗಿ ಬರಬಹುದು. ಮಧುಮೇಹ ರಕ್ತ ಒತ್ತಡದಂತಹ ಗಂಭೀರ ಕಾಯಿಲೆಗಳು ಕೂಡ ಬರುವ ಸಾಧ್ಯತೆ ಇರುತ್ತದೆ. ಆರೋಗ್ಯ ಸರಿ ಇದ್ದರೆ ಮಾತ್ರ ಜೀವನ ಚೆನ್ನಾಗಿರುತ್ತೆ. ಪ್ಲಾಸ್ಟಿಕ್ ಕ್ಯಾನುಗಳಲ್ಲಿ ನೀರನ್ನ ಕುಡಿಯುವುದನ್ನು ಇಂದೇ ತಪ್ಪಿಸಿ. ನಮ್ಮ ಮಾಹಿತಿ ಇಷ್ಟವಾದಲ್ಲಿ ಲೈಕ್ ಮಾಡಿ ಹಾಗೂ ಶೇರ್ ಮಾಡಿ.