ಹಣ್ಣುಗಳಲ್ಲೇ ದುಬಾರಿ ಹಣ್ಣು ಎನಿಸಿಕೊಂಡಿರುವ ಡ್ರ್ಯಾಗನ್ ಫ್ರೂಟ್ ತಿಂದರೆ ಸಿಗುವ ಲಾಭಗಳ ಬಗ್ಗೆ ನಿಮಗೆ ಗೊತ್ತಾ? ತಪ್ಪದೇ ನೋಡಿ!!!

Dragon fruit benefits : (Dragon fruits) ಡ್ರ್ಯಾಗನ್ ಫ್ರೂಟ್ಸ್ ತಿಂದರೆ ಏನಾಗುತ್ತದೆ ಗೊತ್ತಾ?? ಈ ಹಣ್ಣನ್ನು ತಿನ್ನುವ ಪ್ರತಿಯೊಬ್ಬನೂ ತಿಳಿದುಕೊಳ್ಳಲೇ ಬೇಕಾದ ವಿಷಯ..ಮುಂಚಿನ ದಿನಗಳಲ್ಲಿ ದೊಡ್ಡ ದೊಡ್ಡ ನಗರಗಳಲ್ಲಿ ಮತ್ತು ಮಾಲ್ಗಳಲ್ಲಷ್ಟೇ ಕಂಡು ಬರುತ್ತಿದ್ದ ಡ್ರ್ಯಾಗನ್ ಫ್ರೂಟ್ಸ್ ಗಳು ಈಗ ಹಳ್ಳಿಗಳಿಗೂ ಹೆಜ್ಜೆ ಇಡುತ್ತಿವೆ. ಹೊರಮೈ ಬಣ್ಣವು ಗುಲಾಬಿಯಾಗಿದ್ದು, ಒಳಗಡೆ ಬಿಳಿ ಬಣ್ಣದ ತಿರುಳುಗಳಲ್ಲಿ ಕಪ್ಪು ಚುಕ್ಕೆಗಳಂತೆ ಕಂಡು ಚಿಕ್ಕ ಮಕ್ಕಳನ್ನು ಕೂಡ ಸೆಳೆಯುತ್ತವೆ. ಬೆಲೆಯಲ್ಲಿ ಕೊಂಚ ದುಬಾರಿ ಎನಿಸಿದರು ಆರೋಗ್ಯದ ದೃಷ್ಟಿಯಿಂದ ಹಿತವಾಗಿದೆ.

ಮೆಕ್ಸಿಕೋ ಹಾಗೂ ಮಧ್ಯ ಅಮೇರಿಕಾ, ಉಷ್ಣವಲಯಗಳಿಂದ ಮಾರುಕಟ್ಟೆಗೆ ಬರುತ್ತಿದ್ದ ಡ್ರ್ಯಾಗನ್ ಹಣ್ಣುಗಳು, ತನ್ನ ಔಷಧೀಯ ಗುಣಗಳಿಂದ ಜನಪ್ರಿಯಗೊಂಡಿದ್ದು ಇತ್ತೀಚಿಗೆ ಎಲ್ಲಾ ಕಡೆಗಳಲ್ಲಿಯೂ ಬೆಳೆಯಲು ಪ್ರಾರಂಭಿಸಿದ್ದಾರೆ. ಈ ಹಣ್ಣಿನಲ್ಲಿ ಪ್ರೋಟೀನ್ಸ್ (Proteins), ಕಾರ್ಬೋಹೈಡ್ರೇಟ್ಸ್(Carbohydrates), ಫೈಬರ್(Fibers), ಐರನ್ (Iron), ಮ್ಯಾಗ್ನಿಷಿಯಂ(Magnesium) ಹಾಗೂ ವಿಟಮಿನ್ ಸಿ(Vitamin C) ಇರುತ್ತವೆ.

ಕೆಲವು ಅಧ್ಯಯನಗಳು ಹೇಳುವ ಪ್ರಕಾರ, ರೋಗನಿರೋಧಕ ಶಕ್ತಿಯು ಕಡಿಮೆಯಾಗಲು ಅಥವಾ ರೋಗಗಳು ಕಾಣಿಸಿಕೊಳ್ಳಲು ಪ್ರಮುಖ ಕಾರಣವೆಂದರೆ ಬೇಡದ ವಸ್ತುಗಳು ಅಥವಾ ಮಲವು ದೇಹದಲ್ಲಿ ಶೇಖರಣೆಗೊಳ್ಳುವುದು.

ಡ್ರ್ಯಾಗನ್ ಫ್ರೂಟ್ಸ್ ಗಳಲ್ಲಿ ನಾರಿನಂಶವು ಹೆಚ್ಚಿನ ಪ್ರಮಾಣದಲ್ಲಿ ಇರುವುದರಿಂದ ಆಹಾರವು ಸಲೀಸಾಗಿ ಜೀರ್ಣಗೊಂಡು ಬೇಡದ ವಸ್ತುಗಳನ್ನು ದೇಹದಿಂದ ಹೊರ ಹಾಕಲು ಸಹಕರಿಸುತ್ತದೆ; ಇದರಿಂದ ಮಲಬದ್ಧತೆಯ ಸಮಸ್ಯೆಯು ದೂರವಾಗುತ್ತದೆ.

Dragon fruit benefits
Dragon fruit benefits

ಡ್ರ್ಯಾಗನ್ ಫ್ರೂಟ್ಸ್ ಗಳ ಸೇವನೆಯಿಂದ ಸಣ್ಣಪುಟ್ಟ ಹೃದಯದ ಸಮಸ್ಯೆಗಳು ಕಡಿಮೆಯಾಗುವುದರೊಂದಿಗೆ ಹೆಚ್ಚಿದ ಅಥವಾ ಕಡಿಮೆಯಾದ ರಕ್ತದ ಒತ್ತಡಗಳು ನಿಯಂತ್ರಣದಲ್ಲಿರುತ್ತದೆ. . ಮಧುಮೇಹದ ಅಪಾಯವನ್ನು ಕಡಿಮೆ ಮಾಡುತ್ತದೆ.. cancerಅಪಾಯವನ್ನು ಕಡಿಮೆ ಮಾಡುತ್ತದೆ.  immunity power ಹೆಚ್ಚು ಮಾಡುತ್ತೆ.

ಈ ಸಮಸ್ಯೆ ಇರೋರು ಬದನೆಕಾಯಿಯನ್ನು ತಿನ್ನಲೇಬೇಡಿ! ಯಾರು ಯಾರು ತಿನ್ನಬಾರದು ಗೊತ್ತಾ ಇಲ್ಲಿದೆ ನೋಡಿ !!!

ಡ್ರ್ಯಾಗನ್ ಹಣ್ಣುಗಳಲ್ಲಿರುವ ಆಂಟಿ ಆಕ್ಸಿಡೆಂಟ್(Anti oxidant) ಗುಣವು ಚರ್ಮವು ಸುಕ್ಕುಗಟ್ಟುವುದನ್ನು, ಜೋತು ಬೀಳುವುದನ್ನು ತಡೆಹಿಡಿಯುತ್ತವೆ. ಮುಪ್ಪಿನ ಲಕ್ಷಣಗಳನ್ನು ತಡೆಗಟ್ಟಿ ತಾರುಣ್ಯಭರಿತವಾಗಿ ಕಾಣುವಂತೆ ಮಾಡುತ್ತವೆ.

ಡ್ರ್ಯಾಗನ್ ಫ್ರೂಟ್ಸ್ ಗಳ ಸೇವನೆಯಿಂದ ಹಲವಾರು ಚರ್ಮರೋಗಗಳಿಂದ ದೂರವಿರಬಹುದು. ಪ್ರತಿನಿತ್ಯದ ನಿಯಮಿತವಾದ ಸೇವನೆಯಿಂದ ರಕ್ತ ಹೀನತೆಯ ಸಮಸ್ಯೆಯು ನಿವಾರಣೆ ಆಗುವುದು. ಇಷ್ಟೊಂದು ಆರೋಗ್ಯಕರವಾದ ಡ್ರ್ಯಾಗನ್ ಫ್ರೂಟ್ಸ್ ಗಳು ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

Leave a Reply

Your email address will not be published. Required fields are marked *